shivamogga bhadravathi news ಭದ್ರಾವತಿ ತಾಲ್ಲೂಕು ಮೂಲಕಟ್ಟೆ ಗ್ರಾಮದಲ್ಲಿ ಮೇಯುತ್ತಿದ್ದ ಹಸುವು, ವಸ್ತುವೊಂದು ಸ್ಫೋಟಗೊಂಡ ಪರಿಣಾಮ ಸಾವನ್ನಪ್ಪಿದೆ. ಇನ್ನೆರಡು ಹಸುಗಳು ಗಾಯಗೊಂಡಿವೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಹಂದಿ ಹೊಡೆಯಲು ಬಳಸಿದ್ದ ಸ್ಫೋಟಕ ಸಿಡಿದಿದೆ ಎನ್ನಲಾಗುತ್ತಿದೆ. ಪೇಪರ್ ಟೌನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳವನ್ನು ಸೀಲ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹೆಚ್ಚಿನ ವಿಷಯ ತಿಳಿದುಬಂದಲ್ಲಿ. ಇದು ಅಕಸ್ಮಾತ್ ಸ್ಫೋಟವೋ ಅಥವಾ ಉದ್ದೇಶಪೂರ್ವಕ ಕೃತ್ಯವೋ ಎಂಬುದನ್ನು ನಿರ್ಧರಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
shivamogga bhadravathi news / ವಿವಾಹಿತೆ ಆತ್ಮಹತ್ಯೆ
ಶಿವಮೊಗ್ಗದ ಹೊಳೆ ಹನಸವಾಡಿಯಲ್ಲಿ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ವಿವರವಾದ ತನಿಖೆ ನಡೆಸುತ್ತಿದ್ದಾರೆ. ಧಾರವಾಡ ಮೂಲದ ಯುವತಿ ,ಇಲ್ಲಿನ ಯುವಕನೊಂದಿಗೆ ಮದುವೆಯಾಗಿ ಕಳೆದ 5 ವರ್ಷಗಳಿಂದ ಸಂಸಾರ ನಡೆಸ್ತಿದ್ದರು. ಯುವತಿಯ ಸಾವಿಗೆ ಕಾರಣ ಸ್ಷಷ್ಟವಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತರೀಕೆರೆ ತಾಲೂಕು ಮುದ್ದುಗುಂಡಿ ತಾಂಡ್ಯದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಾಲಭಾದೆ ಕಾರಣ ಎನ್ನಲಾಗುತ್ತಿದೆ. ಮುದ್ದುಗುನಡಿ ತಾಂಡ್ಯ ತಿಮ್ಮನಾಯ್ಕ್ (65) ಮೃತರು. ಇವರ ಬ್ಯಾಂಕ್ ಸಾಲ ಸೆಟ್ಲಮೆಂಟ್ಗೆ ಬಂದಿತ್ತು. ಈ ಸಂಬಂದ ನೋಟಿಸ್ ಬಂಧ ಹಿನ್ನೆಲೆಯಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

shivamogga bhadravathi news