ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರ ಇದೀಗ ಕೇಂದ್ರ ಹಾಗೂ ರಾಜ್ಯದ ವಿವಾದಿತವಲ್ಲದ ಸಮಾಚಾರವಾಗಿ ಮಾರ್ಪಟ್ಟಿದೆ. ಜನರ ತೆರಿಗೆ ಹಣದಿಂದಲೆ ಎಲ್ಲಾ ಎನ್ನುವ ನಾಯಕರು, ನಿಲ್ದಾಣಕ್ಕೆ ಬೇಕಿರುವ ಕಲವೇ ಕೋಟಿಯ ಅನುದಾನದ ವಿಚಾರಕ್ಕೆ ಹಂಗಲ್ಲ, ಹಿಂಗಲ್ಲ ಅವರ ನಾವಾ ಅಂತೆಲ್ಲಾ ಚರ್ಚೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ಸಹ ಒಂದು ಘಟನೆ ನಡೆದಿದೆ.
ಇವತ್ತು ಬೆಳಗ್ಗೆ ರಾಜಕಾರಣದ ಮಾತು ಆರಂಭಿಸಿದ ಸಂಸದ ಬಿವೈ ರಾಘವೇಂದ್ರರವರು ನಿನ್ನೆ ದೆಹಲಿಯಿಂದ ಬರುವಾಗ ವಿಮಾನವು ಶಿವಮೊಗ್ಗದಲ್ಲಿ ಇಳಿಯದೆ ಹುಬ್ಬಳ್ಳಿಗೆ ಹೋಗಿ, ನಂತರ ರಸ್ತೆ ಮಾರ್ಗವಾಗಿ ಬರಬೇಕಾಯಿತು. ನಮ್ಮ ಶಿವಮೊಗ್ಗದಲ್ಲೇ ವಿಮಾನ ನಿಲ್ದಾಣ ಇದ್ದರೂ ಬೇರೆ ಕಡೆಯಿಂದ ಬರುವ ಪರಿಸ್ಥಿತಿ ಬಂದಿರುವುದು ತುಂಬಾ ನೋವುಂಟು ಮಾಡಿದೆ. ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟು ದೊಡ್ಡ ತಪ್ಪು ಮಾಡಿದೆ ಎಂದು ಸಂಸದನಾಗಿ ನನಗೆ ಅನಿಸುತ್ತಿದೆ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ (AAI) ಕೊಟ್ಟಿದ್ದರೆ ಎಲ್ಲವೂ ಬೇಗ ಆಗುತ್ತಿತ್ತು ಎಂದು ಅಸಮಾಧಾನ ಹೊರಹಾಕಿದ್ದರು.
ಅಲ್ಲದೆ ನೈಟ್ ಲ್ಯಾಂಡಿಂಗ್ಗಾಗಿ ಉಪಕರಣಗಳು ಬಂದು ಹಲವು ತಿಂಗಳುಗಳಾಗಿವೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅನುದಾನವೊಂದನ್ನ ಬಿಡುಗಡೆ ಮಾಡಬೇಕಿದೆ. ಆದರೆ ಅದನ್ನ ಬಿಡುಗಡೆ ಮಾಡುತ್ತಿಲ್ಲ. ಇದು ತಮ್ಮ ಅಸಮಾಧಾನಕ್ಕೆ ಕಾರಣ ಅಂತಾನೂ ಹೇಳಿದ್ದರು.

ಸಂಸದರ ಹೇಳಿಕೆಗೆ ಮಿನಿಸ್ಟರ್ ಆಕ್ರೋಶ /mp vs minister
ಇನ್ನೂ ಈ ಬಗ್ಗೆ ಇವತ್ತು ಶಿವಮೊಗ್ಗದಲ್ಲಿದ್ದ ಸಚಿವ ಮಧು ಬಂಗಾರಪ್ಪರವರು ಕೂಡ ಪೊಲಿಟಿಕಲ್ ಸ್ಟೇಟ್ಮೆಂಟ್ ನೀಡಿದ್ದಾರೆ
ರಾಜ್ಯ ಸರ್ಕಾರಕ್ಕೆ ವಿಮಾನ ನಿಲ್ದಾಣವನ್ನು ನೀಡಿದ್ದು ತಪ್ಪು ಎಂದು ರಾಘವೇಂದ್ರ ಹೇಳಿದ್ದಾರೆ. ಹಾಗಾದರೆ, ಅವರು ಅದನ್ನು ಅದಾನಿಗೆ ನೀಡಲು ಕೇಂದ್ರ ಸರ್ಕಾರಕ್ಕೆ ಕೊಡಬೇಕಿತ್ತಾ? ಅವರು ನಿರ್ಮಿಸಿದ ಎಷ್ಟು ವಿಮಾನ ನಿಲ್ದಾಣಗಳಿಂದ ಹಾರಿದ ವಿಮಾನಗಳು ಎಲ್ಲೆಲ್ಲಿ ಲ್ಯಾಂಡ್ ಆಗಿವೆ? ರಾಜ್ಯದ ಜನರು ಬೆವರು ಸುರಿಸಿ ತೆರಿಗೆ ಸಂಗ್ರಹಿಸುತ್ತಾರೆ. ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದ ಹಣದಿಂದ ನಿರ್ಮಿಸಲಾಗಿದೆ. ಆದರೆ, ಈಗ ಅದನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಿತ್ತಾ? ಎಂದಿದ್ದಾರೆ.
ವಿಮಾನ ನಿಲ್ದಾಣ ಆರಂಭಿಸುವಾಗ ರಾಘವೇಂದ್ರ ಅವರು ನೈಟ್ ಲ್ಯಾಂಡಿಂಗ್ ವ್ಯವಸ್ಥೆಯನ್ನು ಯಾಕೆ ಮಾಡಲಿಲ್ಲ? ಆಗ ಅವರಿಗೆ ಈ ಬಗ್ಗೆ ಗೊತ್ತಿರಲಿಲ್ಲವೇ? ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದಾಗ ಒಂದು ವಾಣಿಜ್ಯ ವಿಮಾನವಾದರೂ ಬಂದಿತ್ತಾ? ನಮ್ಮ ಸರ್ಕಾರ ಬಂದ ನಂತರವೇ ಇಲ್ಲಿ ವಾಣಿಜ್ಯ ವಿಮಾನಗಳು ಸಂಚರಿಸುತ್ತಿವೆ. ನಮ್ಮ ಸರ್ಕಾರ ಬಂದ ಬಳಿಕವೇ ನೈಟ್ ಲ್ಯಾಂಡಿಂಗ್ಗೆ ಅಗತ್ಯವಾದ ಪರಿಕರಗಳು ಬಂದಿವೆ ಎಂದು ಸಮರ್ಥಿಸಿಕೊಂಡರು.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
