ಸದ್ಯ ಟ್ರೆಂಡ್​ನಲ್ಲಿದ್ದಾರೆ 73ರ ಬಾಡಿಬಿಲ್ಡರ್​ ರಾಮಪ್ಪ! ವಯಸ್ಸಿಗೆ ಸೆಡ್ಡು ಹೊಡೆದ ಇವರ ಕಥೆ ಗೊತ್ತಾ! ಇವರು ಶಿವಮೊಗ್ಗದವರು!

ajjimane ganesh

Ramappa Inspiring Story ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಸಿಸ್ಟಮ್​ ಮುಂದೆ ಕುಳಿತು ಬಿಟ್ಟರೆ, ಹೊತ್ತೋಗೋದೆ ಗೊತ್ತಾಗೋಲ್ಲ ಅನ್ನೋದು ಈಗಿನ ಕಾಲದ ಕಾಮನ್​ ನಾಣ್ಣುಡಿ.ಈ ಮಾತಿನ ನಡುವೆ ದೇಹಕ್ಕೆ ಚೂರು ಕೆಲಸ ಕೊಡಬೇಕು, ಕೋಡೋಣ ಅನ್ನುವುದಕ್ಕೆ ಟೈಮೇ ಸಿಗಲ್ಲ. ಹಾಗಾಗಿ ಬಾಡಿಗಾಡಿನ ಲೋಡ್ ಮಾಡಿ, ಮತ್ತೆ ನಾಳಿನ ಷೆಡ್ಯೂಲ್​ಗೆ ಮೈಂಡ್ ಅಲಾರಾಂ ಫಿಕ್ಸ್ ಮಾಡ್ಕೊಂಡು ಮಲಗೋದರೊಂದಿಗೆ ಆ ದಿನದ ದೈನಂದಿನ ಪ್ಲಾನ್​ ಆಫ್​ ಆಕ್ಷನ್​ ದಿ ಏಂಡ್ ಕಾಣುತ್ತೆ.. ಎಲ್ಲರದ್ದೂ ಅಲ್ಲದಿದ್ರೂ ಆಲ್ಮೋಸ್ಟ್ ಎನ್ನುವಷ್ಟು ಜನರ ಡೈಲಿ ಪ್ರೋಗ್ರಾಮ್​ ಲಿಸ್ಟ್​ನಲ್ಲಿ ವ್ಯಾಯಾಮ ಅನ್ನೋದು ಇರೋದಿಲ್ಲ.

ಇದನ್ನ ದೂರೋದಕ್ಕೂ ಆಗೋದಿಲ್ಲ ಬಿಡಿ. ಇಷ್ಟಕ್ಕೂ ಈ ಸ್ಕ್ರಿಪ್ಟ್​ನಲ್ಲಿ ಇಷ್ಟೆಲ್ಲಾ ಯಾಕೆ ಪೀಠಿಕೆ ಅನ್ನೋ ಮಾತಿಗೆ ಬರುವುದಾದರೆ, ಸ್ನೇಹಿತರೇ ಸದ್ಯ 73 ವರುಷದ ಯಂಗ್​ ಮ್ಯಾನ್​ ಒಬ್ಬರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಹಿಟ್ ಆಗ್ತಿದ್ದಾರೆ. ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ನಾವು ಹೀಂಗಿದ್ರೆ ಚೆನ್ನಾಗಿರುತ್ತಲ್ವಾ ಅನ್ನೋ ಚರ್ಚೆ 80-90 ರಲ್ಲಿ ಹುಟ್ಟೋದರೆಲ್ಲಾ ಚರ್ಚೆ ಮಾಡ್ತಿದ್ದಾರೆ. ಆ ಕಾರಣಕ್ಕೆ ಕುತೂಹಲ ಕೆರಳಿ, ಯಾರಿವರು ಅಂತಾ ಚೆಕ್ ಮಾಡ್ತಾ, ಇನ್​ಸ್ಟಾಗ್ರಾಂ ಸ್ಕ್ರೋಲ್ ಮಾಡ್ತಾ ಇದ್ದಾಗ, ಟ್ರೆಂಡ್ ಆಗ್ತಿರೋ ವ್ಯಕ್ತಿ ಶಿವಮೊಗ್ಗದವರು ಅನ್ನೋದು ಗೊತ್ತಾಯ್ತು! ಹಾಗಾಗಿ ಇವರ ಬಗ್ಗೆ ಯಾಕೆ, ನಮ್ಮೂರಿನವರಿಗೆ ತಿಳಿಸ್ಬಾರದು..ನಮ್ಮ ಊರಿನ ಜನ ಅಂದ್ಮೇಲೆ! ಅಂತಾ ಅಂದ್ಕೊಂಡು ಸುದ್ದಿಗೊಂದು ಪೀಠಿಕೆ ಹಾಕಿ, ವಿಷಯ ಆರಂಭಿಸಿದ್ದೇನೆ.. 

ಸೊರಬ-ಸಾಗರ ರಸ್ತೆಯಲ್ಲಿ ಬೈಕ್ ಅಪಘಾತ: ಹಿಂಬದಿ ಸವಾರ ಸಾವು

ಅಂದಹಾಗೆ, ವಿಷಯಕ್ಕೆ ಬರೋಣ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು ಅನ್ನೋ ಹೆಸರಿನ ರಿಯಾಲಿಟಿ ಶೋವೊಂದು ಬಂದಿತ್ತು. ಅದರಲ್ಲಿ ರಘು ರಾಮಪ್ಪ ಎಂಬ ಹ್ಯಾಂಡ್​ಸಮ್​ ಮ್ಯಾನ್​ ಪಾಲ್ಗೊಂಡಿದ್ದರು. ಬಾಡಿ ಬಿಲ್ಡಿಂಗ್​ನಲ್ಲಿ ಅತ್ಯುದ್ಬುತ ಸಾಧನೆ ಮಾಡಿರುವ ಇವರು ನ್ಯೂಜಿಲೆಂಡ್​ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ನ್ಯಾಚುರಲ್ ಬಾಡಿಬಿಲ್ಡಿಂಗ್‌ನಲ್ಲಿ ಎರಡೆರಡು ಮೆಡಲ್​ ತಗೊಂಡಿದ್ದವರು. ವಿಶೇಷ ಅಂದರೆ, ಇವರ ಇನ್​ಸ್ಟಾಗ್ರಾಮ್​ ಪೋಸ್ಟ್​ನಿಂದಲೇ ಇನ್ನೊಬ್ಬರು ವ್ಯಕ್ತಿ ಇದೀಗ ಸೋಶಿಯಲ್ ಮೀಡಿಯಾ ಟ್ರೆಂಡ್​ ಆಗುತ್ತಿದ್ದಾರೆ. ಅಷ್ಟೆ ಅಲ್ಲದೆ ಜೆಂಜಿ ಪೀಪಲ್ಸ್​ ಇನ್​​ಪ್ಯೂಯೆನ್ಸರ್​ ಸಹ ಆಗಿದ್ದಾರೆ. ಸದ್ಯ ಇವರನ್ನ ಯುವಕನೊಬ್ಬ ಸಂದರ್ಶನ ಮಾಡಿದ್ದು  ಆ ವಿಡಿಯೋ ಸಖತ್ ಆಗಿ ವೈರಲ್​ ಆಗುತ್ತಿದೆ. 

ಫೋಟೋ ಹಿಡ್ಕಾ..! ಸಕ್ರೆಬೈಲ್​ ಉಬ್ಬು ಹತ್ರ ಕಾಡಾನೆ ಕಾಣ್ತು! ತೀರ್ಥಹಳ್ಳಿ ರೋಡಲ್ಲಿ ಜಾಗ್ರತೆ

ವಿಷಯ ಇನ್ನು ಎಳೆಯಲ್ಲ! ಹೀಗೆ ವೈರಲ್​ ಆಗುತ್ತಿರುವ ವ್ಯಕ್ತಿಯ ಹೆಸರು ರಾಮಪ್ಪ, ರಘುರಾಮಪ್ಪರವರ ತಂದೆ! 73 ವರ್ಷದ ಇವರನ್ನ ನೋಡಿದ್ರೆ ! ಏನ್ ಮಹಾ ಅಂದರೆ ನಲವತ್ತು ದಾಟಿರಬಹುದು ವಯಸ್ಸು ಅಷ್ಟೆ! ಅಂತಾ ಅನಸಿತ್ತು! ಅಷ್ಟು ಹ್ಯಾಂಡ್​ಸಮ್ ಆಗಿದ್ದಾರೆ. ಅಲ್ಲದೆ ಬಾಡಿ ಬಿಲ್ಡಿಂಗ್​ನಲ್ಲಿ ಇವರ ಪ್ರದರ್ಶನ ನೋಡಿದ್ರಂತೂ ವಯಸ್ಸು ಅನ್ನೋದು ಕೇವಲ ನಂಬರ್ ಅನ್ನೋದು ನಿಜವೆ ಇರಬಹುದು ಎನ್ನುವ ಡೌಟ್ ಆಗುತ್ತೆ. 

ವಿದೇಶದಲ್ಲಿ ಉದ್ಯೋಗದ ಆಮಿಷ : ಸೊರಬಾ ವ್ಯಕ್ತಿಗೆ ಲಕ್ಷಾಂತರ ರೂಪಾಯಿ  ವಂಚನೆ

ವಿಶೇಷದ ವಿಷಯ ಏನು ಅಂದರೆ, ಈ ರಾಮಪ್ಪೋರು ನಮ್ಮ ಶಿವಮೊಗ್ಗದವರು. ಹೌದು  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು, ತವನಂದಿ ಗ್ರಾಮ ರಾಮಪ್ಪನವರ ಮೂಲ ಅಡ್ರೆಸ್​. ಸದ್ಯ ಬೆಂಗಳೂರಿನಲ್ಲಿದ್ದಾರೆ. 1976 ರಲ್ಲಿ ಕೆಲಸಕ್ಕೆ ಸೇರಿದ ಇವರು, ಯಾವುದೋ ಬಾಡಿ ಬಿಲ್ಡಿಂಗ್​ ಸ್ಪರ್ಧೆ ನೋಡಿ ಅದರಿಂದ ಇನ್​ಸ್ಪೈರ್ ಆಗಿ ತಾವು ಕೂಡ ಬಾಡಿ ಬಿಲ್ಡ್ ಮಾಡೋಕೆ ಆರಂಭಿಸಿದ್ದರು. ಈ ಪ್ರಯಾಣ ಇಲ್ಲಿವರೆಗೂ ಮುಂದುವರಿದೆ. ಬರೋಬ್ಬರಿ 50 ವರ್ಷಗಳ ಕಾಲ ದೇಹವನ್ನು ಹುರಿಯಾಗಿಯೇ ಇರಿಸಿಕೊಂಡಿರುವ ರಾಮಪ್ಪನವರು (Ramappa Inspiring Story) ಶಿವಮೊಗ್ಗದಲ್ಲಿಯು ಹಲವು ಪ್ರಶಸ್ತಿ ಗೆದ್ದಿದ್ದಾರೆ. ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದ ಇವರು ತಮ್ಮಂತೆ ತಮ್ಮ ಮಗನನ್ನು ಸಹ ಅಂತರಾಷ್ಟ್ರೀಯ ಬಾಡಿ ಬಿಲ್ಡರ್ ಆಗಿ ತಯಾರು ಮಾಡಿದ್ದಾರೆ. ಅಲ್ಲದೆ ತಮ್ಮ ಮಗನ ಟ್ರೈನಿಂಗ್​ನಲ್ಲಿ ಜಿಮ್​ನ ಅತ್ಯಾದುನಿಕ ಟೆಕ್ನಾಲಿಜಿಗೆ ಒಗ್ಗಿಕೊಂಡು ರಾಮಪ್ಪ, ಮಗನನ್ನು ನಾಚಿಸುವಂತೇ ಸಾಧನೆ ಮಾಡಿದ್ದಾರೆ. 

ಮುಂಬೈ ಕ್ರೈಂ ಪೊಲೀಸ್​ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ 51 ಲಕ್ಷ ರೂಪಾಯಿ ವಂಚನೆ : ಏನಿದು ಪ್ರಕರಣ

ಭಾರತೀಯ ದೂರವಾಣಿ ಕೈಗಾರಿಕ ನಿಗಮದಲ್ಲಿ ಉದ್ಯೋಗಿಯಾಗಿದ್ದ ಇವರು 2011 ರ ಲ್ಲಿ ನಿವೃತ್ತರಾಗಿ ಆನಂತರ ಕೆಲಕಾಲ ಸೊರಬದ ತವನಂದಿಯಲ್ಲಿದ್ದರು. ಅಲ್ಲಿ ಕೃಷಿ ಮಾಡುತ್ತಾ! ತಮ್ಮ ಬಾಡಿಬಿಲ್ಡಿಂಗ್ ಮುಂದುವರಿಸಿದ್ದರು. ಸದ್ಯ ಬೆಂಗಳೂರಿನಲ್ಲಿ ತಮ್ಮ ಪುತ್ರನ ಜೊತೆಗಿರುವ ಇವರು, ಸದ್ಯ ಸೋಶೀಯಲ್ ಮೀಡಿಯಾದ ಹಾಟ್ ಫೇವರಿಟ್ ಟ್ರೆಂಡ್ ಆಗಿದ್ದಾರೆ. ಅದರಲ್ಲಿಯು ಸನಾತನ ಹೆಸರಿನ ಟ್ವಿಟರ್​ ಅಕೌಂಟ್​ನಲ್ಲಿ ಕಾಣ ಸಿಕ್ಕಿರುವ ಇವರ ಸಂದರ್ಶನದ ತುಣುಕು ಎಲ್ಲೆಡೆ  ಷೇರ್ ಆಗುತ್ತಿದೆ. ವಿಡಿಯೋದಲ್ಲಿ ಇಲ್ಲದಿದ್ದನ್ನೆಲ್ಲಾ ತಿನ್ನಬೇಡಿ ಎನ್ನುವ ರಾಮಪ್ಪ ನಮ್ಮೂರು ಶಿವಮೊಗ್ಗ , ಸೊರಬ ತಾಲ್ಲೂಕು ಅನ್ನುವಾಗ ಒಂಥರಾ ಖುಷಿಯಾಗ್ತಿದೆಯಷ್ಟೆ ಅಲ್ಲದೆ, ಶಿವಮೊಗ್ಗದವರು ಅಂದ್ಮೇಲೆ ಏನ್ ಕಮ್ಮಿನಾ ಕಾಮೆಂಟ್​ ಮಾಡಲೇಬೇಕು ಅಂತನಿಸ್ತಿದೆ. 

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್, ಬಿಗ್​ ಸುದ್ದಿ  

73-Year-Old Ramappa Wins Gold with Son's Coaching: An Inspiring Bodybuilding Journey
Ramappa Inspiring Story
73-Year-Old Ramappa Wins Gold with Son's Coaching: An Inspiring Bodybuilding Journey
73-Year-Old Ramappa Wins Gold with Son’s Coaching: An Inspiring Bodybuilding Journey
73-year-old Ramappa, coached by his son Raghu Ramappa, wins gold in National Bodybuilding Championship. Read about his inspiring journey and public service.
Ramappa Inspiring Story
73 ವರ್ಷದ ರಾಮಪ್ಪನವರು:
73 ವರ್ಷದ ರಾಮಪ್ಪನವರು:
73-Year-Old Ramappa Wins Gold with Son's Coaching: An Inspiring Bodybuilding Journey
73-Year-Old Ramappa Wins Gold with Son’s Coaching: An Inspiring Bodybuilding Journey Ramappa Inspiring Story

ಟ್ರೆಂಡ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ

ರಾಮಪ್ಪರವರ ಇನ್​ಸ್ಟಾಗ್ರಾಮ್ ಅಕೌಂಟ್​ : https://www.instagram.com/ramappasorab/

ಫೋಟೋಗಳ ಮೂಲ: ಫೇಸ್​ಬುಕ್​

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, Ramappa Inspiring Story
Share This Article