ಕುಮುಟಾ ವ್ಯಕ್ತಿ ಸಾಗರದಲ್ಲಿ ಸಾವು | ಭದ್ರಾವತಿಯಲ್ಲಿ ಲಾರಿಗೆ ಮಹಿಳೆ ಬಲಿ | KSRTC ಬಸ್ ಲಾರಿ ನಡುವೆ ಡಿಕ್ಕಿ 

shivamogga Mar 16, 2024  ಲಾರಿಗೆ ಮಹಿಳೆ ಬಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಗರದ ನ್ಯಾಯಾಲಯ ಮುಂಭಾಗದ ರಸ್ತೆಯಲ್ಲಿ ಮಹಿಳೆಯೊಬ್ಬರು ಸರಕು ತುಂಬಿದ ಲಾರಿಗೆ ಸಿಲುಕಿ ಮೃತಪಟ್ಟಿದ್ದಾರೆ. ಹೊಸಮನೆ ನಿವಾಸಿ ವಿಜಯಲಕ್ಷ್ಮೀ (70) ಮೃತರು. ಕೆಲಸಕ್ಕಾಗಿ ತೆರಳುತ್ತಿದ್ಧಾಗ  ಈ ದುರ್ಘಟನೆ ಸಂಭವಿಸಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಕುಮಟಾ ವ್ಯಕ್ತಿ ಆತ್ಮಹತ್ಯೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿ ಆಲಳ್ಳಿ ಸಮೀಪ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಹೆಸರು ಉಪೇಂದ್ರ (45), ಕುಮಟಾ … Read more

KSRTC ಬಸ್​ ನಿಲ್ದಾಣದಲ್ಲಿ ಬೈಕ್​ ನಿಲ್ಲಿಸಿ ಶಿವಮೊಗ್ಗಕ್ಕೆ ಹೋಗಿ ಬಂದು ನೋಡುವಾಗ ಕಾದಿತ್ತು ಶಾಕ್

shivamogga Mar 13, 2024 Bhadravathi New Town police station  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಬೈಕ್ ಕಳ್ಳತನವಾಗಿರುವ ಬಗ್ಗೆ ಭದ್ರಾವತಿ ನ್ಯೂಟೌನ್​ ಪೊಲೀಸ್​ ಸ್ಟೇಷನ್​ನಲ್ಲಿ  Bhadravathi New Town PS  ಕೇಸ್ ದಾಖಲಾಗಿದೆ.  ಭದ್ರಾವತಿ ತಾಲ್ಲೂಕು ಬಾಬಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಕಳೆದ ದಿನಾಂಕ:10-03-2024 ರಂದು ಸುಮಾರು 4.00 ಗಂಟೆಗೆ KA 14  ET 0868 HONDA DREAM NEO ಬೈಕ್ ಅನ್ನು ಭದ್ರಾವತಿಯ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ದ ಬಳಿ … Read more

DYSP ಕಚೇರಿ ಆವರಣದಲ್ಲಿ ಕಾಣಿಸಿಕೊಂಡ ನಾಗರಹಾವು!

Shivamogga Feb 24, 2024   ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಡಿವೈಎಸ್​​ಪಿ ಕಚೇರಿ ಆವರಣದಲ್ಲಿ ಹಾವೊಂದು ಕಾಣಿಸಿಕೊಂಡು ಅವಾಂತರಕ್ಕೆ ಕಾರಣವಾಗಿತ್ತು.  ಭದ್ರಾವತಿ: ನಗರದ ನ್ಯೂಟೌನ್- ಉಂಬೇಬೈಲ್ ರಸ್ತೆಯ ಡಿವೈಎಸ್‌ಪಿ ಕಚೇರಿ ಆವರಣದಲ್ಲಿ  ನಾಗರ ಹಾವೊಂದು ಕಾಣಿಸಿಕೊಂಡಿತ್ತು.  ಈ ವಿಚಾರ ತಿಳಿದು ಸ್ಥಳಕ್ಕೆ ಬಂದ  ಕಾಗದ ನಗರದ ಯುವಕರಾದ ನಾಗರಾಜ, ಚಂದು, ಗಣೇಶ್ ಹಾವನ್ನ  ಸೆರೆ ಹಿಡಿದು ಎಚ್.ಕೆ.ಜಂಕ್ಷನ್ ಕಾಡಿಗೆ ಬಿಟ್ಟಿದ್ದಾರೆ.  ಮಾ.03 ರಂದು ಮಕ್ಕಳಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ : ತಹಶೀಲ್ದಾರ್ ಗಿರೀಶ್ ಮಾರ್ಚ್ 3 … Read more

ಶಿವಮೊಗ್ಗದಲ್ಲಿ ಮತ್ತೊಂದು ಅಗ್ನಿ ಅವಘಢ! ಗೋಡೌನ್​ನಲ್ಲಿ ಬೆಂಕಿ! ಸ್ವಿಫ್ಟ್​ ಕಾರು , ಅಡಕೆ ಅಗ್ನಿಗೆ ಆಹುತಿ! ಏನಾಯ್ತು

Shivamogga Feb 19, 2024  ಹುಂಡೈ ಶೋರೂಂನಲ್ಲಿ ಬೆಂಕಿ ಕಾಣಿಸಿದ ಘಟನೆ ಬೆನ್ನಲ್ಲೆ ಶಿವಮೊಗ್ಗದ ಮತ್ತೂರು  ಮತ್ತೊಂದು ಅಗ್ನಿ ಆಕಸ್ಮಿಕದ ಘಟನೆ  ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಸ್ಥಳೀಯ ಗೋಡೌನ್​ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಲೆ ಬಾಳುವ ವಸ್ತುಗಳು ಸುಟ್ಟುಹೋಗಿವೆ.  ಇಲ್ಲಿನ ನಿವಾಸಿ ಬಾಬಯ್ಯ ಎಂಬುವರಿಗೆ ಸೇರಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ ಅಲ್ಲಿ ನಿಲ್ಲಿಸಿದ್ದ ಸ್ವಿಫ್ಟ್ ಕಾರು, ಅಡಿಕೆ ಚೀಲಗಳು ಮತ್ತು ತೆಂಗಿನ ಕಾಯಿಗಳು ಬೆಂಕಿಗೆ ಆಹುತಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೀಗಾಗಿದೆ ಎಂದು ಹೇಳಲಾಗುತ್ತಿದೆ.  … Read more

ಗ್ಯಾಸ್​ ಸಿಲಿಂಡರ್​ ಎಸೆದು ಹೆದರಿಸ್ತಿದ್ದ ​ ಆಸಾಮಿ ವಿರುದ್ಧ ಹೆಚ್ಚುವರಿ ಆಕ್ಷನ್​! ಥ್ಯಾಂಕ್ಯು ಭದ್ರಾವತಿ ಪೊಲೀಸ್​!

Shivamogga Feb 12, 2024 |  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿಯ ಹೊಸಮನೆ ಕಾಲೋನಿಯ ಎನ್ಎಂಸಿ ಮೂರನೇ ತಿರುವಿನಲ್ಲಿ ಕುಡುಕನೊಬ್ಬ ತುಂಬಿದ ಸಿಲಿಂಡರ್​ನ್ನ ಎತ್ತಿಹಾಕಿ ಸ್ಫೋಟಿಸಲು ಯತ್ನಿಸಿದ ವಿಚಾರದ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ವರದಿಯಲ್ಲಿ ಸ್ಥಳೀಯರು ಮಾಡಿದ್ದ ಆರೋಪಗಳನ್ನು ವಿವರಿಸಲಾಗಿತ್ತು. ಭದ್ರಾವತಿ ಹೊಸಮನೆ ಕಾಲೋನಿಯ ಜನರ ಒತ್ತಾಯದ ಪ್ರತಿಯಾಗಿ  ಸ್ಥಳೀಯರು ಪೊಲೀಸರಿಗೆ ನೀಡಿದ ಮನವಿ ಕಾಪಿ ಹಾಗೂ ವಿಡಿಯೋವನ್ನು ಎಸ್​.ಪಿ.ಮಿಥುನ್ ಕುಮಾರ್​ ರವರ ಗಮನಕ್ಕೆ ತರಲಾಗಿತ್ತು.  ಸದ್ಯ ಈ ವಿಚಾರವಾಗಿ ಭದ್ರಾವತಿ ಪೊಲೀಸರು … Read more

ಅನ್ನಪೂರ್ಣರ ಸಾವಿನ ತನಿಖೆಗಾಗಿ ವಿಶೇಷ ತನಿಖಾದಳಕ್ಕೆ ಒತ್ತಡ! ಮಹಿಳೆಯರ ಸುರಕ್ಷತೆ ಬಗ್ಗೆ ರೈಲ್ವೆ ಅಧಿಕಾರಿಗಳು ಹೇಳಿದ್ದೇನು?

ಅನ್ನಪೂರ್ಣರ ಸಾವಿನ ತನಿಖೆಗಾಗಿ ವಿಶೇಷ ತನಿಖಾದಳಕ್ಕೆ ಒತ್ತಡ! ಮಹಿಳೆಯರ ಸುರಕ್ಷತೆ ಬಗ್ಗೆ ರೈಲ್ವೆ ಅಧಿಕಾರಿಗಳು ಹೇಳಿದ್ದೇನು?

Feb 11, 2024 |  ಶಿವಮೊಗ್ಗ -ಯಶವಂತಪುರ ಟ್ರೈನ್​ನಲ್ಲಿ ಪ್ರಯಾಣಿಸ್ತಿದ್ದ ಶಿವಮೊಗ್ಗ ಮೂಲದ ಅರಣ್ಯ ಇಲಾಖೆ ಉದ್ಯೋಗಿ ಮಹಿಳೆ ಸಾವಿನ ಪ್ರಕರಣದಲ್ಲಿ ಇದುವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಅಮಾನುಷವಾಗಿ ಕೊಲೆಯಾಗಿರುವ ಮಹಿಳೆಯ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಗಳು ಹೆಚ್ಚುತ್ತಿವೆ. ಈ ಸಂಬಂಧ ಜಸ್ಟೀಸ್​ ಫಾರ್ ಅನ್ನಪೂರ್ಣ ಅಭಿಯಾನವೂ ಆರಂಭವಾಗಿದೆ.    ಇದರ ನಡುವೆ ಮಲೆನಾಡು ಟುಡೆ ಅನ್ನಪೂರ್ಣರವರ ಸಾವಿನ ಘಟನೆ ಸಂಬಂಧ ನಿರಂತರ ವರದಿ ಪ್ರಸಾರ ಮಾಡಿದೆ. ಇದೀಗ  ಶಿವಮೊಗ್ಗದ ಅನ್ನಪೂರ್ಣ ಅವರಿಗೆ ಶನಿವಾರ ವಿವಿಧ … Read more

ಸಿಲಿಂಡರ್​ ಎತ್ತಿಹಾಕಿ ಸ್ಫೋಟಕ್ಕೆ ಯತ್ನ! ಜನರ ನೆಮ್ಮದಿಗೆ ಭಂಗ ತಂದ ಕುಡುಕನ ವಿಡಿಯೋ ವೈರಲ್​! ಕ್ರಮ ಕೈಗೊಳ್ಳದ ಭದ್ರಾವತಿ ಪೊಲೀಸ್

Shivamogga | Feb 11, 2024 |  Video of drunkard   ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ವ್ಯಕ್ತಿಯೊಬ್ಬ ಪದೇ ಪದೇ ಕಾನೂನು ಉಲ್ಲಂಘನೆ ಕೃತ್ಯಗಳನ್ನು ಎಸೆಗುತ್ತಿದ್ದು ಆತನ ವಿಡಿಯೋವೊಂದು ವೈರಲ್ ಆಗಿದೆ. ಅಪಾಯಕಾರಿ ಕೃತ್ಯವೊಂದು ಆತ ಎಸೆಗುತ್ತಿರುವ ವಿಡಿಯೋ ಅದಾಗಿದ್ದು ಆದಾಗ್ಯು ಆತನ ವಿರುದ್ಧ ಕ್ರಮವಾಗಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.   ತುಂಬಿದ ಗ್ಯಾಸ್ ಸಿಲಿಂಡರ್ ನ್ನು ರಸ್ತೆಯಲ್ಲಿ ಪದೇ ಪದೇ ಎತ್ತಿ ಹಾಕಿ ಸ್ಪೋಟಿಸಲು ಪಾನಮತ್ತನಾಗಿದ್ದ ಯುವಕ ಮುಂದಾಗಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ವಿಡಿಯೋ ಮೂಲವನ್ನ ಅರಿಸಿದಾಗ, … Read more

VISL ಉಳಿಸಲು ಮುಂದಾದ ಕೇಂದ್ರ ಗೃಹಸಚಿವ ಅಮಿತ್ ಶಾ? ಏನಿದು ಪತ್ರ ವಹಿವಾಟು

Shivamogga | Feb 8, 2024 | ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಿರಿಮೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ. ಸದ್ಯ ಸಂಸತ್ ಚುನಾವಣೆಯ ವಿಷಯವೂ ಆಗಿ ಕಾರ್ಖಾನೆ ಸುದ್ದಿಯಲ್ಲಿದೆ. ಈ ನಡುವೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವಿಐಎಸ್​ಎಲ್​ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾರಿಗೆ ಗೃಹ ಸಚಿವ ಅಮಿತ್ ಶಾ ಪತ್ರ ಬರೆದಿದ್ದಾರೆ. ಅಮಿತ್ ಶಾ ಪತ್ರ ದಲ್ಲಿ ಏನಿದೆ ತಮ್ಮ ಪತ್ರದಲ್ಲಿ ಕೇಂದ್ರ ಗೃಹಸಚಿವ  … Read more

KRIDL ಅಧ್ಯಕ್ಷ ಸ್ಥಾನ ವಹಿಸಿದ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್​

Shivamogga |  Jan 29, 2024 |   ರಾಜ್ಯಸರ್ಕಾರ ಇತ್ತೀಚೆಗೆಷ್ಟೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಆಯ್ದ ಶಾಸಕರ ಹೆಸರನ್ನ ಲಿಸ್ಟ್​ ಮಾಡಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಹಾಗೂ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್  ರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿತ್ತು.  ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತಕ್ಕೆ ಶಿವಮೊಗ್ಗ ಜಿಲ್ಲೆ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರನ್ನ ನೇಮಿಸಲಾಗಿತ್ತು.  ಇತ್ತ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್​ ಗೆ … Read more

ಮಲವಗೊಪ್ಪ ಸಮೀಪ ಭದ್ರಾವತಿ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ! ಶಾಲೆಗೆ ಹೋಗುತ್ತಿದ್ದ ಬಾಲಕ ಸಾವು!

ಮಲವಗೊಪ್ಪ ಸಮೀಪ ಭದ್ರಾವತಿ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ! ಶಾಲೆಗೆ ಹೋಗುತ್ತಿದ್ದ ಬಾಲಕ ಸಾವು!

SHIVAMOGGA  |  Jan 25, 2024  |   ಶಿವಮೊಗ್ಗ ನಗರದಲ್ಲಿ ಇವತ್ತೊಂದು ಅಪಘಾತ ಸಂಭವಿಸಿದ್ದು , ಬಾಲಕೊಬ್ಬ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಶಾಲೆಗೆ ಹೋಗುವ ಬಸ್​ ಹಿಡಿಯಲು ಅದರ ಸ್ಟಾಪ್ ಬಳಿ ಹೋಗುತ್ತಿದ್ದ ವೇಳೆ ಬೈಕ್​ವೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಆತ ಸಾವನ್ನಪ್ಪಿದ್ದಾನೆ.  ಶಿವಮೊಗ್ಗ ನಗರದ ಮಲವಗೊಪ್ಪದ ಸಮೀಪ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಭದ್ರಾವತಿಯ ಕಡೆಯಿಂದ ಬರುತ್ತಿದ್ದ ಬೈಕ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು