ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ನಗರದಲ್ಲಿ ಮತ್ತೊಂದು ರಸ್ತೆಯಲ್ಲಿ ಏಕಮುಖ ಸಂಚಾರ ನಿಯಮ ಜಾರಿಗೊಳಿಸಲಾಗಿದೆ. ಈ ಮೊದಲು ಕಾಂಗ್ರೆಸ್ ಕಚೇರಿ ಇರುವ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಆದೇಶ ಮಾಡಲಾಗಿತ್ತು. ಇದೀಗ ನಗರದ ಪ್ರಮುಖ ಪ್ರದೇಶಗಳಲ್ಲಿ ಒಂದಾದ ವಿನೋಬನಗರ ಪೊಲೀಸ್ ಚೌಕಿ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ವಿನೋಬನಗರದ 2ನೇ ಹಂತದ 2ನೇ ಮುಖ್ಯ ರಸ್ತೆಯ ಆಯ್ದ ಭಾಗದಲ್ಲಿ ಏಕಮುಖ ಸಂಚಾರಕ್ಕೆ ನಿಯಮ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಹತ್ವದ ಆದೇಶ ಹೊರಡಿಸಿದ್ದಾರೆ.

ಮುಂಬೈ ಕ್ರೈಂ ಪೊಲೀಸ್ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ 51 ಲಕ್ಷ ರೂಪಾಯಿ ವಂಚನೆ : ಏನಿದು ಪ್ರಕರಣ
- ವಿನೋಬನಗರದ 2ನೇ ಹಂತದ 2ನೇ ಮುಖ್ಯ ರಸ್ತೆಯ ಆಯ್ದ ಭಾಗದಲ್ಲಿ ಇಂದಿನಿಂದಲೇ ಏಕಮುಖ ಸಂಚಾರ (One-Way Traffic) ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಆದೇಶ ಮಾಡಲಾಗಿದೆ.
- ಹೊಸ ಆದೇಶದನ್ವಯ, ವಿನೋಬನಗರ ಪೊಲೀಸ್ ಚೌಕಿಯ ಕೆಳಭಾಗದಲ್ಲಿರುವ ನಂದಿನಿ ಪಾರ್ಲರ್‌ನಿಂದ ಮಾನಸ ಪೆಟ್ಸ್ ಮಾರ್ಟ್ ಶಾಪ್ ಕಡೆಗೆ ಚಲಿಸುವ ವಾಹನಗಳಿಗೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ.
- ಮಾನಸ ಪೆಟ್ಸ್ ಮಾರ್ಟ್ ಶಾಪ್‌ನಿಂದ ನಂದಿನಿ ಪಾರ್ಲರ್ (ಪೊಲೀಸ್ ಚೌಕಿ) ಕಡೆಗೆ ಸಾಗುವ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
- ಈ ಕ್ರಮದಿಂದಾಗಿ ಸಂಚಾರ ದಟ್ಟಣೆ ಮತ್ತು ಟ್ರಾಫಿಕ್ ಜಾಮ್ ಸಮಸ್ಯೆ ನಿಯಂತ್ರಣಕ್ಕೆ ಬರಲಿದೆ ಎಂದು ಜಿಲ್ಲಾಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬೈ ಕ್ರೈಂ ಪೊಲೀಸ್ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ 51 ಲಕ್ಷ ರೂಪಾಯಿ ವಂಚನೆ : ಏನಿದು ಪ್ರಕರಣ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ಇಂಡಿಗೋ ವಿಮಾನ ರದ್ದು : ಶಿವಮೊಗ್ಗ ಪ್ರಯಾಣಿಕರ ಪರದಾಟ
