ಪ್ರಾಮಾಣಿಕತೆಯಿಂದ ದಕ್ಕಿದ ಚಿನ್ನದ ಸರ, ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​​ 

1. ಪ್ರಾಮಾಣಿಕತೆ ಮೆರೆದ ಕಪ್ಪನಹಳ್ಳಿ ನಿವಾಸಿಗಳು 

ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದ ಪರಶುರಾಮ್ ಮತ್ತು ಅಶೋಕ್ ಕುಮಾರ್ ಅವರು ತಮ್ಮ ಪ್ರಾಮಾಣಿಕತೆಯ ಮೂಲಕ ಗಮನ ಸೆಳೆದಿದ್ದಾರೆ. ಜನವರಿ 21ರಂದು ಶಿಕಾರಿಪುರ ಖಾಸಗಿ ಬಸ್ ನಿಲ್ದಾಣದಲ್ಲಿ ಇವರಿಗೆ 8 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ದೊರೆತಿದ್ದು, ಅದನ್ನು ಕೂಡಲೇ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. 

2. ಭದ್ರಾ ಕಾಲೋನಿ ದೇವಸ್ಥಾನದ ಕಳ್ಳರ ಬಂಧನ 

ಭದ್ರಾ ಕಾಲೋನಿಯ ಶ್ರೀ ರಾಮಾಂಜನೇಯ ದೇವಸ್ಥಾನದ ಬೀಗ ಒಡೆದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿತರನ್ನು ಹೊಸಮನೆ ಪೊಲೀಸರು ಬಂಧಿಸಿದ್ದಾರೆ. ಜ. 14ರಂದು ನಡೆದಿದ್ದ ಈ ಕಳ್ಳತನಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪಿ.ಎಸ್.ಐ ಮತ್ತು ಸಿಬ್ಬಂದಿ ತಂಡವು ಆರೋಪಿಗಳಿಂದ 1 ಗ್ರಾಂ 3 ಮಿಲಿ ಬಂಗಾರದ ತಾಳಿ, 8,160 ರೂ. ನಗದು ಹಾಗೂ ಡಿವಿಆರ್ ಬಾಕ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

3. ಕಳೆದುಹೋಗಿದ್ದ ಮೊಬೈಲ್ ವಾಪಸ್ ನೀಡಿದ ಸೈಬರ್ ಕ್ರೈಂ ಪೊಲೀಸರು 

ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿ ವಾಪಸ್ ನೀಡಿದ್ದಾರೆ. ಮೊಬೈಲ್ ಕಳೆದುಕೊಂಡವರು CEIR ಪೋರ್ಟಲ್‌ನಲ್ಲಿ ನೀಡಿದ್ದ ದೂರಿನ ಆಧಾರದ ಮೇಲೆ ತಾಂತ್ರಿಕ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಫೋನ್‌ಗಳನ್ನು ಪತ್ತೆ ಹಚ್ಚಿ ಅಸಲಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.

Shimoga Top 3 News Gold Chain Returned

Shimoga Top 3 News Gold Chain Returned
Shimoga Top 3 News Gold Chain Returned