ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13 2025: ಶಿವಮೊಗ್ಗ ನಗರದ ಇದೆ ಅಕ್ಟೋಬರ್ 15 ರಂದು ಹಲವು ಭಾಗಗಳಲ್ಲಿ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯವಾಗಲಿದೆ. ಆಲ್ಕೊಳ್ಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ನೀಡಿದೆ. ವಾರ್ತಾ ಇಲಾಖೆಯಲ್ಲಿ ನೀಡಿರುವ ಪ್ರಕಟಣೆಯ ಪ್ರಕಾರ, ಅಕ್ಟೋಬರ್ 15, ಮಂಗಳವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ವಿದ್ಯುತ್ ಕಡಿತ ಜಾರಿಯಲ್ಲಿ ಇರಲಿದೆ.

ಎಲ್ಲೆಲ್ಲಿ ಕರೆಂಟ್ ಇರಲ್ಲ
ಶಿವಪ್ಪನಾಯಕ ಬಡಾವಣೆ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಸಹ್ಯಾದ್ರಿನಗರ, ಜೆ.ಹೆಚ್.ಪಟೇಲ್ ಬಡಾವಣೆ (ಎ ಯಿಂದ ಇ ಬ್ಲಾಕ್), ಮುನಿಯಪ್ಪ ಲೇಔಟ್, ಸಂಗೊಳ್ಳಿರಾಯಣ್ಣ ಲೇಔಟ್, ರವಿಶಂಕರ್ ಗುರೂಜಿ ಶಾಲೆ ಸಮೀಪದ ಪ್ರದೇಶ, ಸೋಮಿನಕೊಪ್ಪ, ಮಧ್ವನಗರ ಮತ್ತು ವಿಜಯಲಕ್ಷ್ಮೀ ಲೇಔಟ್.
ಅದೇ ರೀತಿ, ಪುಷ್ಪಗಿರಿ ಲೇಔಟ್, ಎಂ.ಎಂ.ಎಸ್.ಲೇಔಟ್, ಸೋಮನಾಥ ಲೇಔಟ್, ಭೋವಿ ಕಾಲೋನಿ, ಆದರ್ಶನಗರ, ಆಟೋಕಾಲೋನಿ, ತಮಿಳು ತಾಯ್ ಭವನ, ಹೊಂಗಿರಣ ಬಡಾವಣೆ, ಸಹಕಾರಿನಗರ, ರಾಜೇಶ್ ಲೇಔಟ್, ಗೆಜ್ಜೆನಹಳ್ಳಿ, ಹನುಮಂತನಗರ, ದೇವಕಾತಿಕೊಪ್ಪ, ಅಂಬೇಡ್ಕರ್ ಕ್ಯಾಂಪ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಸಹ ವಿದ್ಯುತ್ ವ್ಯತ್ಯಯಕ್ಕೆ ಸಿದ್ಧರಾಗಿರಬೇಕು. ಈ ಅಗತ್ಯ ಕಾಮಗಾರಿಗೆ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.
Shimoga Power Cut on Oct 15 due to MESCOM Maintenance Work
Check power cut schedule Shimoga, MESCOM contact for power outage, Report power cut Shimoga, ಶಿವಮೊಗ್ಗ ವಿದ್ಯುತ್ ವ್ಯತ್ಯಯ, ಅಕ್ಟೋಬರ್ 15 ಪವರ್ ಕಟ್, ಮೆಸ್ಕಾಂ, ಕಾಮಗಾರಿ, ಆಲ್ಕೊಳ್ಳ, ಶಿವಮೊಗ್ಗ ಬಡಾವಣೆಗಳು, Shimoga Power Cut on Oct 15
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
