ಶಿವಮೊಗ್ಗ: ಎನ್.ಇ.ಎಸ್. ಕಾಲೇಜುಗಳ ಖಾಸಗೀಕರಣಕ್ಕೆ ಹುನ್ನಾರ ಜಿಲ್ಲಾ ಎನ್.ಎಸ್.ಯು.ಐ. ತೀವ್ರ ವಿರೋಧ,

Shimoga NES College ಶಿವಮೊಗ್ಗ | ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ (NES) ಅಡಿಯಲ್ಲಿ ಬರುವ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ (ATNCC) ಕಾಲೇಜು ಸೇರಿದಂತೆ ಇತರೆ ಕಾಲೇಜುಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಪ್ರತಿಭಟನೆ ನಡೆಸಲಾಯಿತು. 

SUNCONTROL_FINAL-scaled

ನಗರದ ಅತಿ ಹಳೆಯ ಮತ್ತು ಬಡ ವಿದ್ಯಾರ್ಥಿಗಳ ಆಶಾಕಿರಣವಾಗಿರುವ ಎ.ಟಿ.ಎನ್.ಸಿ.ಸಿ. ಕಾಲೇಜನ್ನು ಅನುದಾನರಹಿತ ಕಾಲೇಜನ್ನಾಗಿ ಪರಿವರ್ತಿಸಲು ಕುವೆಂಪು ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಎನ್.ಇ.ಎಸ್. ನಿರ್ಧಾರಕ್ಕೆ ವಿದ್ಯಾರ್ಥಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದಿಂದ ಉಚಿತ ನಿವೇಶನ ಹಾಗೂ ಅನುದಾನ ಪಡೆದಿರುವ ಸಂಸ್ಥೆಯು ಈಗ ಶಿಕ್ಷಣವನ್ನು ದುಬಾರಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿಯವರೆಗೆ ಸರ್ಕಾರದ ವೇತನ ಪಡೆದು ಸೇವೆ ಸಲ್ಲಿಸುತ್ತಿದ್ದ ಪೂರ್ಣಾವಧಿ ಅಧ್ಯಾಪಕರನ್ನು ಬೇರೆ ಕಾಲೇಜುಗಳಿಗೆ ನಿಯೋಜಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಎಸ್.ಆರ್. ನಾಗಪ್ಪಶ್ರೇಷ್ಠಿ ಹಾಗೂ ಗಿರಿಮಾಜಿ ರಾಜಗೋಪಾಲ್ ಅವರಂತಹ ಹಿರಿಯರು ಎಲ್ಲ ವರ್ಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಕಟ್ಟಿದ್ದರು. ಆದರೆ ಇಂದಿನ ಆಡಳಿತ ಮಂಡಳಿ ಲಾಭದ ಉದ್ದೇಶದಿಂದ ಖಾಸಗೀಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. 

ಕೂಡಲೇ ಈ ಪ್ರಯತ್ನವನ್ನು ಕೈಬಿಟ್ಟು ಎಂದಿನಂತೆ ಅನುದಾನಿತ ಕಾಲೇಜಾಗಿ ಮುಂದುವರಿಸಬೇಕು ಎಂದು ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು. 

ಪ್ರತಿಭಟನೆಯಲ್ಲಿ ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷ ವಿಜಯಕುಮಾರ್, ಕಾರ್ಯಾಧ್ಯಕ್ಷ ರವಿಕುಮಾರ್ ಜಿ, ನಗರಾಧ್ಯಕ್ಷ ರವಿಕುಮಾರ್ ಹಾಗೂ ಪದಾಧಿಕಾರಿಗಳಾದ ಚಂದ್ರೋಜಿ ರಾವ್, ವರುಣ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Shimoga NES College Privatization NSUI Warns

Shimoga NES College
Shimoga NES College
shivamogga car decor sun control house
shivamogga car decor sun control house
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು