ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಡವರ ಬಗ್ಗೆ ಯೋಚಿಸದೆ, ಕೇವಲ ನಾಟಿ ಕೋಳಿ ಊಟ ಮತ್ತು ಕುರ್ಚಿ ಜಗಳದಲ್ಲೇ ಕಾಲ ಕಳೆಯುತ್ತಿದ್ದಾರೆ, ಎಂದು ಮಾಜಿ ಜಿ.ಪಂ. ಸದಸ್ಯ ಕೆ.ಇ. ಕಾಂತೇಶ್ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಕೆ.ಇ. ಕಾಂತೇಶ್, ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದೆ ವರ್ಷಗಳೇ ಕಳೆದಿವೆ. ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೆ ಭ್ರಷ್ಟಾಚಾರಗಳು ಹೆಚ್ಚಾಗಿ ನಡೆಯುತ್ತಿವೆ. ಕುರಿತು ಈ ಹಿಂದೆ ಚುನಾವಣಾ ಆಯುಕ್ತರು ಶಿವಮೊಗ್ಗಕ್ಕೆ ಬಂದಾಗ ಅವರ ಬಳಿ ಚುನಾವಣೆ ನಡೆಸುವ ಬಗ್ಗೆ ಪ್ರಸ್ತಾಪ ಮಾಡಿದ್ವಿ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೇ ಬಾರದೇ ಇದ್ದುದ್ದರಿಂದ ನಾವು ಜನವರಿ 21 ರಂದು ಹೈ ಕೋರ್ಟ್ ಮೆಟ್ಟಿಲೇರಿದ್ವಿ. ಇದೀಗ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಹಾಗೂ ಚುನಾವಣಾ ಆಯೋಗಕ್ಕೆ ಏಪ್ರಿಲ್ 21 ರ ಒಳಗಾಗಿ ಚುನಾವಣೆ ನಡೆಸಲು ಆದೇಶಿಸಿದ್ದು, ಇದು ನಮ್ಮ ಹೋರಾಟಕ್ಕೆ ಸಿಕ್ಕ ತಾತ್ಕಾಲಿಕ ಜಯವಾಗಿದೆ ಎಂದರು.
ರಾಜ್ಯ ಸರ್ಕಾರಕ್ಕೆ ಸ್ಥಳೀಯ ಚುನಾವಣೆಗನ್ನು ನಡೆಸಿದರೆ ಎಲ್ಲಿ 2 ಲೈನ್ ಲೀಡರ್ಸ್ ಬಂದು ಎಲ್ಲಿ ಎಂಎಲ್ ಎ ಸೀಟ್ ಕೇಳುತ್ತಾರೋ ಎಂಬ ಭಾವನೆ ಮೂಡಿದೆ. ರಾಜ್ಯ ಸರ್ಕಾರದ ನಾಯಕರೇ ನಿಮಗೇನಾದರೂ ಪ್ರಜಾಪ್ರಭುತ್ವದ ಮೇಲೆ ಕಿಂಚಿತ್ತು ಗೌರವ ಇದ್ದಿದ್ದೇ ಆದರೆ. ಅನಗತ್ಯ ವಿಚಾರವನ್ನು ಚರ್ಚಿಸುವುದನ್ನು ಬಿಟ್ಟು ಕೂಡಲೇ ಚುನಾವನೆ ನಡೆಸಿ. ಪಾಲಿಕೆಯಲ್ಲಿ ನಡೆಯತುವ ಭ್ರಷ್ಟಾಚಾರವನ್ನು ನಿಲ್ಲಿಸಿ ಎಂದರು.
Shimoga MCC Polls ಯಾರು ಹೈಕಮಾಂಡ್? ಯತೀಂದ್ರನಾ ಅಥವಾ ಇಕ್ಬಾಲಾ? : ಕೆ ಎಸ್ ಈಶ್ವರಪ್ಪ
ನಂತರ ಮಾತನಾಡಿದ ಕೆ.ಎಸ್. ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ, ಕರ್ನಾಟಕದಲ್ಲಿ ಸರ್ಕಾರವೇ ಅಸ್ತಿತ್ವದಲ್ಲಿಲ್ಲ ಇಲ್ಲಿ ಸಂಪೂರ್ಣ ಅರಾಜಕತೆ ಮನೆಮಾಡಿದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಲಜ್ಜೆಗೆಟ್ಟ ಹೇಳಿಕೆಗಳು ಬರುತ್ತಿವೆ. ಯತೀಂದ್ರ ಸಿದ್ದರಾಮಯ್ಯ ಅವರೇ ಹೈಕಮಾಂಡ್ ಎಂದು ಡಿಕೆಶಿ ಹೇಳುತ್ತಾರೆ. ಹಾಗಾದರೆ ಮಲ್ಲಿಕಾರ್ಜುನ ಖರ್ಗೆ ಅವರ ಸ್ಥಾನವೇನು? ನಿಮ್ಮ ಆಂತರಿಕ ಗಲಾಟೆಯಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಯಲವಟ್ಟಿ ಕೆರೆ ಅಭಿವೃದ್ಧಿಗೆ ಟೆಂಡರ್ ಹಾಕಲು ಯಾರೂ ಮುಂದೆ ಬರುತ್ತಿಲ್ಲ, ಎಂದು ಆಕ್ರೋಶ ಹೊರಹಾಕಿದರು.
ಇನ್ನು ಅಧಿವೇಶನದ ಕುರಿತಾಗಿ ಮಾತನಾಡಿ ಅವರು ನಾನು ಅನೇಕ ಅಧಿವೇಶನದಲ್ಲಿ ಭಾಗವಹಿಸಿದ್ದೇನೆ. ಆದರೆ ಇತ್ತೀಚೆಗೆ ನಡೆದ ಅಧಿವೇಶನದಂತಹ ಕೆಟ್ಟ ಅಧಿವೇಶನವನ್ನು ನಾನು ನೋಡಿಲ್ಲ. ಸ್ಪೀಕರ್ ಹೊರಟ್ಟಿ ಅವರು ಶಾಸಕರೊಬ್ಬರನ್ನು ಈಡಿಯಟ್ ಎಂದು ಕರೆಯುತ್ತಾರೆ, ಶಿವಲಿಂಗೇಗೌಡರು ಕೆಟ್ಟ ಪದ ಬಳಸುತ್ತಾರೆ. ಪ್ರಧಾನಿಯವರನ್ನು ದೇಶದ್ರೋಹಿ ಎಂದು ಕರೆಯುವ ನಜೀರ್ ಅಹ್ಮದ್ ಅಂತಹವರನ್ನು ಕಂಟ್ರೋಲ್ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ, ವಿರೋಧ ಪಕ್ಷದ ಶಾಸಕರಿಗೆ ಅನುದಾನದ ಹೆಸರಿನಲ್ಲಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಲೇವಡಿ ಮಾಡಿದರು.
Shimoga MCC Polls Eshwarappa Slam Govt


