ಶಿವಮೊಗ್ಗ ಜೈಲ್​ ಬೆನ್ನಲ್ಲೆ, ಇವತ್ತು ಮಹಿಳಾ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ರೇಡ್!

Malenadu Today

KARNATAKA NEWS/ ONLINE / Malenadu today/ Jun 3, 2023 SHIVAMOGGA NEWS  

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಮಹಿಳಾ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಪೊಲೀಸರು ರೇಡ್ ನಡೆಸಿದ್ದಾರೆ.  

ಬಿಂದುಮಣಿ ಐಪಿಎಸ್ (ಪ್ರೋ)  ಇವರ ನೇತೃತದ ತಂಡವು  ಶಿವಮೊಗ್ಗದ ಸಂಪೂರ್ಣ ಮಹಿಳಾ ಕೇಂದ್ರ ಕಾರಾಗೃಹ  ಮತ್ತು ಬಂದಿಗಳನ್ನು  ತಪಾಸಣೆ ನಡೆಸಿದರು. 

ಈ ವೇಳೆಯಲ್ಲಿ ಯಾವುದೇ ರೀತಿಯ ನಿಷೇಧಿತ ವಸ್ತುಗಳು ದೊರೆತಿರುವುದಿಲ್ಲ ಎಂದು ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಹೇಮಾವತಿ ಜಿ. ತಿಳಿಸಿದ್ದಾರೆ. 

ತಪಾಸಣಾ ತಂಡಲ್ಲಿ ಒಬ್ಬ ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೆಬಲ್, 8 ಮಹಿಳಾ ಪೊಲೀಸ್ ಕಾನ್ಸ್ಟೇಬಲ್, 5 ಪುರುಷ ಪೊಲೀಸ್ ಕಾನ್ಸ್ಟೇಬಲ್ (ತಪಾಸಣಾ ಯಂತ್ರದೊಂದಿಗೆ) ಹಾಗೂ ಒಂದು ಡಾಗ್​  ಸ್ಕ್ವಾಡ್  ಈ ತಪಾಸಣೆಯಲ್ಲಿ ಪಾಲ್ಗೊಂಡಿತ್ತು!

 

Share This Article