ಬಿಜೆಪಿಯ ಮಾಜಿ ಮಂತ್ರಿ ₹50 ಕೋಟಿ ರೂಪಾಯಿ ಹಿಡ್ಕೊಂಡು ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರಾ? ಏನಿದು ಹೊಸ ಆರೋಪ?

Shimoga District Congress and Ayanur Manjunath have accused the BJP ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಾಗೂ ಆಯನೂರು ಮಂಜುನಾಥ್ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ

ಬಿಜೆಪಿಯ ಮಾಜಿ ಮಂತ್ರಿ ₹50 ಕೋಟಿ ರೂಪಾಯಿ ಹಿಡ್ಕೊಂಡು ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರಾ? ಏನಿದು ಹೊಸ ಆರೋಪ?

KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’

ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಅಯನೂರು ಮಂಜುನಾಥ್ ಮಾತನಾಡುತ್ತಾ  ಬಿಜೆಪಿ ಆಡಳಿತ ಅವಧಿಯಲ್ಲಿ 1000 ಕೋಟಿ ಸಾಲ ಮಾಡಿದ್ದನ್ನು ಕಾಂಗ್ರೆಸ್ ತೀರಿಸ ಬೇಕಿದೆ . ಕಾಮಗಾರಿಗಳ ಟೆಂಡರ್ ವೇಳೆ ತಮ್ಮೆಲ್ಲ ಪಾಲನ್ನು ಬಿಜೆಪಿ ನಾಯಕರು ತೆಗೆದುಕೊಂಡಿದ್ದಾರೆ . ಈಗ ಬಿಲ್ ಪಾವತಿ ಮಾಡುವ ವೇಳೆ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಭ್ರಷ್ಟಾಚಾರಿ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ , ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ ಮಾಜಿ ಮಂತ್ರಿ ಇದೀಗ ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮನೆಬಾಗಿಲಿಗೆ ಹೋಗಿ 50 ಕೋಟಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ .  ಕಾಂಗ್ರೆಸ್ ಶಾಸಕರು ಛೀ.. ಥೂ.. ಎಂದು ಈ ನಾಯಕರನ್ನು ಹೊರಗೆ ಕಳುಹಿಸುತ್ತಿದ್ದಾರೆ ಎಂದ ಆಯನೂರು ಮಂಜುನಾಥ್  ಬಿಜೆಪಿ ಜೆಡಿಎಸ್ ತಮ್ಮಲ್ಲಿರುವ ಭ್ರಷ್ಟಾಚಾರದ ಹಣವನ್ನು ಇಟ್ಟುಕೊಂಡು ಈ ಸರ್ಕಾರ ಮೂರು ತಿಂಗಳು ಇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಭ್ರಷ್ಟಾಚಾರದ ಹಣವನ್ನು ಕೇಂದ್ರ ಸರ್ಕಾರದಿಂದ ತಂದಿದ್ದಿರೋ ಅಥವಾ ತಾವೇ ಇಟ್ಟುಕೊಂಡಿದ್ದೋ ಸ್ಪಷ್ಟಪಡಿಸಿ ಎಂದಿದ್ದಾರೆ.  

ಬಿಎಸ್ ವೈ ಸಿಎಂ ಆಗಿದ್ದಾಗ ಅವರನ್ನು ಬ್ಲಾಕ್ ಮೇಲ್ ಮಾಡಿ ಮುಜುಗರವನ್ನುಂಟು ಮಾಡಿದವರು ಇಂದು ಸರ್ಕಾರ ಬೀಳಿಸುವ ಯತ್ನ ನಡೆಸಿದ್ದಾರೆ . ಈಶ್ವರಪ್ಪನವರ ಮೇಲೆ 40% ಆಪಾದನೆ ಇತ್ತು . ಮಾಧ್ಯಮದ ಮುಂದೆ ಈಶ್ವರಪ್ಪ ಕಾಂಗ್ರೆಸ್ ನವರು ನಮಗಿಂತ ಡಬಲ್ ತಿನ್ನುತ್ತಿದ್ದಾರೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ಮಾಡಿದ ಭ್ರಷ್ಟಾಚಾರವನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ  ಮೊದಲು ಈಶ್ವರಪ್ಪನವರನ್ನು ಬಂಧಿಸಿ ಅವರು ನಡೆಸಿದ ಭ್ರಷ್ಟಾಚಾರ ಎಷ್ಟು ಎಂಬುದು ಹೊರಬರಲಿ ಎಂದಿದ್ದಾರೆ. 

ಬಿಜೆಪಿಯವರು ತಮ್ಮ ಕಪ್ಪು ಹಣದಿಂದ ಕಾಂಗ್ರೆಸ್ ಸರ್ಕಾರ ಮುಟ್ಟುವ ಕೆಲಸ ಏನಿದೆ ಅದನ್ನ ಮೊದಲು ನಿಲ್ಲಿಸಲಿ ಎಂದ ಆಯನೂರು ಮಂಜುನಾಥ್  ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿ ಸಿಎಂ ಇಬ್ರಾಹಿಂ ಮತ್ತು ಕುಮಾರಸ್ವಾಮಿಯವರ ಆಂತರಿಕ ವಿಚಾರ ಎಂದಿದ್ದಾರೆ.  

ಇನ್ನೂ ಬೆಂಗಳೂರಿನಲ್ಲಿ ನಡೆದ ಐಟಿ ರೇಡ್‌ಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸ್ವತಃ ಭ್ರಷ್ಟರಾದ ಬಿಜೆಪಿಗರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡಿತನ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹೆಚ್‌.ಎಸ್. ಸುಂದರೇಶ್  ಅಭಿಪ್ರಾಯ ಪಟ್ಟಿದ್ದಾರೆ. 

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,  ಬೆಂಗಳೂರಿನಲ್ಲಿ ಕೆಲವು ಗುತ್ತಿಗೆದಾರರ ಮೇಲೆ ಐಟಿ ರೇಡ್ ಆಗಿದೆ. ಇದಕ್ಕೂ ಕಾಂಗ್ರೆಸ್ಸಿಗೂ ಯಾವ ಸಂಬಂಧವೂ ಇಲ್ಲ. ಆದರೂ ಕೂಡ ಬಿಜೆಪಿ ನಾಯಕರು ಅರ್ಥವಿಲ್ಲದಂತೆ ಬಾಯಿಗೆ ಬಂದಂತೆ ಕಾಂಗ್ರೆಸ್‌ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಆರೋಪ ಮಾಡುವವರೆಲ್ಲರೂ ಭ್ರಷ್ಟಾಚಾರಿಗಳೇ ಆಗಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ ಎಂದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದ ಹಗರಣಗಳು ಸಾಲುಸಾಲಾಗಿ ಬಂದಿವೆ. ಶೇ.40ರ ಕಮಿಷನ್ ಹಗರಣ, ಪಿಎಸ್‌ಐ ನೇಮಕಾತಿ ಹಗರಣ, ಬಿಟ್‌ ಕಾಯಿನ್‌ ಹಗರಣ ಸೇರಿದಂತೆ ಸಾಕಷ್ಟು ಹಗರಣಗಳಾಗಿವೆ. ಅದರಲ್ಲೂ ಕೊರೋನಾ ಸಂದರ್ಭದಲ್ಲಂತೂ ಬಿಜೆಪಿಗರು ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಅಂತ ಭ್ರಷ್ಟಾಚಾರಿಗಳು ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಐದು ತಿಂಗಳಾಗಿಲ್ಲ. ಆಗಲೇ ಆರೋಪದ ಮಾತನಾಡುತ್ತಾರೆ. ಯಾರೇ ಭ್ರಷ್ಟಾಚಾರ ಮಾಡಿದರೂ ಕೂಡ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ ಎಂದರು.


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ