ನವೆಂಬರ್ 27, 2025 : ಮಲೆನಾಡು ಟುಡೆ : ಮೊದಲ ಪತ್ನಿ ಇರುವ ವಿಷಯವನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದಷ್ಟೆ ಅಲ್ಲದೆ ಆಕೆಯನ್ನು ಕೆಳ ಜಾತಿಯವಳೆಂದು ಹೀನಾಯವಾಗಿ ನಿಂದಿಸಿದ ಕಿರಕುಳ ನೀಡಿದ ಪ್ರಕರಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿವಮೊಗ್ಗ ನ್ಯಾಯಾಲಯವು 4 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ದಂಡ ವಿಧಿಸಿದೆ.
ಈ ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾದ ಪತ್ನಿಗೆ ₹1,00,000/- ಪರಿಹಾರವನ್ನು ನೀಡುವಂತೆ ನ್ಯಾಯಪೀಠವು ಆದೇಶಿಸಿದೆ. ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ರವರು ದಿನಾಂಕ ನವೆಂಬರ್ 25, 2025 ರಂದು ಈ ತೀರ್ಪನ್ನು ಪ್ರಕಟಿಸಿದ್ದಾರೆ.

ಪ್ರಕರಣದ ಸಾರಾಂಶ/Shimoga court sentences a man from Shikaripura to 4 years
ಶಿಕಾರಿಪುರ ತಾಲ್ಲೂಕಿನ ಹಿತ್ತಲ ಗ್ರಾಮದ ದ ಚಿದಾನಂದ ಎಸ್.ಇ. ಎಂಬುವವರು ಮಂಜುಳಾ ಎಂಬುವವರನ್ನು ಮದುವೆಯಾಗಿದ್ದರು. ಇಬ್ಬರು ಅನ್ಯ ಜಾತಿಗೆ ಸೇರಿದವರಾಗಿದ್ದು, ಇವರಿಬ್ಬರ ಮದುವೆ ಮೇ 14, 2020 ರಂದು ಗುಡ್ಡೇಕಲ್ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದಿತ್ತು. ಇದಾದ ಬಳಿಕ, ಡಿಸೆಂಬರ್ 21, 2020 ರಂದು ಕಾನೂನುಬದ್ಧವಾಗಿ ಸಬ್‌ರಿಜಿಸ್ಟ್ರಾರ್ ಕಛೇರಿಯಲ್ಲಿ ಮದುವೆಯನ್ನು ನೊಂದಾಯಿಸಲಾಗಿತ್ತು. ಮದುವೆಯಾಗಿ ವರ್ಷಗಳು ಕಳೆದರೂ, ಚಿದಾನಂದನು ಮಂಜುಳಾ ಅವರನ್ನು ತನ್ನ ಮನೆಯಾದ ಹಿತ್ತಲಗ್ರಾಮಕ್ಕೆ ಕರೆದುಕೊಂಡು ಹೋಗಿರಲಿಲ್ಲ. ಬದಲಾಗಿ ಆಕೆಯನ್ನು ಬೈರನಕೊಪ್ಪದಲ್ಲಿ ಇರಿಸಿದ್ದರೆ.
ಸಂತ್ರಸ್ತೆ ಮಂಜುಳಾ ದಿನಾಂಕ ಜನವರಿ 03, 2023 ರಂದು ಬೈರನಕೊಪ್ಪದ ತನ್ನ ಮನೆಗೆ ಬಂದಿದ್ದ ಪತಿ ಚಿದಾನಂದರ ಬಳಿ ತನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗುವಂತೆ ಕೇಳಿದ್ದರು. ಈ ಸಮಯದಲ್ಲಿ, ಚಿದಾನಂದ ಮಂಜುಳಾ ಅವರಿಗೆ ಜೀವಬೆದರಿಕೆ ಹಾಕಿ, ಅಮಾನವೀಯ ಮತ್ತು ಅವಹೇಳನಕಾರಿಯಾದ ಜಾತಿ ನಿಂದನೆಯನ್ನು ಮಾಡಿದ್ದಾರೆ. ನೀನು ಕೆಳಜಾತಿಗೆ ಸೇರಿದ್ದಾಳೆ, ನಾನು ಮೇಲ್ಜಾತಿಯವನು. ನಿನ್ನಂತಹವಳನ್ನು ನನ್ನ ಕುಲಕ್ಕೆ ಸೇರಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಎಂದು ಜಾತಿ ನಿಂದನೆ ಮಾಡಿ ಆಕೆಗೆ ನೋವು ಮತ್ತು ಸಂಕಟ ಉಂಟು ಮಾಡಿದ್ದ ಎಂದು ಎಫ್ಐಆರ್ ನಲ್ಲಿ ಉಲ್ಲೇಖೀಸಲಾಗಿತ್ತು. ಅಲ್ಲದೆ ಹಿಂದೆಯೇ ಮದುವೆಯಾಗಿದ್ದರೂ, ಆ ಸತ್ಯವನ್ನು ಮುಚ್ಚಿಟ್ಟು ತಮ್ಮನ್ನು ಎರಡನೇ ಮದುವೆಯಾಗಿದ್ದ ಆರೋಪದಡಿಯಲ್ಲಿ ಕೇಸ್ ದಾಖಲಾಗಿತ್ತು.

ಜನವರಿ 20, 2023 ರಂದು ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಪ್ರಕಾರ, ಚಿದಾನಂದನ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಕಲಂಗಳಾದ 498(ಎ), 504 , 506 , 494, 495 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ (SC/ST Act) ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಅಂದಿನ ತನಿಖಾಧಿಕಾರಿಗಳಾಗಿದ್ದ ಡಿವೈಎಸ್‌ಪಿ ಸುರೇಶ್ ಎಂ. ರವರು ತನಿಖೆಯನ್ನು ಪೂರ್ಣಗೊಳಿಸಿ, ಆರೋಪಿ ವಿರುದ್ಧ ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು (Charge Sheet) ಸಲ್ಲಿಸಿದ್ದರು
ತೀರ್ಥಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಬಿಬಿಎ ವಿದ್ಯಾರ್ಥಿನಿ ಪತ್ತೆ! ಸಿಗದ ಸಾವಿನ ಕಾರಣ?
ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ಕುರಿತು ವಿಚಾರಣೆ ನಡೆಯಿತು. ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕರಾದಪಿ.ಓ. ಪುಷ್ಪಾ ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದರು. ವಿಚಾರಣೆ ನಂತರ, ನ್ಯಾಯಾಲಯ ಆರೋಪಿ ಚಿದಾನಂದ ಎಸ್ ಇ ವಿರುದ್ಧದ ವಿವಾಹ ವಂಚನೆ ಮತ್ತು ಜಾತಿ ನಿಂದನೆಯ ಆರೋಪಗಳನ್ನು ದೃಢಪಡಿಸಿತು.

ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ
ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ಈ ಸಂಬಂಧ ತೀರ್ಪು ನೀಡಿದ್ದು, ಅಪರಾಧಿಗೆ ಭಾರತೀಯ ದಂಡ ಸಂಹಿತೆಯ ಕಲಂಗಳಾದ 494 ಮತ್ತು 495 ರ ಅಡಿಯಲ್ಲಿ 4 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಇದಲ್ಲದೆ, ನ್ಯಾಯಾಲಯವು ಆರೋಪಿಗೆ ₹1,05,000/- ದಂಡ ಕಟ್ಟುವಂತೆ ಸೂಚಿಸಿದೆ. ಒಂದು ವೇಳೆ ಆರೋಪಿಯು ಈ ದಂಡದ ಮೊತ್ತವನ್ನು ಕಟ್ಟಲು ವಿಫಲವಾದರೆ, ಆತನು ಹೆಚ್ಚುವರಿಯಾಗಿ 1 ವರ್ಷ 2 ತಿಂಗಳ ಸಾದಾ ಸಜೆಯನ್ನು ಅನುಭವಿಸಬೇಕಾಗುತ್ತದೆ ಎಂದು ಸಹ ಸ್ಪಷ್ಟಪಡಿಸಿದೆ. ನ್ಯಾಯಾಲಯವು ಇದೇ ವೇಳೆ, ಸಂತ್ರಸ್ತೆ ಮಂಜುಳಾ ಅವರಿಗೆ ₹1,00,000/- ಪರಿಹಾರ ನೀಡುವಂತೆ ಆದೇಶ ನೀಡಿದೆ.
ಶಿವಮೊಗ್ಗ ಸೇರಿ 10 ಕಡೆಗಳಲ್ಲಿ ಲೋಕಾಯುಕ್ತ ರೇಡ್ನಲ್ಲಿ ಸಿಕ್ಕಿದ್ದು ಲಕ್ಷ ಲಕ್ಷ ಅಲ್ಲ! ಕೋಟಿ…! ಕೋಟಿ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga tourist places, Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Shimoga news kannada today, Shimoga news kannada epaper today, Shivamogga today breaking news, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ನ್ಯೂಸ್, ಭದ್ರಾವತಿ ನ್ಯೂಸ್, ತೀರ್ಥಹಳ್ಳಿ ಸುದ್ದಿ, ಶಿಕಾರಿಪುರ ವಾರ್ತೆ, ಸೊರಬ ನ್ಯೂಸ್, ಹೊಸನಗರ ಸುದ್ದಿ, ಕರ್ನಾಟಕ ನ್ಯೂಸ್ ಶಿವಮೊಗ್ಗ, ಶಿವಮೊಗ್ಗ ರಾಜಕೀಯ ಸುದ್ದಿ, Shivamogga crime news, Shimoga weather today, Agumbe news, Jog Falls news.
