ಶಿವಮೊಗ್ಗ : ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ವ್ಯಾಟ್ಸ್ಪ್ ಕಾಲ್ ಮಾಡಿ ಖಾಸಗಿ ಅಂಗವನ್ನು ಪ್ರದರ್ಶಿಸಿದ್ದಾನೆ ಎಂದು ಆರೋಪಿಸಿ ಮಹಿಳೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಘಟನೆ ವಿವರ
ಶಿವಮೊಗ್ಗದ (ಊರು ಹಾಗೂ ಮಹಿಳೆಯ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.) ಮಹಿಳೆಯೊಬ್ಬರು ಹೀಗೆ ಮೊಬೈಲ್ ನೋಡುತ್ತಿದ್ದಾಗ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಸಂದೇಶವೊಂದು ಬಂದಿತ್ತು. ನಾನು ನಿಮಗೆ ಪರಿಚಯವಿರುವ ವ್ಯಕ್ತಿ, ವಿಡಿಯೋ ಕಾಲ್ ಮಾಡುತ್ತೇನೆ ರಿಸೀವ್ ಮಾಡಿ, ನಾನು ಯಾರು ಎಂದು ತಿಳಿಯುತ್ತದೆ ಎಂದು ಆ ವ್ಯಕ್ತಿ ನಂಬಿಸಿದ್ದ. ಇದನ್ನು ನಂಬಿದ ಮಹಿಳೆ ಕಾಲ್ ರಿಸೀವ್ ಮಾಡಿದಾಗ, ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ.
ಮೊದಲ ಎರಡು ಬಾರಿ ಕರೆ ಬಂದಾಗ ಮಹಿಳೆ ತನ್ನ ಮುಖ ಕಾಣದಂತೆ ಕ್ಯಾಮೆರಾ ತಿರುಗಿಸಿ ಕಾಲ್ ರಿಸೀವ್ ಮಾಡಿದ್ದರು. ಆದರೆ ವ್ಯಕ್ತಿ ತನ್ನ ಮುಖ ತೋರಿಸಿರಲಿಲ್ಲ. ಕೂಡಲೇ ಎಚ್ಚೆತ್ತ ಮಹಿಳೆ, ರಾತ್ರಿ ಮೊಬೈಲ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ (Screen Record) ಆನ್ ಮಾಡಿಕೊಂಡು ಆ ನಂಬರ್‌ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಆಗ ಆ ವ್ಯಕ್ತಿ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿದ್ದು, ಇದನ್ನು ಮಹಿಳೆ ಸಾಕ್ಷ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಈ ಹಿನ್ನೆಲೆ ಕಿರುಕುಳ ನೀಡುತ್ತಿರುವ ವ್ಯಕ್ತಿಯನ್ನು ಬಂಧಿಸುವಂತೆ ಶಿವಮೊಗ್ಗದ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕ್ರಣ ದಾಖಲಿಸಿದ್ದಾರೆ.


