ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13 2025: ದಿನಕ್ಕೆ 200 ರೂಪಾಯಿ ಲಾಭ ನೀಡುವುದಾಗಿ ಹೇಳಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ₹7.84 ಲಕ್ಷ ವಂಚನೆ ಮಾಡಿದ ಪ್ರಕರಣ ಸಂಬಂದ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ. ‘

ಇನ್‌ಸ್ಟಾಗ್ರಾಂ (Instagram) ನಲ್ಲಿದ್ದ ಜಾಹೀರಾತನ್ನು ನಂಬಿದಿ ಉದ್ಯಮಿಯವರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಹೀಗೆ ವಂಚಕರ ಜಾಲಕ್ಕೆ ಸಿಲುಕಿದೆ ಉದ್ಯಮಿಗೆ ಆರೋಪಿಗಳು ಲಾಭದ ಆಮೀಷ ಒಡ್ಡಿದ್ದಾರೆ. ಆರಂಭದಲ್ಲಿ 20,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಕ್ಕೆ ಪ್ರತಿಯಾಗಿ, ಉದ್ಯಮಿಗೆ ಪ್ರತಿದಿನ 200 ರೂಪಾಯಿಯಂತೆ, 60 ದಿನ ಲಾಭಾಂಶವನ್ನು ಸಹ ನೀಡಿದ್ದಾರೆ. Shimoga Businessman
ಇದರಿಂದ ಉದ್ಯಮಿಗೆ ಈ ವ್ಯಾಪಾರ ಸರಿ ಇದೆ ಎಂದೆನಿಸಿದೆ.ಇದಕ್ಕೆ ಸರಿಯಾಗಿ ವಂಚಕರು ಇನ್ನಷ್ಟು ಇನ್ವೆಸ್ಟ್ ಮಾಡಿ ಎಂದಿದ್ದಾರೆ. ಅದನ್ನ ನಂಬಿದ ಸಂತ್ರಸ್ತ ಉದ್ಯಮಿ ಒಟ್ಟು 7.84 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ ಆನಂತರ ಅವರ ಅಕೌಂಟ್ಗೆ ಯಾವುದೇ ಲಾಭಾಂಶ ಬರಲಿಲ್ಲ. ಇದರಿಂದ ಅನುಮಾನಗೊಂಡು ಶಿವಮೊಗ್ಗದ ಸಿ.ಇ.ಎನ್. (ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್) ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
Report Cyber Crime in Shimoga, Check cyber crime helpline, Shimoga CEN Police Station, Malenadu Today News, Insta Investment Scam, Businessman cheated Shimoga, Latest Cyber News Karnataka , ಶಿವಮೊಗ್ಗ ಸೈಬರ್ ವಂಚನೆ, ಆನ್‌ಲೈನ್ ವಂಚನೆ,ಇನ್‌ಸ್ಟಾಗ್ರಾಂ ಜಾಹೀರಾತು, ಸಿಇಎನ್ ಪೊಲೀಸ್
Shimoga Businessman Cheated in Fake Investment Scheme in Instagram
