ಶಿವಮೊಗ್ಗಕ್ಕೆ ಅಂತಾ ಚಾಮರಾಜನಗರದಿಂದ ಬಂದಿದ್ದ ಯುವತಿಗೆ ಚಿಕ್ಕಮಗಳೂರಿನ ತರಿಕೆರೆಯಲ್ಲಿ ಎದುರಾಗಿತ್ತು ವಿದಿ! ಭೀಕರ ಘಟನೆಯಲ್ಲಿ ಬೈಕ್​ನಲ್ಲಿದ್ದ ಅಪರಿಚಿತರ ಸಾವು!

Malenadu Today

KARNATAKA NEWS/ ONLINE / Malenadu today/ Jun 21, 2023 SHIVAMOGGA NEWS 

ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕಿನ ಕಟ್ಟೆಹೊಳೆ ಗೇಟ್ ಬಳಿ ವಿಚಿತ್ರವಾದ ದುರ್ಘಟನೆಯೊಂದು ಸಂಭವಿಸಿದೆ. ಇಬ್ಬರು ಅಪರಿಚಿತ ಯುವಕ, ಯುವತಿಯರು ಬೈಕ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ಧಾರೆ. 

ಈ ಪೈಕಿ ಒಬ್ಬರು ಶಿವಮೊಗ್ಗಕ್ಕೆ ಬರಬೇಕು ಎಂದು ಬಂದವರು, ಇನ್ನೊಬ್ಬರು ಸ್ನೇಹಿತನ ಫ್ರೆಂಡ್ ಎಂಬ ಕಾರಣಕ್ಕೆ ಅವರಿಗೆ ಡ್ರಾಪ್​ ಕೊಡಲು ಬಂದವರು. ಇಬ್ಬರು ಸಾಗುತ್ತಿದ್ದಾಗ, ಬೈಕ್​ಗೆ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ಏನಿದು ಘಟನೆ? 

ಚಾಮರಾಜನಗರ ಜಿಲ್ಲೆ ತರೀಕೆರೆ ತಾಲ್ಲೂಕು ಬೇಲೇನಹಳ್ಳಿ ನಿವಾಸಿ ದೀಪಿಕಾ ಎಂಬವರು ತಮ್ಮ ಗಳತಿಯ ಜೊತೆ ಶಿವಮೊಗ್ಗದಲ್ಲಿ ವೃತ್ತಿಪರ ಕೆಲಸಕ್ಕಾಗಿ ಹೊರಟಿದ್ದರು. ಈ ಮಧ್ಯೆ ತರಿಕೆರೆಯಲ್ಲಿ ಕಾರ್ತಿಕ್ ಎಂಬ ಸ್ನೇಹಿತನ ಭೇಟಿಗೆ ಹೊರಟಿದ್ದರು. ತರಿಕೆರೆಯಿಂದ ಬೇಲನಹಳ್ಳಿಯಲ್ಲಿರುವ ನಿವಾಸಕ್ಕೆ,  ಅವರನ್ನ ಕರೆದುಕೊಂಡು ಬರಲು ಕಾರ್ತಿಕ್ ತನ್ನ ಸ್ನೇಹಿತ ವಿಶ್ವಾಸ್​ನನ್ನ ಸಹ ಕರೆದುಕೊಂಡು ಹೋಗಿದ್ದ. ಹೀಗೆ ಎರಡು ಬೈಕ್​ನಲ್ಲಿ ಹೋಗಿದ್ದವರು ಇಬ್ಬರನ್ನ ಕೂರಿಸುಕೊಂಡು ವಾಪಸ್ ಬರುವಾಗ ಆಕ್ಸಿಡೆಂಟ್ ಆಗಿದೆ. ಬೈಕ್​ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ವಿಶ್ವಾಸ್ ಹಾಗೂ ದೀಪಿಕಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ತರಿಕೆರೆ ಪೊಲೀಸ್ ಸ್ಟೆಷನ್​ನಲ್ಲಿ ಕಂಪ್ಲೆಂಟ್ ಆಗಿದ್ದು ಕೇಸ್ ದಾಖಲಾಗಿದೆ. 


Share This Article