KARNATAKA NEWS/ ONLINE / Malenadu today/ Jun 13, 2023 SHIVAMOGGA NEWS
ಶಿವಮೊಗ್ಗ/ ನಗರದ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ನಲ್ಲಿ ಬಸ್ಗೆ ಕಾಯುತ್ತಿದ್ದಾಗ ಮಹಿಳೆಯೊಬ್ಬರ ಚಿನ್ನಾಭರಣ ಕಳುವಾಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ ಅಲ್ಲದೆ ಈ ಸಂಬಂಧ IPC 1860 (U/s-379) ಅಡಿಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ.
ನಡೆದಿದ್ದೇನು?
ಕಳೆದ 10 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಈ ಸಂಬಂಧ ಹಿರೇಕರೂರು ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಅವರು ಶಿವಮೊಗ್ಗದಲ್ಲಿರುವ ತಮ್ಮ ಅಕ್ಕನ ಮನೆಗೆ ಬಂದಿದ್ದರಂತೆ. ವಾಪಸ್ 10 ನೇ ತಾರೀಖು KSRTC ಬಸ್ ಸ್ಟ್ಯಾಂಡ್ನಲ್ಲಿ ಬಸ್ ಹತ್ತಲು ಪ್ಲ್ಯಾಟ್ ಫಾರಂ ನಂಬರ್ 10 ರಲ್ಲಿ ಬಸ್ ಗಾಗಿ ಕಾಯುತ್ತಿದ್ದಾರೆ. ಸಮಯ ಸುಮಾರು 03-30 ಗಂಟೆಯಾಗಿತ್ತು. ಬಳಿಕ ಶಿರಾಳಕೊಪ್ಪ-ಶಿರಸಿ ರೂಟ್ ನ ಬಸ್ ಬಂದಿದೆ. ಬಸ್ ಹತ್ತಿ ಟಿಕೆಟ್ ಮಾಡಿಸಲು ಹೊರಟಾಗ ವ್ಯಾನಿಟಿ ಬ್ಯಾಗ್ ಜಿಪ್ ಓಪನ್ ಆಗಿರುವುದು ಕಂಡು ಬಂದಿದೆ. ಅನುಮಾನ ಬಂದು ನೋಡಿದಾಗ, ಮೂರು ಚೈನ್, ಎರಡು ಬಳೆ, ಉಂಗುರ ಸೇರಿ ಮೂರು ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳುವು ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಕುಟುಂಬಸ್ಥರನ್ನ ವಿಚಾರಿಸಿ ಮಹಿಳೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.
ಬಾಡಿಗೆದಾರರಿಗೆ ಗೃಹಜ್ಯೋತಿ ಉಚಿತ ವಿದ್ಯುತ್ ಬಿಲ್! ಗೊಂದಲಕ್ಕೆ ಬಿತ್ತು ತೆರೆ ! ಇಲ್ಲಿದೆ ವಿವರ
ಬೆಂಗಳೂರು/ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಯಡಿಯಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತಿದ್ದು, ಒಂದೊಂದಕ್ಕೆ ಸರ್ಕಾರ ಉತ್ತರ ನೀಡುತ್ತಿದೆ. ಈ ಮಧ್ಯೆ ಬಾಡಿಗೆದಾರರಿಗೆ ವಿದ್ಯುತ್ ಉಚಿತ ಇಲ್ಲವಾ ಎಂಬ ಪ್ರಶ್ನೆ ಉದ್ಭವಿಸಿತ್ತು. ಆನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಸರ್ಕಾರ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದೆ ಎಂದಿತ್ತು ಸೇವಾಸಿಂಧು ನಲ್ಲಿ ಆಧಾರ್ ಕಾರ್ಡ್ ಹಾಗೂ ಬಾಡಿಗೆ ಕರಾರು ಪತ್ರವನ್ನ ಆರ್ ಆರ್ ನಂಬರ್ ನೊಂದಿಗೆ ಲಗತ್ತಿಸಿದರೇ, ಸೌಲಭ್ಯ ಸಿಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.
ಇನ್ನೂ ಹೊಸದಾಗಿ ಮನೆ ಕಟ್ಟಿದವರು ಹಾಗೂ ಹೊಸದಾಗಿ ಬಾಡಿಗೆ ಬಂದವರ ಕಥೆ ಏನು ಎಂಬುದು ಪ್ರಶ್ನೆಯಾಗಿತ್ತು. ಸರ್ಕಾರ ಹಿಂದಿನ ವರ್ಷದ ಸರಾಸರಿ ಹಾಗೂ ಅದರ ಮೇಲಿಷ್ಟು ಅಂತಾ ಫ್ರೀ ವಿದ್ಯುತ್ ನೀಡಲು ಮುಂದಾಗಿದೆ. ಹೊಸದಾಗಿ ಮನೆ ಕಟ್ಟಿದವರಿಗೆ ಹಾಗೂ ಹೊಸದಾಗಿ ಬಾಡಿಗೆ ಬಂದವರಿಗೆ ಇದು ಸಮಸ್ಯೆಯಾಗುವ ಸಾಧ್ಯತೆ ಇತ್ತು. ಈ ನಿಟ್ಟಿನಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಕೆಜೆ ಜಾರ್ಜ್ ಹೊಸಮನೆಯ ಬಾಡಿಗೆರದಾರರಿಗೆ 53 ಯುನಿಟ್ ಹಾಗೂ ಅದರ ಮೇಲೆ 10 % ಉಚಿತ ಎಂದು ತಿಳಿಸಿದ್ದಾರೆ. ಹೆಚ್ಚುವರಿಯಾಗಿ ಬಿಲ್ ಬಂದರೆ, ಅದಕ್ಕೆ ಹಣ ಕಟ್ಟಬೇಕು ಎಂದು ತಿಳಿಸಿದ್ಧಾರೆ.
ಇದೇ ಜುಲೈ 1, ಶನಿವಾರದಿಂದ ಯೋಜನೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ರಾಜ್ಯದ ಪ್ರತಿ ಕುಟುಂಬಕ್ಕೆ ಅಂದರೆ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬಕ್ಕೂ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡಲಾಗುತ್ತದೆ.
