ಶಿಕಾರಿಪುರ : ಬೊಲೆರೋ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಕಾರಿಪುರದ ಶಾಂತಿವನ ಹಾಗೂ ಕಣಿವೆ ಮನೆ ಮಾರ್ಗ ಮಧ್ಯ ಸಂಭವಿಸಿದೆ.
ಶಿಕಾರಿಪುರದ ರಾಜು ಹಾಗೂ ಭದ್ರಾಪುರದ ಕಿರಣ್ ಕುಮಾರ್ ಕುಮಾರ್ ಮೃತ ದುರ್ದೈವಿಗಳು.
ರಾಜು ಹಾಗೂ ಕಿರಣ್ ಕುಮಾರ್ ಇಬ್ಬರು ತಮ್ಮ ಬೈಕ್ನಲ್ಲಿ ತೆರಳುತ್ತಿದ್ದಾಗ, ಬೊಲೆರೋ ಪಿಕಾಪ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಿಕ್ಆಪ್ ವಾಹನ ಬೈಕ್ ಸವಾರನನ್ನು ಒಂದು ಕಿಲೋಮೀಟರ್ ದೂರದವರೆಗೂ ಎಳೆದೊಯ್ದಿದ್ದು, ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
Shikaripura Road Accident 2 Bike Riders Killed


