shikaripura :  ಸೂಕ್ತ ಚಿಕಿತ್ಸೆ ಸಿಗದೆ ಹುಟ್ಟಿದ ಮಗು ಸಾವು..? | ವೈದ್ಯರ ವಿರುದ್ದ ಪ್ರತಿಭಟನೆ

prathapa thirthahalli
Prathapa thirthahalli - content producer

shikaripura : ಶಿಕಾರಿಪುರ :  ವೈದ್ಯರ ನಿರ್ಲಕ್ಷ್ಯದಿಂದ  ಹುಟ್ಟಿದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಶಿಕಾರಿಪುರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎದುರು ಗರ್ಭಿಣಿ ಕಡೆಯವರು ಪ್ರತಿಭಟನೆ ನಡೆಸಿದ್ದಾರೆ.

shikaripura : ಏನಿದು ಘಟನೆ

ಶಿಕಾರಿಪುರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಗರ್ಭಿಣಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದೆ ಹೆರಿಗೆ ಮಾಡಿಸುವುದಕ್ಕೆ ಎರಡು ದಿನ ತಡ ಮಾಡಿದ್ದಾರೆ. ಇದರಿಂದಾಗಿ ಹುಟ್ಟಿದ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿನ್ನಲೆ ಹೆರಿಗೆ ಸಂದರ್ಭದಲ್ಲೂ ಚಿಕಿತ್ಸೆ ನೀಡುವಲ್ಲಿ ತಡ ಮಾಡಿದ್ದರಿಂದ ಹುಟ್ಟಿದ ಮಗು ಸಾವನ್ನಪ್ಪಿದೆ. ಅದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಕೂಡಲೇ ವೈದ್ಯ ಗೋವರ್ಧನ್ ಅವರನ್ನು ಅಮಾನತು ಮಾಡಬೇಕು ಎಂದು ಮೇ 20 ರಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ 

ಕೆಂಚಿಗೊಂಡನಕೊಪ್ಪ ಗ್ರಾಮಸ್ಥರು, ಹೆರಿಗೆಯಾದ ಸೌಮ್ಯಾ ಸತೀಶ್‌ನಾಯ್ಕ ಕುಟುಂಬದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆಸ್ಪತ್ರೆ ಆಡಳಿತಾಧಿಕಾರಿ ಶಿವಾನಂದ ಹಾಗೂ ಪೊಲೀಸರು ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

 

TAGGED:
Share This Article