ಶಿಕಾರಿಪುರ: ಕಳೆದ ಒಂದು ವರ್ಷದಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಹೊಟ್ಟೆಯೊಳಗೆ ಇದ್ದ ಬರೋಬ್ಬರಿ 12.30 ಕೆ.ಜಿ. ತೂಕದ ಬೃಹತ್ ಗೆಡ್ಡೆಯನ್ನು ಶಿಕಾರಿಪುರ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

ನನ್ನ ಹಕ್ಕನ್ನು ನಾನು ಕೇಳ್ತಿನಿ, ನಾನೇನು ಸನ್ಯಾಸಿಯಲ್ಲ, ಬೇಳೂರು ಹೀಗಂದಿದ್ಯಾಕೆ
ಶಿಕಾರಿಪುರ ನಗರದ ಸೊಪ್ಪಿನಕೇರಿ ನಿವಾಸಿ 55 ವರ್ಷ ವಯಸ್ಸಿನ ಗಂಗಮ್ಮ ಎಂಬುವವರು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಶ್ರೀನಿವಾಸ್ ಅವರು ದಿನಾಂಕ ನವೆಂಬರ್ 25, ರಂದು ಶಸ್ತ್ರಚಿಕಿತ್ಸೆ ನಡೆಸಿದಾಗ, ಹೊಟ್ಟೆಯೊಳಗೆ ಬೃಹತ್ ಗಾತ್ರದ ಗೆಡ್ಡೆಯಿರುವುದು ಪತ್ತೆಯಾಗಿದೆ. ವೈದ್ಯರ ತಂಡವು ಸುದೀರ್ಘ ಆಪರೇಷನ್ ಮೂಲಕ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.
ಶಸ್ತ್ರಚಿಕಿತ್ಸೆಯ ನಂತರ ಗಂಗಮ್ಮನವರು ಆರೋಗ್ಯವಾಗಿದ್ದು, ಕೆಲವು ದಿನಗಳ ಕಾಲ ವೈದ್ಯರ ನಿಗಾದಲ್ಲಿ ಆಸ್ಪತ್ರೆಯಲ್ಲಿ ಇರಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಈ ಆಪರೇಷನ್ನಲ್ಲಿ ಡಾ. ಶ್ರೀನಿವಾಸ್, ಡಾ. ಪ್ರಕಾಶ್, ಅರಿವಳಿಕೆ ತಜ್ಞ ಡಾ. ಗುರುದತ್, ಸಿಸ್ಟರ್ ಭಾರತಿ ಹಾಗೂ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.
Shikaripura Doctors Remove 12.30 Kg Tumor


