ಅಮ್ಜದ್ ಮೇಲೆ ಅಟ್ಯಾಕ್​! ನಡೆದಿದ್ದೇನು? ಮಾಡಿದ್ಯಾರು? ಅರೆಸ್ಟ್ ಆದ್ರಾ?! ಏನಿದು ಘಟನೆ

ajjimane ganesh

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 3 2025:  ಶಿವಮೊಗ್ಗದ ಮುಸ್ಲಿಂ ಜನಾಂಗದಲ್ಲಿ ದಾನ ದರ್ಮ ಮೂಲಕ ಜನರ ಹೃದಯ ಗೆದ್ದಿರುವ ಅಮ್ಜದ್ ಮೇಲೆ ಕಳೆದ ರಾತ್ರಿ ಮೂವರು ಅಪ್ರಾಪ್ತ ಬಾಲಕರ ಗುಂಪು ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ಅಮ್ಜದ್ ಮತ್ತು ಶಾಹಿದ್ ಎನ್​ಟಿ ರೋಡ್​ ಪೆಟ್ರೊಲದ ಬಂಕ್ ಬಳಿ ಬೈಕ್ ನಲ್ಲಿ ಬರುವಾಗ ಹಿಂಬದಿಯಿಂದ ಬಂದ ಹುಡುಗರು ಅಮ್ಜದ್ ಮೇಲೆ ಮಚ್ಚು ಬೀಸಿದ್ದರು. ದಾಳಿಯ ರಭಸಕ್ಕೆ ಅಮ್ಜದ್ ಕೈ ಬೆರಳು ಹೊಟ್ಟೆ ಕುತ್ತಿಗೆ ಭಾಗಕ್ಕೆ ಬಲವಾದ ಗಾಯಗಳಾಗಿದ್ದವು.ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗೆ ಮ್ಯಾಕ್ಸ್ ಆಸ್ಪತ್ರೆಗೆ ಕರೆತರಲಾಯಿತು.

 Scrap Businessman Amjad Attacked in Shivamogga
Scrap Businessman Amjad Attacked in Shivamogga

ಆಸ್ಪತ್ರೆ ಎದುರು ನೂರಾರು ಜನರ ಜಮಾವಣೆ, ಬಿಗಿ ಪೊಲೀಸ್ ಬಂದೊಬಸ್ತ್

ಇನ್ನು ಆಮ್ಜದ್ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡರು. ಕಲವು ಯುವಕರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದರು. ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು . ಪರಿಸ್ಥಿತಿಯನ್ನು ಗಂಬೀರವಾಗಿ ಪರಿಗಣಿಸಿದ ಎಸ್ಪಿ ಮಿಥುನ್ ಕುಮಾರ್ ಆಸ್ಪತ್ರೆ ಬಳಿ ಹೆಚ್ಚಿನ ಪೊಲಿಸರನ್ನು ನಿಯೋಜಿಸಿದರು. ಆಸ್ಪತ್ರೆಗೆ ಅಡಿಷನಲ್ ಎಸ್ಪಿ ಕಾರ್ಯಪ್ಪ, ಡಿವೈಎಸ್​ಪಿ ಬಾಬು ಅಂಜನಪ್ಪ ದೊಡ್ಡಪೇಟೆ ಇನ್ ಸ್ಪೆಕ್ಟರ್ ರವಿ ಪಾಟಿಲ್ ಜಯನಗರ ಪಿಐ ಸಿದ್ದನಗೌಡ ಪಾಟೀಲ್ ಕೋಟೆ ಪಿಐ ಹರೀಶ್ ಪಾಟಿಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಸ್ಳಳದಲ್ಲಿ ಎರಡು ಕೆ.ಎಸ್ ಅರ್ ಪಿ ತುಕಡಿ ನಿಯೋಜಿಸಲಾಯಿತು. ಅಮ್ಜದ್ ಔಟ್ ಆಪ್ ಡೆಂಜರ್ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ ನಂತರ, ಹಲವರು ಆಸ್ಪತ್ರೆಯಿಂದ ಹೊರನಡೆದರು.

- Advertisement -
 Scrap Businessman Amjad Attacked in Shivamogga
Scrap Businessman Amjad Attacked in Shivamogga

ಫೌಜಾನ್ ಕೃತ್ಯ. ಅಮ್ಜದ್ ಹುಡುಗರ ಶಂಕೆ

ಅಮ್ಜದ್ ಮುಸ್ಲಿಂ ಪಾತಕ ಲೋಕದ ಯುವಕರಿಗೆ ಒಂದು ರೀತಿಯಲ್ಲಿ ವಿರುದ್ಧ ದಿಕ್ಕಿನವನು. ಅಪರಾಧ ಚಟುವಟಿಕೆಗೆ ಈತನ ಬೆಂಬಲವಿಲ್ಲ ಎಂಬುದು ವಿರೋಧಿಗಳ ಆಪಾದನೆ . ಇದೇ ಕಾರಣಕ್ಕೆ ಫೌಝಾನ್​ಗೂ ಅಮ್ಜದ್ ಎದುರಾಳಿಯಾಗಿದ್ದ. ಫೌಝಾನ್​ನ ಅಪರಾಧ ಕೃತ್ಯಗಳನ್ನ ಅಮ್ಜದ್ ಮೆಟ್ಟಿ ನಿಂತಿದ್ದ. ಈ ಕಾರಣಕ್ಕೆ ಆತನ ಮೇಲೆ ದಾಳಿ ನಡೆದಿದೆ ಎಂಬ ಆರೋಪಗಳು ದಟ್ಟವಾಗಿದೆ.  ಇನ್ನೊಂದೆಡೆ ಇದು ಬೇರೆಯವರ ಕೃತ್ಯ ಎಂಬ ಮಾತುಗಳು ಸಹ ಇವೆ. ಇವೆಲ್ಲದರ ನಡುವೆ ಪೊಲೀಸರು ಈ ಬಗ್ಗೆ ಕೆಲವರನ್ನ ವಿಚಾರಿಸಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ವಶಕ್ಕೆ ಪಡೆಯುವುದರಲ್ಲಿದ್ಧಾರೆ ಎನ್ನಲಾಗಿದೆ.

ಅಮ್ಜದ್ ವಿರುದ್ದವೂ ಹಲವು ಆರೋಪಗಳಿವೆ. ಆತನ ಗಡಿಪಾರಿಗೂ ಸಹ ಎಸಿ ಶಿಪಾರಸ್ಸು ಮಾಡಿದ್ದರು. ಆದರೆ ಹೈಕೋರ್ಟ್ ನಲ್ಲಿ ಅದನ್ನ ರದ್ದುಪಡಿಸಿಕೊಂಡು, ಒಳ್ಳೆ ಜೀವನ ಕಟ್ಟಿಕೊಳ್ಳುವ ಬಯಕೆಯಲ್ಲಿದ್ದ. ಪೊಲೀಸ್ ಇಲಾಖೆಯ ಸುಮಾರು ಐನೂರಕ್ಕು ಹೆಚ್ಚು ಪ್ರಕರಣಗಳಲ್ಲಿ ಅಮ್ಜದ್ ಸಾಕ್ಷಿಯಾಗಿದ್ದಾನೆ. ಈತ ಪಕ್ಕಾ ಪೊಲೀಸ್ ಇನ್​ಫಾರ್ಮರ್​ ಅನ್ನುವುದು ಮುಸ್ಲಿ ಪಾತಕಲೋಕದ ರೌಡಿಗಳಲ್ಲಿನ ಕೆಂಗಣ್ಣಿಗೆ ಗುರಿಯಾಗಿದೆ.

 Scrap Businessman Amjad Attacked in Shivamogga
Scrap Businessman Amjad Attacked in Shivamogga

ರೌಡಿ ಪಾಳಯದ  ಸಾಕಷ್ಟು ವಿರೋದಿಗಳನ್ನ ಅಮ್ಜದ್ ಅದುರು ಹಾಕಿಕೊಂಡಿದ್ದರೂ ಸಹ ಆತ ಸಮಾಜಮುಖಿಯಾಗಿದ್ದ.  ಆರ್ಥಿಕವಾಗಿ ಗಟ್ಟಿಯಾಗಿರುವ ಈತ ಹಿಂದು ಮುಸ್ಲಿಂ ಹಬ್ಬಗಳಲ್ಲಿ ಧಾನ ದರ್ಮ ಮಾಡಿ ಜನರ ಮನಸ್ಸು ಗೆದ್ದಿದ್ದಾನೆ. ಅಯ್ಯಪ್ಪ ಸ್ವಾಮಿಗೆ ಹೋಗುವ ಭಕ್ತರಿಗೆ ಪ್ರತಿ ವರ್ಷ ನೆರವು ನೀಡುತ್ತಾ ಬಂದಿದ್ದಾನೆ. ರಂಜಾನ್ ಹಬ್ಬದ ಸಂದರ್ಭದಲ್ಲಿ ಬಡ ಮುಸ್ಲಿಂರಿಗೆ ಸಹಾಯ ಹಸ್ತ ನೀಡಿದ್ದಾನೆ. ಇತ್ತಿಚ್ಚೆಗೆ ಸಂತೆ ಮೈದಾನ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಗಣಪತಿಗೆ ಹಾರ ಹಾಕುವ ಮೂಲಕ ಭಾವೈಕ್ಯತೆ ಮೆರೆದಿದ್ದ. ಈತನನ್ನು  ಕೇವಲ ಮುಸ್ಲಿಂ ಅಲ್ಲ, ಹಿಂದುಗಳು ಕೂಡ ಮೆಚ್ಚಿಕೊಂಡಿದ್ದರು. ಇದಕ್ಕೆ ನೆನ್ನೆ ಮ್ಯಾಕ್ಸ್ ಆಸ್ಪತ್ರೆ ಎದುರು ಜಮಾವಣೆಗೊಂಡಿದ್ದ ಜನರೇ ಸಾಕ್ಷಿಯಾಗಿದ್ಸರು. ಫೌಝಾನ್ ಸದ್ಯ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಅಮ್ಜದ್ ಮೇಲಿನ ದಾಳಿಗೆ ಈತನ ಷಡ್ಯಂತ್ರವಿದೆ ಎಂದು ಹೇಳಲಾಗುತ್ತಿದೆಯಾದರೂ, ಅದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

 Scrap Businessman Amjad Attacked in Shivamogga
Scrap Businessman Amjad Attacked in Shivamogga

ಇದನ್ನು ಸಹ ಓದಿ :  ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್​ ಧರಿಸಿದ್ದ ಆಗಂತುಕ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Amjad Attacked : Scrap Businessman Amjad Attacked in Shivamogga : ಅಮ್ಜದ್ ಮೇಲಿನ ದಾಳಿ, ಶಿವಮೊಗ್ಗ ಸ್ಕ್ರಾಪ್ ಬಿಸಿನೆಸ್, ರೌಡಿ ಫೌಜಾನ್, ಮಿಥುನ್ ಕುಮಾರ್ ಎಸ್ಪಿ, ಮ್ಯಾಕ್ಸ್ ಆಸ್ಪತ್ರೆ ಜಮಾವಣೆ ,Shivamogga Crime News, Amjad Attack, Rowdy Fauzan, Amjad Police Informer, Max Hospital Shivamogga, KSRP Deployment

Share This Article