KARNATAKA NEWS/ ONLINE / Malenadu today/ May 27, 2023 SHIVAMOGGA NEWS
ಭದ್ರಾವತಿ/ ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ಸ್ಪೀಡಾಗಿ ಮುಂದಕ್ಕೆ ಹೋದ ಘಟನೆಯೊಂದರ ವಿಡಿಯೋ ಇದೀಗ ಹೊರಬಿದ್ದಿದೆ. ಮಾಧ್ಯಮವೊಂದಕ್ಕೆ ಲಭ್ಯವಾದ ವಿಡಿಯೋದಲ್ಲಿ ಕಾಣುತ್ತಿರುವ ದೃಶ್ಯ ಭದ್ರಾವತಿಯದ್ದು ಎಂದು ಹೇಳಲಾಗಿದೆ.
ರಸ್ತೆಯಲ್ಲಿ ಜಾಗ್ರತೆ! ಬೇರೆಯವರ ಜೀವವೂ ಅಮೂಲ್ಯವೆ! ಬೈಕ್ನಲ್ಲಿ ಹೋಗುತ್ತಿದ್ದವರಿಗೆ ಡಿಕ್ಕಿ ಹೊಡೆದ ಕಾರು!ಹಿಂದಿದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ #ShivamoggaNews #shivamogga #Shimoga #MalnadNews #LocalNews #KannadaNewsWebsite #LatestNews #todaynewsheadlinesofworld, #newstoday pic.twitter.com/5ZhUqv7ZZV
— malenadutoday.com (@CMalenadutoday) May 27, 2023
ಇಷ್ಟಕ್ಕೂ ನಡೆದಿದ್ದೇನು?
ಬೈಕ್ನಲ್ಲಿ ಇಬ್ಬರು ಸವಾರರು ಹೋಗುತ್ತಿರುತ್ತದೆ. ಅವರ ಎಡಭಾಗದಲ್ಲಿ ಒಂದು ಒಮಿನಿ ಹೋಗುತ್ತಿರುತ್ತದೆ. ಇನ್ನೊಂದು ಭಾಗದಲ್ಲಿ ಕಾರೊಂದು ಓವರ್ ಟೇಕ್ ಮಾಡಲು ಟ್ರೈ ಮಾಡುತ್ತಾನೆ. ಈ ವೇಳೆ ಬೈಕ್ಗೆ ಡಿಕ್ಕಿ ಹೊಡೆದ ಕಾರು, ಅಲ್ಲಿಂದ ಎಸ್ಕೇಪ್ ಆಗುತ್ತದೆ. ಈ ಘಟನೆ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಕೃಷ್ಣ ಮೂರ್ತಿ ಮತ್ತು ಸಂತೋಷ್ ಎಂಬವರು, ಶಿವಮೊಗ್ಗದಿಂದ ತರೀಕೆರೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಭದ್ರಾವತಿ ಬೈಪಾಸ್ ರಸ್ತೆಯ ಸಿದ್ಧಾಪುರದ ಬಳಿ ಈ ಘಟನೆ ಸಂಭವಿಸಿದೆ.ಘಟನೆಯಲ್ಲಿ ಬೈಕ್ಗೆ ಡಿಕ್ಕಿ ಹೊಡೆದ ಬೆನ್ನಲ್ಲೆ ಐ10 ಕಾರು ಅಲ್ಲಿಂದ ಓವರ್ ಸ್ಪೀಡನಲ್ಲಿ ತೆರಳಿದೆ. ಹಿಟ್ ಅಂಡ್ ರನ್ ಅಪಘಾತದ ದೃಶ್ಯ ಬೈಕ್ ಹಿಂಬದಿಯಲ್ಲಿ ಬರುತ್ತಿದ್ದ ಮೈಸೂರು ಮೂಲದ ದೀಪಕ್ ಎಂಬವರ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ (dash cam) ಸೆರೆಯಾಗಿದೆ