ಸಾರೆಕೊಪ್ಪ ಬಂಗಾರಪ್ಪ ಜನರ ನಡುವೆ ಲೈವ್ ನಲ್ಲಿ ಬಂದಾಗ ಏನಾಯ್ತು ಗೊತ್ತಾ?

prathapa thirthahalli
Prathapa thirthahalli - content producer

Sarekoppa Bangarappa  : ಸಾರೆಕೊಪ್ಪ ಬಂಗಾರಪ್ಪನವರ 93 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಂಗಾರಪ್ಪನವರೇ ಖುದ್ದು ಜನರ ನಡುವೆ ಬಂದಂತ ಸಂದರ್ಭಕ್ಕೆ ವೇದಿಕೆಯಾಯಿತು.

ಕೃಷಿ ತೋಟಗಾರಿಕಾ ಮೇಳ

ಸಾರೆಕೊಪ್ಪ ಬಂಗಾರಪ್ಪ ಆ ಸಂದರ್ಭದಲ್ಲಿ ಅಕ್ಷರ ಸಹ ಚಿರ ಯುವಕನಂತೆ ಕಂಗೊಳಿಸಿದರು. ಬಣ್ಣ ಬಣ್ಣದ ಬಟ್ಟೆ ಕೂಲಿಂಗ್ ಗ್ಲಾಸ್ ನಲ್ಲಿ ಬಂಗಾರಪ್ಪ ಬರುತ್ತಿದ್ದಂತೆ ಸಭಾಂಗಣದಲ್ಲಿ ಸಿಳ್ಳೆ ಕೇಕೆಗಳ ಹರ್ಷೋದ್ಗಾರವೇ ಮುಗಿಲು ಮುಟ್ಟಿತು. ಹೌದು ವರ್ಣ ರಂಜಿತ ರಾಜಕಾರಣಿ ಎಸ್ ಬಂಗಾರಪ್ಪನವರ ಹುಟ್ಟು ಹಬ್ಬವನ್ನು ಸೊರಬ ಪಟ್ಟಣದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಂಗಾರಪ್ಪನವರ ಬಗ್ಗೆ ಎಐ ತಂತ್ರಜ್ಞಾನದಲ್ಲಿ ಸಾಕ್ಷ್ಯ ಚಿತ್ರವನ್ನು ನಿರ್ಮಿಸಲಾಗಿತ್ತು. ಬಂಗಾರಪ್ಪ ಬದುಕಿದ್ದಾಗ ಹೇಗಿದ್ದರೋ..ಅದೇ ರೂಪದಲ್ಲಿ ಚಿತ್ರವನ್ನು ನಿರ್ಮಿಸಲಾಗಿತ್ತು.

- Advertisement -

ಅವರ ಅಧಿಕಾರವಧಿಯಲ್ಲಿ ಜಾರಿಗೆ ತಂದ ಉಚಿತ ಪಂಪ್ ಸೆಟ್, ಆಶ್ರಯ, ಆರಾಧನಾ, ವಿಶ್ವ, ಗ್ರಾಮೀಣ ಕೃಪಾಂಕದಂತ ಒಂದೊಂದು ಯೋಜನೆಗೂ ಬಂಗಾರಪ್ಪ ಜೀವ ನೀಡಿದ್ದಾರೆ. ಇದನ್ನು ಎಐ ತಂತ್ರಜ್ಞಾನದಲ್ಲಿ ತೆರೆಯ ಮೇಲೆ ತಂದಾಗ, ಅಭಿಮಾನಿಗಳು ಭಾವುಕರಾದರು. ಸಿಳ್ಳೆ ಕೇಕೆ ಹಾಕಿ, ಬಂಗಾರಪ್ಪರಿಗೆ ಬಹುಪರಾಗ್ ಹೇಳಿದರು. ಬಂಗಾರಪ್ಪರ ಪರ ಘೋಷಣೆಗಳನ್ನು ಕೂಗಿದರು. ಸಭಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.

Sarekoppa Bangarappa

Sarekoppa Bangarappa

ಕೃಷಿ ತೋಟಗಾರಿಕಾ ಮೇಳ
Share This Article