sagara theft case : ಸಾಗರ ಪೇಟೆ ಪೊಲೀಸರ ಮಿಂಚಿನ ಕಾರ್ಯಾಚರಣೆ
sagara theft case : ಶಿವಮೊಗ್ಗ ಜಿಲ್ಲೆಯ ಸಾಗರ ಪೇಟೆಯಲ್ಲಿ ಎರಡು ದೊಡ್ಡ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಆರೋಪಿಗಳು ₹2.5 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ಕದ್ದಿದ್ದರೆ, ಎರಡನೇ ಪ್ರಕರಣದಲ್ಲಿ ದನಗಳನ್ನು ಕಳ್ಳತನ ಮಾಡಿದ್ದರು. ಪೊಲೀಸರು ಆರೋಪಿಗಳಿಂದ ₹2 ಲಕ್ಷ ಮೌಲ್ಯದ ಚಿನ್ನ ಮತ್ತು ₹20 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮನೆ ಕಳ್ಳತನ ಪ್ರಕರಣದ ವಿವರ: 2024 ಸೆಪ್ಟೆಂಬರ್ 7ರಂದು ಸಾಗರದ ಎಸ್.ಎನ್. ನಗರದಲ್ಲಿ ನಿಸಾರ್ ಅಹಮದ್ ರವರ ಮನೆಗೆ ನುಗ್ಗಿ ಆರೋಪಿಗಳು ₹2.5 ಲಕ್ಷ ಮೌಲ್ಯದ ಚಿನ್ನ ಮತ್ತು ₹11,000 ನಗದು ಕದ್ದಿದ್ದರು. ತನಿಖೆಯ ನಂತರ ಪೊಲೀಸರು ರಾಣಿಬೆನ್ನೂರಿನ ವಾಸಿಗಳಾದ ಮುಬಾರಕ್ ಬ್ಯಾಡಗಿ ಮತ್ತು ಮೊಹಮ್ಮದ್ ಸಲೀಂ ಅನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 23 ಗ್ರಾಂ ಚಿನ್ನ ಮತ್ತು ಕಳ್ಳತನದಲ್ಲಿ ಬಳಸಿದ 5 ಲಕ್ಷ ಮೌಲ್ಯದ ಇಕೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
sagara theft case : ದನ ಕಳ್ಳತನ ಪ್ರಕರಣದ ವಿವರ: 2025 ಮೇ 19ರ ರಾತ್ರಿ ಸಾಗರ ಪೇಟೆಯಲ್ಲಿ ಆರೋಪಿಗಳು ರಸ್ತೆ ಬದಿಯಲ್ಲಿ ಮಲಗಿದ್ದ ಎರಡು ದನಗಳನ್ನು ಕದ್ದಿದ್ದರು. ಈ ಪ್ರಕರಣದಲ್ಲಿ ಟಿಪ್ಪುನಗರದ ವಾಸಿಗಳಾದ ಅಬ್ದುಲ್ ಹಕೀಂ ಮತ್ತು ಮುಕ್ರಾಮುಲ್ಲ ಅನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹5,000 ನಗದು ಹಣ ಮತ್ತು ಕಳ್ಳತನದಲ್ಲಿ ಬಳಸಿದ ₹15 ಲಕ್ಷ ಮೌಲ್ಯದ ಸ್ಕಾರ್ಪಿಯೋ ಮತ್ತು ಮಹೀಂದ್ರ XUV500 ಕಾರುಗಳನ್ನು ಪತ್ತೆಹಚ್ಚಲಾಗಿದೆ.


ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ನಾಯಕ್ ಮತ್ತು ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್ ರವರ ನೇತೃತ್ವದ ತಂಡವು ಈ ಪ್ರಕರಣಗಳ ತನಿಖೆ ನಡೆಸಿದೆ. ಪೊಲೀಸ್ ವಿಭಾಗವು ಇಂತಹ ಅಪರಾಧಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.