ಡಿಸೆಂಬರ್,03, 2025 : ಮಲೆನಾಡು ಟುಡೆ ಸುದ್ದಿ : ಸಾಗರ : ಪ್ರಕರಣವೊಂದರಲ್ಲಿ ಅತಿ ವೇಗ ಮತ್ತು ಅಜಾಗರೂಕ ಚಾಲನೆ ಮಾಡಿ ಬೈಕ್ ಸವಾರನ ಸಾವಿಗೆ ಕಾರಣನಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಾಗರ ಕೋರ್ಟ್ ವ್ಯಕ್ತಿಯೊಬ್ಬರಿಗೆ 6 ತಿಂಗಳು ಜೈಲು, ₹ 7 ಸಾವಿರ ಜುಲ್ಮಾನೆ ಹಾಕಿದೆ.
ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ
ಸಾಗರ ಕೋರ್ಟ್ ತೀರ್ಪು
ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿ ಬೈಕ್ ಸವಾರನ ಮರಣಕ್ಕೆ ಕಾರಣನಾಗಿದ್ದ ತಾಲ್ಲೂಕಿನ ಮುರುಘಾ ಮಠದ ನಿವಾಸಿಗೆ ಇಲ್ಲಿನ ಜೆಎಂಎಫ್‌ಸಿ (JMFC) ನ್ಯಾಯಾಲಯವು 6 ತಿಂಗಳ ಕಠಿಣ ಜೈಲು ಶಿಕ್ಷೆ ಹಾಗೂ 7 ಸಾವಿರ ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿದೆ.

ತ್ಯಾಗರ್ತಿ ಬಳಿ ನಡೆದಿದ್ದ ಘಟನೆ
ಈ ಘಟನೆ 2024ರ ಮಾರ್ಚ್ 24ರಂದು ಶಿವಮೊಗ್ಗ ರಸ್ತೆಯ ತ್ಯಾಗರ್ತಿ ಕ್ರಾಸ್ ಬಳಿ ನಡೆದಿತ್ತು. ಶಿಕ್ಷೆಗೊಳಗಾದ ಅಪರಾಧಿ ಚಲಾಯಿಸುತ್ತಿದ್ದ ಕಾರು, ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ರಿಯಾನ್ ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಸಾಗರ ಟೌನ್ ಪೊಲೀಸ್ ಠಾಣೆ
ಘಟನೆ ಬೆನ್ನಲ್ಲೆ ಸ್ಥಳ ಪರಿಶೀಲನೆ ನಡೆಸಿದ್ದ ಸಾಗರ ನಗರ ಠಾಣೆ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.ಇನ್ನೂ ಕೋರ್ಟ್ನಲ್ಲಿ ಪ್ರಕರಣದ ಪರವಾಗಿ, ಸರ್ಕಾರಿ ಅಭಿಯೋಜಕರ ಪರವಾಗಿ ಹಿರಿಯ ಸಹಾಯಕ ವಕೀಲರಾದ ಚಂದ್ರಶೇಖರ್ ಎಸ್.ಎಚ್. ಅವರು ವಾದ ಮಂಡಿಸಿದ್ದರು.
ವಿಚಾರಣೆಯನ್ನು ಪೂರ್ತಿಗೊಳಿಸಿದ ನ್ಯಾಯಾಧೀಶರಾದ ಮಾದೇಶ್ ಎಂ.ವಿ. ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
