Sabarimala Ayyappa Temple : ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲವು ಮಂಡಲ-ಮಕರಜ್ಯೋತಿ ತೀರ್ಥಯಾತ್ರೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ನವೆಂಬರ್ 16 ರಂದು ಸಂಜೆ 5 ಗಂಟೆಗೆ ದೇವಾಲಯದ ಬಾಗಿಲನ್ನು ತೆರೆಯಲಾಯಿತು. ಪ್ರಧಾನ ಅರ್ಚಕ ಅರುಣ್ ಕುಮಾರ್ ನಂಬೂದಿರಿ ಅವರು ತಂತ್ರಿ ಕಂಠರಾರ್ ಮಹೇಶ್ ಮೋಹನರಾರು ಅವರ ಸಮ್ಮುಖದಲ್ಲಿ ದೇಗುಲದ ಬಾಗಿಲು ತೆರೆದು ದೀಪ ಬೆಳಗುವ ಮೂಲಕ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಿದರು.
ಟ್ಯೂಷನ್‌ನಿಂದ ಮಗುವನ್ನು ಕರೆತರುತ್ತಿದ್ದಾಗ ಮಹಿಳೆಗೆ ಶಾಕ್: 10 ಗ್ರಾಂ ಚಿನ್ನದ ಸರ ಕಳ್ಳತನ
ದೇಗುಲದ ಬಾಗಿಲು ತೆರೆದ ನಂತರ, ಪ್ರಧಾನ ಅರ್ಚಕರು ಮಾಳಿಗಪ್ಪುರಂ ದೇಗುಲದ ಅರ್ಚಕರಾದ ವಾಸುದೇವನ್ ನಂಬೂದಿರಿ ಅವರಿಗೆ ಕೀಲಿಕೈ ಮತ್ತು ಭಸ್ಮವನ್ನು ಹಸ್ತಾಂತರಿಸಿದರು. ಬಳಿಕ, ಪ್ರಧಾನ ಅರ್ಚಕರು 18 ಮೆಟ್ಟಿಲು ಇಳಿದು, ಕೊಡಿಮರ ಬಳಿಯಿರುವ ಕುಂಡಕ್ಕೆ ಅಗ್ನಿಸ್ಪರ್ಶ ಮಾಡಿದರು. ಇದಾದ ನಂತರ, ಇರುಮುಡಿ ಹೊತ್ತ ಭಕ್ತಾದಿಗಳಿಗೆ 18 ಪವಿತ್ರ ಮೆಟ್ಟಿಲುಗಳ ಮೂಲಕ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಅವಕಾಶ ನೀಡಲಾಯಿತು. ನವೆಂಬರ್ 17 ರಂದು ವೃಶ್ಚಿಕ ಮಾಸದ ವಿಶೇಷ ಪೂಜೆಗಳು ವಿಧ್ಯುಕ್ತವಾಗಿ ಆರಂಭಗೊಳ್ಳಲಿವೆ.
ಡಿಸೆಂಬರ್ 26 ರಂದು ಸಂಜೆ 6.30ಕ್ಕೆ ಅಯ್ಯಪ್ಪ ಸ್ವಾಮಿಗೆ ತಂಗ ಅ೦ಗಿ (ಚಿನ್ನದ ಆಭರಣ) ತೊಡಿಸಿ ದೀಪಾರಾಧನೆ ಮಾಡಲಾಗುವುದು. ಡಿಸೆಂಬರ್ 27 ರಂದು ಮಂಡಲ ಪೂಜೆ ಮುಕ್ತಾಯಗೊಂಡ ನಂತರ ರಾತ್ರಿ 10 ಗಂಟೆಗೆ ದೇಗುಲವನ್ನು ಮುಚ್ಚಲಾಗುವುದು. ಬಳಿಕ, ಡಿಸೆಂಬರ್ 30 ರಂದು ಸಂಜೆ 5 ಗಂಟೆಗೆ ಮಕರ ಮಾಸದ ಪೂಜೆಗಳಿಗಾಗಿ ಮತ್ತೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಕೊನೆಯದಾಗಿ, ಜನವರಿ 14 ರಂದು ವಿಶ್ವಪ್ರಸಿದ್ಧ ಮಕರ ಜ್ಯೋತಿ ಮಹೋತ್ಸವ ನಡೆಯಲಿದೆ ಮತ್ತು ಜನವರಿ 20 ರಂದು ಮಕರ ಮಾಸದ ಪೂಜೆಗಳು ಪೂರ್ಣಗೊಂಡು ದೇಗುಲದ ಬಾಗಿಲು ಮುಚ್ಚಲಾಗುವುದು ಎಂದು ತಿಳಿದುಬಂದಿದೆ.
Sabarimala Ayyappa Temple
