ಟ್ಯೂಷನ್‌ನಿಂದ ಮಗುವನ್ನು ಕರೆತರುತ್ತಿದ್ದಾಗ ಮಹಿಳೆಗೆ ಶಾಕ್: 10 ಗ್ರಾಂ ಚಿನ್ನದ ಸರ ಕಳ್ಳತನ

ಶಿವಮೊಗ್ಗ : ಮಹಿಳೆಯೊಬ್ಬರು ತಮ್ಮ ಮಗಳನ್ನು ಟ್ಯೂಷನ್​ನಿಂದ ಸ್ಕೂಟಿಯಲ್ಲಿ ಕರೆದುಕೊಂಡು ಬರುವ ವೇಳೆ ಕಳ್ಳರು 10 ಗ್ರಾಂ ಚಿನ್ನದ ಸರವನ್ನು ಕದ್ದೊಯ್ದಿರುವ ಘಟನೆ  ನಗರದ ರಾಮಕೃಷ್ಣ ಸ್ಕೂಲ್​ ಎದುರು ನಡೆದಿದೆ.

SHIMOGA CHAIN SNATCHING  ಘಟನೆಯ ವಿವರ

ಗೋಪಾಳ ನಿವಾಸಿ ಮಹಿಳೆಯೊಬ್ಬರು ಪ್ರತಿದಿನದಂತೆ ತಮ್ಮ ಮಗುವನ್ನು ಟ್ಯೂಷನ್‌ಗೆ ಬಿಟ್ಟು, ನಂತರ ಕರೆದುಕೊಂಡು ಬರುತ್ತಿದ್ದರು. ನವೆಂಬರ್ 16ರಂದು ಮಗುವಿನೊಂದಿಗೆ ಹಿಂದಿರುಗುತ್ತಿದ್ದ ವೇಳೆ, ಹಿಂದಿನಿಂದ ವೇಗವಾಗಿ ಬಂದ ಇಬ್ಬರು ಕಳ್ಳರು ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. 

ಕಳುವಾದ ಚಿನ್ನದ ಸರದ ತೂಕವು ಸುಮಾರು 10 ಗ್ರಾಂ ಆಗಿದ್ದು, ಇದರ ಅಂದಾಜು ಮೌಲ್ಯ ₹50,000 ರೂಪಾಯಿ ಎಂದು ಅಂದಾಜಿಸಲಾಗಿದೆ.  ಈ ಹಿನ್ನೆಲೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.