ಶಿವಮೊಗ್ಗ: ರೈಲ್ವೆ ಸಂರಕ್ಷಣಾ ಪಡೆಯ (RPF) ‘ಆಪರೇಷನ್ ಅಮನಾತ್’ ಕಾರ್ಯಕ್ರಮದ ಅಡಿಯಲ್ಲಿ, ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಮಹತ್ವದ ಕಾರ್ಯಾಚರಣೆಯೊಂದು ನಡೆದಿದೆ.

ಮೈಸೂರು ತಾಳಗುಪ್ಪ ಎಕ್ಸ್ಪ್ರೆಸ್ ರೈಲಿನ B-2 ಕೋಚ್‌ನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಶ್ರವಣ ಯಂತ್ರವನ್ನು ಬಿಟ್ಟು ಹೋಗಿರುವ ಕುರಿತು RPF/ಶಿವಮೊಗ್ಗಕ್ಕೆ ರೈಲ್‌ಮದದ್ (Railmadad) ಮೂಲಕ ದೂರು ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ RPF ಸಿಬ್ಬಂದಿ, ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಿದರು. ಶೋಧದ ನಂತರ, ರೈಲಿನ ಅದೇ ಕೋಚ್‌ನಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ ಅಂದಾಜು 83,000 ಮೌಲ್ಯದ ಶ್ರವಣ ಯಂತ್ರವನ್ನು ಯಶಸ್ವಿಯಾಗಿ ಪತ್ತೆ ಹಚ್ಚಿ ಸುರಕ್ಷಿತವಾಗಿ ವಶಪಡಿಸಿಕೊಂಡರು. ನಂತರ ಈ ಬೆಲೆಬಾಳುವ ವೈದ್ಯಕೀಯ ಉಪಕರಣವನ್ನು ಸಂಬಂಧಪಟ್ಟ ಪ್ರಯಾಣಿಕರಿಗೆ ಹಸ್ತಾಂತರಿಸಲಾಯಿತು.
- Advertisement -

RPF Shivamogga


