ಅಮ್ಜದ್​ ಮರ್ಡರ್ ಕೇಸ್! ಆರೋಪಿ ಅಕ್ಬರ್ ಕಾಲಿಗೆ ಪೊಲೀಸ್ ಫೈರ್!

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 08  2025: ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಶೀಟರ್​ನ ಕಾಲಿಗೆ ಗುಂಡು ಹಾರಿಸಿದ್ದಾರೆ. ಇತ್ತೀಚೆಗೆ ನಡೆದಿದ್ದ  ಸ್ಕ್ರ್ಯಾಪ್​ ಉದ್ಯಮಿ ಅಮ್ಜದ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ರೌಡಿಶೀಟರ್ ಅಕ್ಬರ್‌ನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಲು ತೆರಳಿದ್ದ  ಈತ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಅಕ್ಬರ್​ ಕಾಲಿಗೆ ಗುಂಡು ಹಾರಿಸಿದ ಬಳಿಕ ಈತನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ  ನಡೆದಿದೆ ಎಂದು ತಿಳಿಸಿದ ಎಸ್​ಪಿ 22 ವರ್ಷ ವಯಸ್ಸಿನ ಅಕ್ಬರ್ ಮೇಲೆ ಈಗಾಗಲೇ ಕೊಲೆ ಯತ್ನ ಹಾಗೂ ಸುಲಿಗೆಯಂತಹ ಗಂಭೀರ ಸ್ವರೂಪದ ನಾಲ್ಕು ಪ್ರಕರಣಗಳಿವೆ. ಅಮ್ಜದ್ ಕೊಲೆ ಪ್ರಕರಣದಲ್ಲಿ ಈ ಹಿಂದೆ 5 ಮಂದಿಯನ್ನು ಬಂಧಿಸಲಾಗಿತ್ತು ಮತ್ತು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಪ್ರಕರಣದ ಆರೋಪಿಯಾಗಿದ್ದ  ಅಕ್ಬರ್‌ಗಾಗಿ ನಮ್ಮ ಸಿಬ್ಬಂದಿ  ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಇಂದು ಖಚಿತ ಮಾಹಿತಿಯ ಮೇರೆಗೆ ಅಕ್ಬರ್‌ನನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದಾಗ, ಆತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಪಿಎಸ್‌ಐ ಮಂಜುನಾಥ್ ಅವರು ಆತ್ಮರಕ್ಷಣೆಗಾಗಿ ಆರೋಪಿ ಅಕ್ಬರ್‌ನ ಎಡಗಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

- Advertisement -
Shivamogga Breakin Rowdy Sheeter Akbar Shot in Leg by Police in Amjad Murder Case
Shivamogga Breakin Rowdy Sheeter Akbar Shot in Leg by Police in Amjad Murder Case

 Shivamogga Breakin Rowdy Sheeter Akbar Shot in Leg by Police in Amjad Murder Case 

Akbar Arrest News, Shivamogga Police Firing, Amjad Murder Case Accused, Shivamogga Rowdy Sheeter List, PSI Manjunath Action, SP Mithun Kumar Statement ,,Rowdy Sheeter Akbar

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Scrap Businessman Amjad Attacked in Shivamogga
Scrap Businessman Amjad Attacked in Shivamogga
Share This Article
Leave a Comment

Leave a Reply

Your email address will not be published. Required fields are marked *