ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ಹೆಚ್ಚಾಗುತ್ತಿದ್ದು, ಈ ಸಂಬಂಧ ಇನ್ನೊಂದು ಹಂತದ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧದ ಹೋರಾಟ ತೀವ್ರಗೊಳಿಸಲು ಶಿವಮೊಗ್ಗದಲ್ಲಿ ದುಂಡು ಮೇಜಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ಸ್ವಾಮೀಜಿಗಳು ಸೇರಿ ಹಲವು ಪ್ರಮುಖರಿಂದ ಜನಾಂದೋಲನಕ್ಕೆ ರೂಪುರೇಷೆ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ/Round Table meeting
ಶರಾವತಿ ನದಿ ಕಣಿವೆಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಪಂಪ್ಡ್ ಸ್ಟೋರೇಜ್ ಯೋಜನೆಯು ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ಗೊತ್ತಿರುವ ವಿಚಾರ. ಆದಾಗ್ಯು ರಾಜಕಾರಣ ಹಿತಾಸಕ್ತಿ ಯೋಜನೆಗೆ ಟೆಂಡರ್ ಆಗುವಂತೆ ಮಾಡುತ್ತಿದೆ.
ಈ ನಿಟ್ಟಿನಲ್ಲಿ ಪರಿಸರ ಪ್ರೇಮಿಗಳು ಈ ಯೋಜನೆಯ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ. ಪರಿಸರ ನಾಶದ ಅಪಾಯದ ಕುರಿತು ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸರ್ಕಾರವು ಈ ಜನಾಭಿಪ್ರಾಯಕ್ಕೆ ಸೂಕ್ತ ಮನ್ನಣೆ ನೀಡಿಲ್ಲ. ಕೆಪಿಸಿಎಲ್ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ಮೂಲಕ ಯೋಜನೆಯ ನ್ಯೂನತೆಗಳು ಹಾಗೂ ಸಂಭವನೀಯ ಪರಿಸರ ಹಾನಿಯ ಬಹುತೇಕ ಮಾಹಿತಿಗಳನ್ನು ಮರೆಮಾಚಿ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮುಂದುವರಿಸಿದೆ ಎಂದು ಆರೋಪಿಸಿರುವ ಹೋರಾಟಗಾರರು ದುಂಡು ಮೇಜಿನ ಸಭೆಗೆ ಮುಂದಾಗಿದ್ದಾರೆ
ಶಿವಮೊಗ್ಗಕ್ಕೆ ಅಕ್ಕಪಡೆ ನೇಮಕಾತಿ! ಸರ್ಕಾರಿ ಕೆಲಸ ನೀವೂ ಸಹ ಮಾಡಬಹುದು! ಈ ಮಾಹಿತಿ ಓದಿ
ನಿವೃತ್ತ ನ್ಯಾಯಮೂರ್ತಿಗಳು, ವಿವಿಧ ಮಠಾಧೀಶರು, ರೈತ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು, ಸಾಹಿತಿಗಳು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರನ್ನು ಒಳಗೊಂಡಂತೆ, ನವೆಂಬರ್ 11ರ ಮಂಗಳವಾರದಂದು ಮಧ್ಯಾಹ್ನ 12.30ಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ‘ಶರಾವತಿ ನದಿ ಕಣಿವೆ ಉಳಿಸಿ ಸಮಿತಿ – ಕರ್ನಾಟಕದ ನೇತೃತ್ವದಲ್ಲಿದುಂಡು ಮೇಜಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಆನವಟ್ಟಿ ನಿವಾಸಿ, ಆಲ್ಕೊಳ ಇಡ್ಲಿ ಗಾಡಿ, ₹1 ಲಕ್ಷ ಮತ್ತು ಪೊಲೀಸ್ ಪ್ರಕಟಣೆಯ ಕಥೆ! ಶಿವಮೊಗ್ಗಲ್ಲಿ ಹೀಗೆಲ್ಲಾ ಆಗುತ್ತೆ
ಈ ಸಭೆಯಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ. ಎನ್ ಸಂತೋಷ್ ಹೆಗ್ಡೆ, ನ್ಯಾ. ವಿ ಗೋಪಾಲಗೌಡರು, ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ, ಕಪ್ಪತ್ತಗುಡ್ಡ ನಂದಿವೇರಿ ಮಠ, ನಿಡಸೋಸಿ ಮಠ, ಮೂಲಗದ್ದೆ ಮಠ, ಬಂಗಾರುಮಕ್ಕಿ ಮಠದ ಮಾರುತಿ ಗುರೂಜಿ, ಬಸವ ಕೇಂದ್ರದ ಶ್ರೀಗಳು, ಧರ್ಮಗುರು ರೋಷನ್ ಪಿಂಟೋ, ಮುಸ್ಲಿಂ ಸಮಾಜದ ಹಿರಿಯ ಮುಖಂಡ ಅಬ್ದುಲ್ ವಹಾಬ್, ಡಾ.ಶ್ರೀಪತಿ ಎಲ್.ಕೆ., ಪ್ರೊ. ಬಿ.ಎಂ. ಕುಮಾರಸ್ವಾಮಿ, ಅನಂತ ಹೆಗಡೆ ಅಶೀಸರ, ಅಖಿಲೇಶ್ ಚಿಷ್ಠಿ, ರೈತ ಮುಖಂಡರಾದ ಕೆ.ಟಿ.ಗಂಗಾಧರ್, ದಿನೇಶ್ ಶಿರಿವಾಳ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಶಿವಮೊಗ್ಗ : 3 ತಿಂಗಳ ಗರ್ಭಿಣಿಯನ್ನ ಹೊರಹಾಕಿದ್ದಕ್ಕೆ, ಒಂದು ವರ್ಷ ಅಂದರ್! ಕೋರ್ಟ್ ತೀರ್ಪು!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
