Rolls Royce : ತೀರ್ಥಹಳ್ಳಿ ಮೂಲದ ಯುವತಿಗೆ ರೋಲ್ಸ್ ರಾಯ್ಸ್ ಕಾರು ಕಂಪನಿಯಲ್ಲಿ ಕೆಲಸ
ಪ್ರತಿಷ್ಠಿತ ರೋಲ್ಸ್ ರಾಯ್ಸ್ ಕಾರು ಕಂಪನಿಯಲ್ಲಿ ತೀರ್ಥಹಳ್ಳಿ ಮೂಲದ ಮಂಗಳೂರು ನಿವಾಸಿ ರಿತುಪರ್ಣ ಅವರು ಉದ್ಯೋಗ ಪಡೆದುಕೊಂಡಿದ್ದಾರೆ.
ಬಾಲ್ಯದಲ್ಲಿ ವೈದ್ಯೆಯಾಗುವ ಕನಸು ಕಂಡಿದ್ದ ರಿತುಪರ್ಣ ನಂತರ ಶಿಕ್ಷಣದ ಹಾದಿ ಬದಲಾಯಿಸಿದರು. ಅವರು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಬೋಟಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದರು.
ಇನ್ನೋವೇಶನ್ ಸಮ್ಮೇಳನದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಿತುಪರ್ಣ ಅವರು ತಮ್ಮ ಅಸಾಧಾರಣ ಪ್ರತಿಭೆಯನ್ನು ಅನಾವರಣಗೊಳಿಸಿದರು. ಈ ಸಾಧನೆಯು ಅವರಿಗೆ ರೋಲ್ಸ್ ರಾಯ್ಸ್ ಕಂಪನಿಯಲ್ಲಿ ಇಂಟರ್ನ್‌ಷಿಪ್ ಪಡೆಯುವ ಅವಕಾಶವನ್ನು ತಂದುಕೊಟ್ಟಿತು. ಎಂಟು ತಿಂಗಳ ಟಾಸ್ಕ್ ಟೆಸ್ಟ್‌ನಲ್ಲಿ ಅವರ ಕಾರ್ಯಪಟುತ್ವ ಮತ್ತು ದಕ್ಷತೆ ಕಂಪನಿಯ ಗಮನ ಸೆಳೆಯಿತು. ಅವರ ಪ್ರತಿಭೆಯಿಂದ ಪ್ರಭಾವಿತರಾದ ರೋಲ್ಸ್ ರಾಯ್ಸ್, ರಿತುಪರ್ಣ ಅವರಿಗೆ ನೇರವಾಗಿ ನೇಮಕಾತಿ ಪತ್ರ ನೀಡಿದೆ.

