Robbery Attempt ಶಿವಮೊಗ್ಗದಲ್ಲಿ ಮತ್ತೆ ಆಗಂತುಕರ ಓಡಾಟ , ಸಿಸಿಟಿವಿಯಲ್ಲಿ ಸೆರೆ
ಶಿವಮೊಗ್ಗ : ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ಇತ್ತೀಚೆಗೆ ಮಾರಕಾಸ್ತ್ರ ಹಿಡಿದು ದುಷ್ಕರ್ಮಿಗಳು ದರೋಡೆಗೆ ಹೊಂಚು ಹಾಕಿದ್ದ ಘಟನೆ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಪ್ರಕರಣ ನಗರದಲ್ಲಿ ನಡೆದಿದೆ. ಭಾನುವಾರ ರಾತ್ರಿ ಶಿವಮೊಗ್ಗದ ಶರಾವತಿ ನಗರ ಬಡಾವಣೆಯಲ್ಲಿ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಓಡಾಡಿದ್ದು, ಈ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಈ ಘಟನೆ ಶರಾವತಿ ನಗರ ಬಡಾವಣೆಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿರುವಂತೆ ಇಬ್ಬರು ವ್ಯಕ್ತಿಗಳು ತಲೆಗೆ ಟೋಪಿ ಮತ್ತು ಮಫ್ಲರ್ ಹಾಕಿಕೊಂಡು, ಕೈಯಲ್ಲಿ ಆಯುಧ ಹಿಡಿದು ಬಡಾವಣೆಯಲ್ಲಿ ಸಂಚರಿಸಿದ್ದಾರೆ. ಅಷ್ಟೇ ಅಲ್ಲದೆ, ಒಂದು ಮನೆಯ ಗೇಟ್ ಹಾರಿ ಹೊರಗೆ ಹೋಗುವ ದೃಶ್ಯವೂ ಸೆರೆಯಾಗಿದೆ.
ಈ ದುಷ್ಕರ್ಮಿಗಳ ಪತ್ತೆಗಾಗಿ ನಗರದ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬಲೆ ಬೀಸಿದ್ದಾರೆ.



View this post on Instagram