rm manjunath gowda : ಡಿಸಿಸಿ ಬ್ಯಾಂಕ್ ಹಗರಣ:ಆರ್.ಎಂ. ಮಂಜುನಾಥ್ ಗೌಡರಿಗೆ ಜಾಮೀನು ಮಂಜೂರು
ತೀರ್ಥಹಳ್ಳಿ: ಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. (ಜಾರಿ ನಿರ್ದೇಶನಾಲಯ) ವಶದಲ್ಲಿದ್ದ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ್ ಗೌಡ ಅವರಿಗೆ ಕೊನೆಗೂ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ಡಿಸಿಸಿ ಬ್ಯಾಂಕ್ನಲ್ಲಿ ನಕಲಿ ಚಿನ್ನ ಅಡಮಾನ ಪ್ರಕರಣ ವಿಚಾರದಲ್ಲಿ ಇ.ಡಿ. ವಶದಲ್ಲಿದ್ದ ಮಂಜುನಾಥ್ ಗೌಡರು ಈ ಹಿಂದೆ ಸಲ್ಲಿಸಿದ್ದ ಮೂರು ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿದ್ದವು.ಈ ಹಿನ್ನೆಲೆ ಸರಿ ಸುಮಾರು ಎರಡುವರೆ ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದ ಆರ್.ಎಂ. ಮಂಜುನಾಥ್ ಗೌಡರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಇಂದು ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ.
