rippon pete : ಪ್ರಿಯಕರನೊಂದಿಗೆ ವಿಷ ಸೇವಿಸಿ ವಿವಾಹಿತ ಮಹಿಳೆ ಸಾವು

prathapa thirthahalli
Prathapa thirthahalli - content producer

rippon pete : ರಿಪ್ಪನ್​ ಪೇಟೆ :  ವಿವಾಹಿತ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಿಪ್ಪನ್​ ಪೇಟೆ ಸಮೀಪದ ತಮ್ಮಡಿಕೊಪ್ಪದಲ್ಲಿ ನಡೆದಿದೆ.ಸುಜಾತ (33) ಹಾಗೂ ಸಚಿನ್​ (27) ಮೃತರು.

rippon pete : ಏನಿದು ಘಟನೆ

ಸುಜಾತ ಎಂಬುವವರಿಗೆ 14 ವರ್ಷದ ಹಿಂದೆ ಮದುವೆ ಆಗಿತ್ತು. ದಂಪತಿಗಳಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಆಕೆಯ ಪತಿ ನಾಪತ್ತೆಯಾಗಿದ್ದ. ಆ ಹಿನ್ನಲೆ ಬೆಳಗಾವಿ ಗಂಡನ ಮನೆಯಲ್ಲಿದ್ದ ಸುಜಾತ ತನ್ನ ತವರು ಮನೆಯಾದ ರಿಪ್ಪನ್ ಪೇಟೆಗೆ​ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಆವೇಳೆ ಆಕಸ್ಮಿಕವಾಗಿ ಫೋನ್​ ಕರೆ ಮೂಲಕ  ಆಯನೂರು ಕೋಟೆ ಗ್ರಾಮದಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಸಚಿನ್​ ಎಂಬಾತನ ಪರಿಚಯವಾಗಿದೆ. ನಂತರ ಆ ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಸಹ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ನಂತರ ಸಚಿನ್​ ಆಕೆಗೆ ಬಾಳು ಕೊಡುವುದಾಗಿ ಹೇಳಿ ಕೆಲ ದಿನಗಳಿಂದ ಆಕೆಯೊಂದಿಗೆ ವಾಸವಾಗಿದ್ದ. ಆ ವಿಷಯ ಸುಜಾತರ ಸಹೋದರಿಗೆ ತಿಳಿದು ಇಬ್ಬರಿಗೂ ಬುದ್ದಿಮಾತನ್ನು ಹೇಳಿದ್ದರು. ಇದರಿಂದ ಮನನೊಂದ ಸಚಿನ್​ ಹಾಗೂ ಸುಜಾತ ಗುರುವಾರ ಬೆಳಿಗ್ಗೆ ಕಳೆನಾಶಕವನ್ನು ಕುಡಿದಿದ್ದಾರೆ. ಕೂಡಲೇ  ಇಬ್ಬರನ್ನೂ ಮೆಗ್ಗಾನ್​  ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಸಾವನ್ನಪ್ಪಿದ್ದಾರೆ.ಇತ್ತ ಮಹಿಳೆಯ ಇಬ್ಬರು ಮಕ್ಕಳು ತಂದೆ ಹಾಗೂ ತಾಯಿ ಇಬ್ಬರನ್ನು ಕಳೆದುಕೊಂದು ಅನಾಥರಾಗಿದ್ದಾರೆ.

 

TAGGED:
Share This Article