ಮುಂದಿನ ಮೂರು ದಿನ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​

ajjimane ganesh

Red Alert Heavy Rains Predicted for 3 Days  ಮುಂದಿನ ಮೂರು ದಿನ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​

Red Alert Heavy Rains Predicted for 3 Days  ಶಿವಮೊಗ್ಗ / ಬೆಂಗಳೂರು, ಜುಲೈ 24, 2025, ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವೆಡೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Meteorological Department) ಹೇಳಿದೆ. ಇವತ್ತಿನಿಂದ ಅಂದರೆ, ಜುಲೈ 24 ರಿಂದ 26ರವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ.  

Red Alert Heavy rain Forecast 22 Urgent Weather Alert july 16total rain details imd
total rain details imd
ವಿವಿಧ ಜಿಲ್ಲೆಗಳಲ್ಲಿ ಅಲರ್ಟ್!
ಜುಲೈ 24 : ಶಿವಮೊಗ್ಗ ಜಿಲ್ಲೆಗೆ ಇವತ್ತು ಆರೆಂಜ್ ಅಲರ್ಟ್, ನೀಡಲಾಗಿದ್ದು,  ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಜುಲೈ 25: ಬಾಗಲಕೋಟೆ, ಬೆಳಗಾವಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಹಾಸನ, ಕೊಡಗು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, ಮತ್ತು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಜುಲೈ 26: ಮಲೆನಾಡಿನ ಎಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಮೈಸೂರು, ದಾವಣಗೆರೆ, ಬೆಳಗಾವಿ, ಧಾರವಾಡ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಇರಲಿದೆ. ಇನ್ನು ನಿನ್ನೆ ಬುಧವಾರ ಉತ್ತರ ಕನ್ನಡ ಜಿಲ್ಲೆಯ ಮಂಕಿ, ಕುಮಟಾ, ಗೇರುಸೊಪ್ಪ, ಶಿರಸಿ, ಕಾರವಾರ, ಶಿವಮೊಗ್ಗದ ಆಗುಂಬೆ ಮತ್ತು ದಕ್ಷಿಣ ಕನ್ನಡದ ಸುಳ್ಯ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

Red Alert Heavy Rains Predicted for 3 Days Orange and Yellow Alerts have also been issued for several other districts, including Shivamogga and Chikkamagaluru.

ಕರ್ನಾಟಕ ಮಳೆ, ಹವಾಮಾನ ಮುನ್ಸೂಚನೆ, ರೆಡ್ ಅಲರ್ಟ್, ಆರೆಂಜ್ ಅಲರ್ಟ್, ಯೆಲ್ಲೊ ಅಲರ್ಟ್, ಕರಾವಳಿ, ಮಲೆನಾಡು, ಶಿವಮೊಗ್ಗ, ಹವಾಮಾನ ಇಲಾಖೆ , Karnataka rain, weather forecast, red alert, orange alert, yellow alert, coastal Karnataka, Malnad, Shivamogga, Meteorological Department , #KarnatakaRains, #WeatherAlert, #RedAlert, #KarnatakaWeather, #Monsoon, #HeavyRains, #Malnad, #CoastalKarnataka

 

Share This Article