ಇಂದಿನ ರಾಶಿ ಭವಿಷ್ಯ Dec 17 2025 ಯಾವ ರಾಶಿಗೆ ಯಶಸ್ಸು, ಯಾರಿಗೆ ಸಮಸ್ಯೆToday Rashi Bhavishya December 17 2025 Success for Signs
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸದ ಬುಧವಾರ ಇಂದು ಬಹುಳ ತ್ರಯೋದಶಿ ರಾತ್ರಿ 2:11ರ ವರೆಗೆ ಇದ್ದು, ನಂತರ ಚತುರ್ದಶಿ ಪ್ರವೇಶವಾಗಲಿದೆ. ವಿಶಾಖ ನಕ್ಷತ್ರವು ಸಂಜೆ 5:43 ರ ವರೆಗೆ ಇರಲಿದ್ದು, ನಂತರ ಅನೂರಾಧ ನಕ್ಷತ್ರ ಪ್ರಾರಂಭವಾಗುತ್ತದೆ. ದುರ್ಮುಹೂರ್ತ ಮಧ್ಯಾಹ್ನ 11:34 ರಿಂದ 12:18 ರ ವರೆಗೆ ಇದ್ದು, ಅಮೃತ ಘಳಿಗೆ ಬೆಳಗ್ಗೆ 7:58 ರಿಂದ 9:44 ರ ವರೆಗೆ ಇದೆ. ರಾಹುಕಾಲ ಮಧ್ಯಾಹ್ನ 12:00 ರಿಂದ 1:30 ರ ವರೆಗೆ ಇದ್ದು, ಯಮಗಂ ಕಾಲ ಬೆಳಗ್ಗೆ 7:30 ರಿಂದ 9:00 ರ ವರೆಗೆ ಇರಲಿದೆ.
ಇವತ್ತಿನ ರಾಶಿಫಲ
ಮೇಷ : ಕೈಗೊಂಡ ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆ. ಪ್ರಯಾಣ ಮುಂದೂಡಿಕೆ. ಮನಸ್ಸಿನ ಆಲೋಚನೆಗಳು ಸ್ಥಿರವಾಗಿರಲ್ಲ, ಗೊಂದಲ ಉಂಟಾಗಬಹುದು. ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸ್ವಲ್ಪಮಟ್ಟಿಗೆ ಸಮಸ್ಯೆ ಎದುರಾಗುವ ಸಂಭವವಿದೆ.
ವೃಷಭ: ಹೊಸ ಜನರ ಪರಿಚಯ, ಪ್ರಮುಖ ವಿಷಯದ ಮಾಹಿತಿ ಲಭ್ಯವಾಗಲಿದೆ. ಪ್ರಯತ್ನಿಸಿದ ಕೆಲಸದಲ್ಲಿ ಯಶಸ್ಸು ಕಾಣಲಿದೆ. ಆರ್ಥಿಕ ಆದಾಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ವಾತಾವರಣವು ತೃಪ್ತಿದಾಯಕವಾಗಿ ಇರಲಿದೆ.
ಮಿಥುನ : ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಂಬಂಧಿಕರೊಂದಿಗೆ ಚರ್ಚೆ ನಡೆಯಲಿದೆ. ಸಮಾಜದಲ್ಲಿ ಗೌರವ ಮತ್ತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸರಿಯಾದ ಸಮಯ. ವ್ಯಾಪಾರ ಮತ್ತು ಉದ್ಯೋಗ ವಲಯಗಳಲ್ಲಿ ಹೆಚ್ಚಿನ ಪ್ರಗತಿ
ಕರ್ಕಾಟಕ : ಪ್ರಮುಖ ಕೆಲಸಗಳಲ್ಲಿ ವಿಳಂಬ. ದೈಹಿಕ ಸಮಸ್ಯೆ. ಜವಾಬ್ದಾರಿ ಹೆಚ್ಚಾಗುತ್ತವೆ. ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿಸಿದ ಫಲಿತಾಂಶ ಸಿಗದಿರಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ತೊಡಕು

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್ಗಳು ಇಲ್ಲಿವೆ
ಸಿಂಹ : ದಿನದ ಆದಾಯವು ನಿರೀಕ್ಷೆಯಷ್ಟು ಇರುವುದಿಲ್ಲ. ಹೊಸ ಸಾಲ. ಅನಿರೀಕ್ಷಿತ ಪ್ರಯಾಣ. ಮಾನಸಿಕವಾಗಿ ಸ್ವಲ್ಪ ಅಶಾಂತಿ. ಕೆಲಸ ಕಾರ್ಯಗಳಲ್ಲಿ ಸಣ್ಣಪುಟ್ಟ ಅಡ್ಡಿ. ವ್ಯಾಪಾರ ಮತ್ತು ಉದ್ಯೋಗ ವಲಯದಲ್ಲಿ ಈ ದಿನ ಸಾಮಾನ್ಯ ದಿನ.
ಕನ್ಯಾ : ಹೊಸ ಪರಿಚಯ ರೂಪುಗೊಳ್ಳುತ್ತವೆ. ಮನಸ್ಸಿನಲ್ಲಿದ್ದ ಯೋಜನೆಗಳನ್ನು ಕಾರ್ಯಗತಗೊಳಿಸುವಿರಿ. ಬಾಲ್ಯದ ಗೆಳೆಯ-ಗೆಳತಿಯರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟು ಹೆಚ್ಚಾಗಲಿವೆ. ಉದ್ಯೋಗದಲ್ಲಿರುವವರ ಸೇವೆಗೆ ಸೂಕ್ತ ಮನ್ನಣೆ ದೊರೆಯಲಿದೆ.
ತುಲಾ : ಸಂಬಂಧಿಕರೊಂದಿಗೆ ಮನಸ್ತಾಪ ಉಂಟಾಗಬಹುದು. ಯಾವುದೇ ವಿವಾದಗಳಿಂದ ದೂರವಿರುವುದು ಒಳಿತು. ಕುಟುಂಬದ ಜವಾಬ್ದಾರಿ ಹೆಚ್ಚಾಗುತ್ತವೆ. ಅನಿರೀಕ್ಷಿತ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗ ವಲಯಗಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

ವೃಶ್ಚಿಕ : ಮನೆಯಲ್ಲಿ ಶುಭ ಕಾರ್ಯ. ಆರ್ಥಿಕತೆಯಲ್ಲಿ ಧನಾಗಮನ. ನಿಮ್ಮ ವಿರೋಧಿಗಳು ಸಹ ಸ್ನೇಹಿತರಾಗಿ ಬದಲಾಗುತ್ತಾರೆ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಸಮಸ್ಯೆ ಇತ್ಯರ್ಥವಾಗುತ್ತವೆ.
ಧನುಸ್ಸು: ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಪ್ರಮುಖ ಕೆಲಸ. ಆಲೋಚನೆಗಳಲ್ಲಿ ಸ್ಥಿರತೆ ಇರುವುದಿಲ್ಲ. ಪ್ರಯಾಣದಲ್ಲಿ ಅಡಚಣೆ, ಅನಗತ್ಯ ವೆಚ್ಚ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರುತ್ಸಾಹ
ಮಕರ : ಹೊಸ ವ್ಯಕ್ತಿಗಳ ಪರಿಚಯ. ಕೈಗೊಂಡ ಕಾರ್ಯಗಳಲ್ಲಿ ಜಯ ಸಿಗಲಿದೆ. ಸ್ಥಿರಾಸ್ತಿಯು ವೃದ್ಧಿಯಾಗಲಿದೆ ಮತ್ತು ಶುಭ ಸುದ್ದಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಆಶಾದಾಯಕವಾಗಿರುತ್ತದೆ.
ಕುಂಭ : ಮನೆಯಲ್ಲಿ ಶುಭ ಕಾರ್ಯ. ಆದಾಯದಲ್ಲಿ ಹೆಚ್ಚಳ. ಆತ್ಮೀಯರಿಂದ ನಿರೀಕ್ಷಿತ ಸಹಾಯ. ಭೂ ವಿವಾದ ಇತ್ಯರ್ಥವಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗದ ವಿಚಾರದಲ್ಲಿ ಪ್ರೋತ್ಸಾಹಕರ ವಾತಾವರಣ .

ಮೀನ : ಕೌಟುಂಬಿಕ ಸಮಸ್ಯೆಗ, ಮನಸ್ಸಿಗೆ ಕಿರಿಕಿರಿಯ. ಅನಿರೀಕ್ಷಿತ ಖರ್ಚು. ಪ್ರಮುಖ ಕೆಲಸ ಮುಂದೂಡುವಿರಿ. ಆಲೋಚನೆಗಳು ಸ್ಥಿರವಾಗಿರಲ್ಲ, ಪ್ರಯಾಣದ ಯೋಜನೆಯಲ್ಲಿ ಬದಲಾವಣೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ಸ್ಥಿತಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,

ಇವತ್ತಿನಿಂದ 3 ದಿನ ಕರೆಂಟ್ ಇರಲ್ಲ! ಶಿವಮೊಗ್ಗ, ಭದ್ರಾವತಿ, ಆನವಟ್ಟಿಯಲ್ಲಿ ಪವರ್ ಕಟ್ ಎಲ್ಲೆಲ್ಲಿ!