ಇನ್ನೂ ಹವಾಮಾನ ಇಲಾಖೆಯ ಡೈಲಿ ಬುಲೆಟಿನ್ ಪ್ರಕಾರ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಾಳಿಯೊಂದಿಗೆ (ಗಂಟೆಗೆ 30-40 ಕಿ.ಮೀ) ಭಾರೀ ಮಳೆಯಾಗುವ ಸಾಧ್ಯತೆಯಿದೆ.

rain in karnataka today live
ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಿಕ್ಕ ಬಳ್ಳಾಪುರ, ಚಿತ್ರದುರ್ಗ, ರಾಮನಗರ, ಕೋಲಾರ, ಮಂಡ್ಯ ಚಾಮರಾಜನಗರ, ದಾವಣಗೆರೆ, ಹಾಸನ ತುಮಕೂರು, ಬಳ್ಳಾರಿ, ವಿಜಯನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ (ಗಂಟೆಗೆ 30-40 ಕಿಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
https://www.ksndmc.org/ ಇದರ ಡ್ಯಾಶ್ ಬೋರ್ಡ್ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಬಿದರುಗೋಡಿನಲ್ಲಿ ರಾಜ್ಯದಲ್ಲಿಯೇ ಅತಿಹೆಚ್ಚು ಮಳೆಯಾಗಿದ್ದು 338 ಮಿಲಿಮೀಟರ್ ಮಳೆ ದಾಖಲಾಗಿದೆ. ತಾಪಮಾನ ಕನಿಷ್ಟ ಪ್ರಮಾಣಕ್ಕೆ ಇಳಿದಿರುವ ತಾಲ್ಲೂಕುಗಳ ಪಟ್ಟಿಯಲ್ಲಿ ತೀರ್ಥಹಳ್ಳಿ ಎರಡನೇ ಸ್ಥಾನದಲ್ಲಿದೆ, ಬಂಟ್ವಾಳದಲ್ಲಿ ಕಳೆದ 24 ಗಂಟೆಯಲ್ಲಿ ತಾಪನ 12 ಡಿಗ್ರಿಗೆ ಕುಸಿದಿದ್ದರೇ, ತೀರ್ಥಹಳ್ಳಿಯಲ್ಲಿ 15.8 ಡಿಗ್ರಿಗೆ ಇಳಿದಿದೆ.

ಪ್ರಮುಖ ಪ್ರದೇಶಗಳ ಮಳೆಯ ವಿವರಗಳು /rain in karnataka today live
ಹಾಸನ: ಹೊಂಗಡಹಳ್ಳ – 118ಮಿ.ಮೀ
ಉತ್ತರ ಕನ್ನಡ: ಹಾಲಗೇರಿ – 106ಮಿ.ಮೀ
ಚಿಕ್ಕಮಗಳೂರು: ಬೇಗಾರ್ – 100ಮಿ.ಮೀ
ಬೆಳಗಾವಿ: ಆಮೇಟೆ – 86ಮಿ.ಮೀ
ಶಿವಮೊಗ್ಗ: ಸುಳಗೋಡು – 81ಮಿ.ಮೀ
ಕೊಡಗು: ಹೊದ್ದೂರು – 72ಮಿ.ಮೀ
ಕರಾವಳಿ ಕರ್ನಾಟಕ
ಉಡುಪಿ: ರೆಂಜಳ – 137ಮಿ.ಮೀ
ದಕ್ಷಿಣ ಕನ್ನಡ: ಪಾತ್ರಮೆ – 123ಮಿ.ಮೀ
ಉತ್ತರ ಕನ್ನಡ: ಹಿಳ್ಳೂರು – 45ಮಿ.ಮೀ