rain details shivamogga ಮಾಸ್ತಿಕಟ್ಟೆ :  213.00 ಮಿ.ಮೀ ಮಳೆ/ ಮಾಣಿ, ಚಕ್ರಾ, ಪಿಕಪ್​, ಸಾವೆಹಕ್ಲು ಡ್ಯಾಂಗಳಿಗೆ ನೀರು / ಘಾಟಿ ಪ್ರದೇಶಗಳ ಮಳೆ ವಿವರ

rain details shivamogga ಶಿವಮೊಗ್ಗ: ಮಲೆನಾಡು ಪ್ರದೇಶದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆಗೆ ಆಧಾರವಾಗಿರುವ ವರಾಹಿ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ವ್ಯಾಪ್ತಿಯ ಡ್ಯಾಂಗಳಾದ ಮಾಣಿ, ಪಿಕಪ್, ಚಕ್ರಾ, ಸಾವೆಹಕ್ಲು ಡ್ಯಾಂಗಳ ಇತ್ತೀಚಿನ ನೀರಿನ ಮಟ್ಟ ಏರಿಕೆಯಾಗಿದೆ. 

ಡ್ಯಾಂಗಳ ನೀರಿನ ಮಟ್ಟ rain details shivamogga

ಮಾಣಿ ಡ್ಯಾಂ: ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಪ್ರಸ್ತುತ ನೀರಿನ ಮಟ್ಟ 579.59 ಮೀಟರ್ (MSL) ಇದ್ದು, ಕಳೆದ ವರ್ಷ 571.92 ಮೀಟರ್ ಇತ್ತು. ಡ್ಯಾಂನಲ್ಲಿ 269.366 ಮಿಲಿಯನ್ ಕ್ಯೂಬಿಕ್ ಮೀಟರ್ (M.Cum) ನೀರಿದ್ದು, ಒಳಹರಿವು 5724 ಕ್ಯೂಸೆಕ್ ದಾಖಲಾಗಿದೆ.

ಪಿಕಪ್ ಡ್ಯಾಂ: ಪ್ರಸ್ತುತ ನೀರಿನ ಮಟ್ಟ 563.22 ಮೀಟರ್ (MSL) ಇದ್ದು, ಕಳೆದ ವರ್ಷ 561.40 ಮೀಟರ್ ಇತ್ತು. 6.361 M.Cum ನೀರು ಸಂಗ್ರಹವಾಗಿದ್ದು, ಸಾಮರ್ಥ್ಯದ 88.763% ರಷ್ಟಿದೆ. ಒಳಹರಿವು  2600 ಕ್ಯೂಸೆಕ್  ಇದ್ದು,  2768 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ 

ಚಕ್ರಾ ಡ್ಯಾಂ: ಪ್ರಸ್ತುತ ಮಟ್ಟ 569.90 ಮೀಟರ್ (MSL) ಇದ್ದು, ಕಳೆದ ವರ್ಷ 565.64 ಮೀಟರ್ ಇತ್ತು. 35.711 M.Cum ನೀರು ಸಂಗ್ರಹವಾಗಿದ್ದು, 31.969% ರಷ್ಟಿದೆ. ಒಳಹರಿವು  3238 ಕ್ಯೂಸೆಕ್ ದಾಖಲಾಗಿದೆ.

ಸಾವೆಹಕ್ಲು ಡ್ಯಾಂ: ಪ್ರಸ್ತುತ ಮಟ್ಟ 577.50 ಮೀಟರ್ (MSL) ಇದ್ದು, ಕಳೆದ ವರ್ಷ 572.00 ಮೀಟರ್ ಇತ್ತು. 34.602 M.Cum ನೀರು ಸಂಗ್ರಹವಾಗಿದ್ದು, ಒಳಹರಿವು 2662 ಕ್ಯೂಸೆಕ್ ದಾಖಲಾಗಿದೆ.

rain details shivamogga

ಎಲ್ಲಾ ಪ್ರಮುಖ ಡ್ಯಾಂಗಳಲ್ಲಿ ಕಳೆದ ವರ್ಷಕ್ಕಿಂತ ಉತ್ತಮ ನೀರಿನ ಮಟ್ಟ ದಾಖಲಾಗಿದೆ. ಪಿಕಪ್ ಡ್ಯಾಂ ಹೊರತುಪಡಿಸಿ ಉಳಿದ ಡ್ಯಾಂಗಳಿಂದ ಯಾವುದೇ ನೀರನ್ನು ಹೊರಬಿಡುತ್ತಿಲ್ಲ. ಪಿಕಪ್ ಡ್ಯಾಂನಿಂದ ವಿದ್ಯುತ್ ಉತ್ಪಾದನೆಗೆ ನೀರು ಹೊರಬಿಡಲಾಗುತ್ತಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ಮಾಣಿ: 164.00 ಮಿ.ಮೀ (ಒಟ್ಟು 916.00 ಮಿ.ಮೀ) , ಯಡೂರು: 156.00 ಮಿ.ಮೀ (ಒಟ್ಟು 723.00 ಮಿ.ಮೀ) , ಹುಲಿಕಲ್:  201.00 ಮಿ.ಮೀ (ಒಟ್ಟು 885.00 ಮಿ.ಮೀ) ಮಾಸ್ತಿಕಟ್ಟೆ :  213.00 ಮಿ.ಮೀ (ಒಟ್ಟು 798.00 ಮಿ.ಮೀ) ಚಕ್ರಾ: 148.00 ಮಿ.ಮೀ (ಒಟ್ಟು 724.00 ಮಿ.ಮೀ) ಸಾವೆಹಕ್ಲು:  127.00 ಮಿ.ಮೀ (ಒಟ್ಟು 706.00 ಮಿ.ಮೀ) ಮಳೆಯಾಗಿದೆ.  

ಮಳೆಗೆ ಸಂಬಂಧಿಸಿದಂತೆ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು