hulikal ghat traffic today / ಆಕ್ಸಲ್​ ಕಟ್​ ಆಗಿ ಹುಲಿಕಲ್​ ಘಾಟಿ ಟರ್ನಿಂಗ್​ನಲ್ಲಿ ನಿಂತ ಲಾರಿ! ಟ್ರಾಫಿಕ್ ಜಾಮ್

Malenadu Today

hulikal ghat traffic today  ಹುಲಿಕಲ್ ಘಾಟಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ: ಮಧ್ಯರಾತ್ರಿಯಿಂದ ಲಾರಿ ಕೆಟ್ಟು ನಿಂತಿದ್ದೇ ಕಾರಣ!

ಹೊಸನಗರ: ಪಶ್ಚಿಮ ಘಟ್ಟದ ಪ್ರಮುಖ ಮಾರ್ಗಗಳಲ್ಲಿ ಒಂದಾದ ಹುಲಿಕಲ್ ಘಾಟಿಯಲ್ಲಿ ಮಧ್ಯರಾತ್ರಿಯಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ತಿರುವಿನಲ್ಲಿ ಲಾರಿಯೊಂದು ಕೆಟ್ಟು ನಿಂತಿರುವುದರಿಂದ ಕಿಲೋಮೀಟರ್‌ಗಟ್ಟಲೆ ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿವೆ. 

hulikal ghat traffic today
hulikal ghat traffic today

ಭೂಕುಸಿತ ಪ್ರದೇಶದಲ್ಲೇ ಅಡಚಣೆ:hulikal ghat traffic today

ಈ ಮೊದಲು ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿರುವ ಹೇರ್‌ ಪಿನ್ ತಿರುವಿನಲ್ಲೇ ಭಾರೀ ಗಾತ್ರದ ಲಾರಿಯೊಂದು ಕೆಟ್ಟು ನಿಂತಿದ್ದು, ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಕಿರಿದಾದ ಮತ್ತು ತೀಕ್ಷ್ಣವಾದ ತಿರುವಿನಲ್ಲಿ ದೊಡ್ಡ ವಾಹನಗಳು ಸಾಗಲು ಸಾಧ್ಯವಾಗದೆ, ಘಾಟಿ ಹತ್ತುವ ಹಾಗೂ ಘಾಟಿಯಿಂದ ಇಳಿಯುವ ವಾಹನಗಳು ರಸ್ತೆ ಬದಿಯಲ್ಲಿ ಮಧ್ಯರಾತ್ರಿಯಿಂದಲೇ ನಿಂತಿವೆ 

ಸರಕು ಸಾಗಿಸತ್ತಿದ್ದ ಲಾರಿ ಸಿದ್ದಾಪುರಕ್ಕೆ ಹೊರಟಿತ್ತು, ಈ ಮಧ್ಯೆ ತಿರುವಿನಲ್ಲಿ ಆಕ್ಸಲ್​ ಕಟ್ ಆಗಿ ನಿಂತಿದೆ. ಇದರಿಂದಾಗಿ ಉಳಿದ ವಾಹನಗಳು ಸಂಚರಿಸಲಾಗುತ್ತಿಲ್ಲ. ಇನ್ನೂ ರಾತ್ರಿಯಿಡಿ  ಹೊಸನಗರ ಪೊಲೀಸರು ನೆರವಿಗೆ ಬರಲಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ. ರಾತ್ರಿ ಹೊತ್ತು ಕ್ರೇನ್​ ಸಂಚಾರ ಕಷ್ಟವಾದ್ದರಿಂದ ಇದೀಗ ಕ್ರೇನ್​ ಮೂಲಕ ಲಾರಿಯನ್ನು ಬದಿಗೆ ಸರಿಸುವ ಅಥವಾ ಮುಂದಕ್ಕೆ ಸಾಗಿಸುವ ಕೆಲಸ  ನಡೆಯುತ್ತಿದೆ.

ವಾಹನ ಸವಾರರ ಪರದಾಟ:

ಮಧ್ಯರಾತ್ರಿಯಿಂದಲೇ ಸಂಚಾರ ನಿಲುಗಡೆಯಾಗಿರುವುದರಿಂದ ಹಲವು ವಾಹನಗಳು, ಅದರಲ್ಲೂ ವಿಶೇಷವಾಗಿ ಸರಕು ಸಾಗಣೆ ಲಾರಿಗಳು  ಮಾರ್ಗ ಮಧ್ಯದಲ್ಲೇ ಸಿಲುಕಿವೆ. ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿರುವ  ಪೊಲೀಸರು ಮತ್ತು ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು ಲಾರಿಯನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದು, ಆದಷ್ಟು ಬೇಗ ಸಂಚಾರವನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ.  

 ಮಳೆಗೆ ಸಂಬಂಧಿಸಿದಂತೆ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಲಿಕಲ್ ಘಾಟಿಯ ಬಗ್ಗೆ ಅರಿಯಲು ಇಲ್ಲಿ ಕ್ಲಿಕ್​ ಮಾಡಿ

https://x.com/Shivamogga_SP/status/1934643287253811707

Share This Article