railway : ರೈಲಿಗೆ ಸಿಲುಕಿ ಎತ್ತು ಹಾಗೂ ವ್ಯಕ್ತಿ ಸಾವು
ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಬಳಿ ರೈಲಿಗೆ ಸಿಲುಕಿ ಎತ್ತು ಹಾಗೂ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಕೊನಗಹಳ್ಳಿಯ ನಿವಾಸಿ ತಿಮ್ಮೇಶ್ (35) ಮೃತಪಟ್ಟಿರುವ ವ್ಯಕ್ತಿ ಎಂದು ತಿಳಿದು ಬಂದಿದೆ
ಮೈಸೂರು- ತಾಳಗುಪ್ಪ ಇಂಟರ್ಸಿಟಿ ರೈಲಿಗೆ ಸಿಲುಕಿ ದನ ಕಾಯುತ್ತಿದ್ದ ವ್ಯಕ್ತಿ ಹಾಗೂ ಎತ್ತು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆ ಯಾವಾಗ ನಡೆದಿದೆ ಎಂದು ನಿಖರವಾಗಿ ತಿಳಿದು ಬಂದಿಲ್ಲ.ಘಟನಾ ಸಂಬಂಧ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.