Train Schedule Changes ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾಲುವೆ ಕಾಮಗಾರಿ: ರೈಲು ಸಂಚಾರದಲ್ಲಿ ಬದಲಾವಣೆ
ಬೆಂಗಳೂರು: ವಿಶ್ವೇಶ್ವರಯ್ಯ ಜಲ ನಿಗಮದ (Visvesvaraya Jala Nigama Niyamitha) ಕಾಲುವೆ ಕಾಮಗಾರಿಯು ಹೊನ್ನವಳ್ಳಿ ರೋಡ್ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ನಡೆಯುತ್ತಿರುವುದರಿಂದ, ಹಲವು ರೈಲುಗಳ ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಮರುನಿಗದಿ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ಪ್ರಕಟಿಸಿದೆ. ಪ್ರಯಾಣಿಕರು ಈ ಕೆಳಗಿನ ವಿವರಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.

ರೈಲುಗಳ ಮಾರ್ಗ ಬದಲಾವಣೆ: Train Schedule Changes
ರೈಲು ಸಂಖ್ಯೆ 18111 ಟಾಟಾನಗರ-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್: ಜುಲೈ 3, 10, 17, 24 ರಂದು ಟಾಟಾನಗರದಿಂದ ಹೊರಡುವ ಈ ರೈಲು, ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣಾವರ ಮಾರ್ಗವಾಗಿ ಯಶವಂತಪುರ ತಲುಪಲಿದೆ. ಈ ಪ್ರಯಾಣದಲ್ಲಿ ತುಮಕೂರಿಗೆ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 07324 ಬನಾರಸ್ – ಎಸ್’ಎಸ್’ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು: ಜುಲೈ 8, 15, 22 ರಂದು ಬನಾರಸ್‌ನಿಂದ ಹೊರಡುವ ಈ ರೈಲು ಯಲಹಂಕ, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಸಹ ತುಮಕೂರಿಗೆ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ – ಯಶವಂತಪುರ ದೈನಂದಿನ ಎಕ್ಸ್ ಪ್ರೆಸ್: ಜುಲೈ 4, 7, 9, 11, 14, 16, 18, 21, 23, 25 ರಂದು ವಾಸ್ಕೋ ಡ ಗಾಮದಿಂದ ಹೊರಡುವ ಈ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮಾರ್ಗವಾಗಿ ಯಶವಂತಪುರ ತಲುಪಲಿದೆ. ಇದು ತಿಪಟೂರು ಮತ್ತು ತುಮಕೂರಿಗೆ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 20652 ತಾಳಗುಪ್ಪ – ಕೆಎಸ್’ಆರ್ ಬೆಂಗಳೂರು ದೈನಂದಿನ ಎಕ್ಸ್ ಪ್ರೆಸ್: ಜುಲೈ 5, 8, 10, 12, 15, 17, 19, 22, 24, 26 ರಂದು ಹೊರಡುವ ಈ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮಾರ್ಗವಾಗಿ ಯಶವಂತಪುರ ತಲುಪಲಿದೆ. ತಿಪಟೂರು ಮತ್ತು ತುಮಕೂರಿನಲ್ಲಿ ನಿಲುಗಡೆ ಇರುವುದಿಲ್ಲ.

ರೈಲುಗಳ ನಿಯಂತ್ರಣ (Control):
ಕೆಳಕಂಡ ರೈಲುಗಳನ್ನು ಮಾರ್ಗಮಧ್ಯೆ ತಾತ್ಕಾಲಿಕವಾಗಿ ನಿಯಂತ್ರಿಸಲಾಗುತ್ತದೆ:
ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ದೈನಂದಿನ ಎಕ್ಸ್ ಪ್ರೆಸ್: ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 12726 ಧಾರವಾಡ-ಕೆಎಸ್’ಆರ್ ಬೆಂಗಳೂರು ದೈನಂದಿನ ಎಕ್ಸ್ ಪ್ರೆಸ್: ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 66577 ತುಮಕೂರು-ಶಿವಮೊಗ್ಗ ಟೌನ್ ಮೆಮು: ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು 75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ದೈನಂದಿನ ಎಕ್ಸ್ ಪ್ರೆಸ್: ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲಿನ ಮರುನಿಗದಿ (Rescheduling): Train Schedule Changes
ರೈಲು ಸಂಖ್ಯೆ 56224 ಅರಸೀಕೆರೆ-ಕೆಎಸ್’ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲು: ಜುಲೈ 5, 8, 10, 12, 15, 17, 19, 22, 24, 26 ರಂದು ಅರಸೀಕೆರೆಯಿಂದ 60 ನಿಮಿಷ ತಡವಾಗಿ ಹೊರಡಲಿದೆ.
Train Schedule Changes
SWR train diversions, railway schedule changes, Honnavalli Road, Arsikere, VJNL canal work, South Western Railway, train delays, Karnataka trains, July 2025 train updates, Yesvantpur trains, Tumakuru train halt, Talaguppa Express, Vasco Da Gama Express