ಶಿವಮೊಗ್ಗ : ರೈಲ್ವೆ ಕ್ರಾಸಿಂಗ್​ಗಳ ಪರಿಶೀಲನೆ! 2 ದಿನ ಈ ರೂಟ್ ಬಂದ್ ! ಬದಲಿ ಮಾರ್ಗ ಇಲ್ಲಿದೆ

Rail Route Inspection ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4  2025:  ರೈಲ್ವೆ ಮಾರ್ಗಗಳ ಪರಿಶೀಲನೆ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ವಾರ್ತಾ ಇಲಾಖೆಯ ಮೂಲಕ ಶಿವಮೊಗ್ಗ ಜಿಲ್ಲಾಡಳಿತ ಪ್ರಕಟಣೆ ನೀಡಿದೆ. 

ಪ್ರಕಟಣೆಯಲ್ಲಿ ಏನಿದೆ

ತರೀಕೆರೆ – ಮೊಸರಳ್ಳಿ ನಡುವೆ ಬರುವ ಎಲ್‌ಸಿ.ನಂ: 24 ಮತ್ತು 25 ಗಳನ್ನು ಪರಿಶೀಲನೆ ಹಿನ್ನಲೆಯಲ್ಲಿ ಅಕ್ಟೋಬರ್ 06 ರಿಂದ ಅಕ್ಟೊಬರ್ 08 ವರೆಗೂ ಮುಚ್ಚಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ತಾತ್ಕಾಲಿಕವಾಗಿ ವಾಹನಗಳು ಮತ್ತು ಸಾರ್ವಜನಿಕರು ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶ ನೀಡಿದ್ದಾರೆ.

ಎಲ್‌ಸಿ 24 ಕಾಳಿಂಗಹಳ್ಳಿ ರಸ್ತೆ ರೈಲು ನಿಲ್ದಾಣ ಅ. 06 ರಂದು ಬೆ. 9.00 ರಿಂದ 07 ರಂದು ಬೆ 10.00ರವರೆಗೆ ಮಾರ್ಗ-1 ಬಾರಂದೂರು ಮೂಲಕ ಎಲ್.ಸಿ. 25 ಹಳ್ಳಿಕೆರೆ ಮುಖಾಂತರ ಮೊಸರಳ್ಳಿಗೆ ಹೋಗುವುದು ಹಾಗು 

ಅಪ್ಪಾಜಿ ಬಡಾವಣೆಯಿಂದ ಕಾಳಿಂಗನಹಳ್ಳಿ ರಸ್ತೆ, ಭದ್ರಾವತಿಯಿಂದ ಮೊಸರಳ್ಳಿಗೆ ಹೋಗುವ ವಾಹನಗಳು ಶಿವನಿ ಕ್ರಾಸ್ ಮುಖಾಂತರ ಅಂತರಗಂಗೆಯಿಂದ ಮೊಸರಳ್ಳಿಗೆ ಹೋಗುವುದು. 

ಎಲ್.ಸಿ.25- ಕೆಂಚೇನಹಳ್ಳಿ ರಸ್ತೆ ರೈ.ನಿ.-ಅ.07 ಮತ್ತು 08 ರಂದು ಮಾರ್ಗ-1  ಬಾರಂದೂರು ಮೂಲಕ ಎಲ್‌ಸಿ -24 2) ಅಪ್ಪಾಜಿ ಬಡಾವಣೆಯಿಂದ ಕಾಳಿಂಗನಹಳ್ಳಿ ರಸ್ತೆ ಭದ್ರಾವತಿಯಿಂದ ಮೊಸರಳ್ಳಿಗೆ ಹೋಗುವ ವಾಹನಗಳು ಶಿವನಿ ಕ್ರಾಸ್ ಮುಖಾಂತರ ಅಂತರಗಂಗೆ ಯಿಂದ ಮೊಸರಳ್ಳಿಗೆ ಹೋಗುವುದು. 

ಈ ಬದಲಿ ಮಾರ್ಗಗಳಲ್ಲಿ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾಡಳಿತ ಕೋರಿದೆ.

Rail Route Inspection
Shivamogga Trade License Mela 3 Day student bus pass karnataka Rail Route Inspection

ಇದನ್ನು ಸಹ ಓದಿ :  ಸಿನಿಮಾ ಟಿಕೆಟ್​ ಎಸೆಯದಿರಿ ದುಡ್ಡು ವಾಪಸ್​ ಬರಬಹುದು, ಇ-ಪೇಪರ್​ ಓದಿ 

Rail Route InspectionTraffic Diversion Announced from Oct 6-8

ತರೀಕೆರೆ ಬದಲಿ ಮಾರ್ಗ ಹುಡುಕಾಟ, ಮೊಸರಳ್ಳಿ ರಸ್ತೆ ಮಾಹಿತಿ, ಬಾರಂದೂರು ಮಾರ್ಗ ನಕ್ಷೆ, ಅಂತರಗಂಗೆ ರಸ್ತೆ,Tariekere Mosaralli railway line, traffic diversion, LC 24 25 closure, Shivamogga DC order, temporary route change, railway inspection, alternative roads

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 

Rail Route Inspection

Leave a Comment