Rahul Gandhi ಶಿವಮೊಗ್ಗ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ತಾನು ವಿಫಲನಾಗಿದ್ದೇನೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ರಾಹುಲ್ ಗಾಂಧಿಗೆ ಜ್ಞಾನೋದಯ ತಡವಾಗಿ ಆಗಿದೆ ಎಂದು ಹೇಳಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ, “ರಾಹುಲ್ ಗಾಂಧಿ ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಕಲ್ಯಾಣದ ವಿಷಯದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಆದರೆ, ದಲಿತರು, ಆದಿವಾಸಿಗಳ ಸಮಸ್ಯೆ ಅರ್ಥ ಮಾಡಿಕೊಂಡಂತೆ 10-15 ವರ್ಷಗಳಲ್ಲಿ ಒಬಿಸಿ ವರ್ಗದ ಸಮಸ್ಯೆ ನನಗೆ ಅರ್ಥವಾಗಲಿಲ್ಲ ಎಂದಿದ್ದಾರೆ. ಇಷ್ಟು ವರ್ಷಗಳ ನಂತರ ಅವರಿಗೆ ಹಿಂದುಳಿದ ವರ್ಗಗಳ ಸಮಸ್ಯೆ ಅರ್ಥವಾಗಿದೆ ಎಂದರೆ ಏನು ಅರ್ಥ?” ಎಂದು ಪ್ರಶ್ನಿಸಿದರು.
ಹಾಗೆಯೇ, ಹಿಂದುಳಿದ ವರ್ಗಗಳ ಬಗ್ಗೆ ರಾಹುಲ್ ಗಾಂಧಿಯವರ ಈ ಹೇಳಿಕೆ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ನ್ಯಾಯದ ಪರ ಹಾಗೂ ಹಿಂದುಳಿದವರ ವರ್ಗದ ಪರ ಎಂಬ ಹೇಳಿಕೆ ನೀಡಿದ್ದಾರೆ. “ಒಟ್ಟಾರೆ ರಾಹುಲ್ ಗಾಂಧಿ ನಮಗೆ ಇಷ್ಟು ವರ್ಷ ಆದಮೇಲಾದರೂ ಹಿಂದುಳಿದವರ ಸಮಸ್ಯೆ ಅರ್ಥವಾಗಿಲ್ಲ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ಆದರೆ ಅವರೇ ಒಪ್ಪಿಕೊಂಡ ಮೇಲೆ ಸಿದ್ದರಾಮಯ್ಯನವರು ಈ ರೀತಿಯ ಹೇಳಿಕೆಯನ್ನು ಕೊಟ್ಟು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ರಾಹುಲ್ ಗಾಂಧಿಯವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಹೇಳಿಕೆ ಕೊಟ್ಟು ದಲಿತರಿಗೆ ಮೋಸ ಮಾಡುತ್ತಿದ್ದಾರೆ. ಈ ಕೂಡಲೇ ಅವರು ದೇಶದ ಎಲ್ಲಾ ದಲಿತರಿಗೂ ಕ್ಷಮೆ ಕೇಳಬೇಕು” ಎಂದು ಈಶ್ವರಪ್ಪ ಒತ್ತಾಯಿಸಿದರು.


Rahul Gandhi ಮಧು ಬಂಗಾರಪ್ಪನವರಿಗೆ ಧನ್ಯವಾದ
ಹಿಂದಿನ ಕಾಲದಿಂದಲೂ ದೈವಜ್ಞ ಬ್ರಾಹ್ಮಣ ಸಮಾಜ ಹಿಂದುಳಿದ ಸಮಾಜ ಎಂದು ಗುರುತಿಸಿಕೊಂಡಿತ್ತು. ಆದರೆ ಈಗ ಅದನ್ನು 2ಎ ವರ್ಗೀಕರಣಕ್ಕೆ ಸೇರಿಸಲಾಗಿತ್ತು. ಇದರಿಂದಾಗಿ ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಬಹಳ ತೊಂದರೆ ಉಂಟಾಗುತ್ತಿತ್ತು. ಇದರಿಂದಾಗಿ ನಾನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೆ ಈ ವಿಚಾರವನ್ನು ತಿಳಿಸಿದೆ ಅವರು ಅದನ್ನು ಸರಿಪಡಿಸಿ, ಸಾಮಾನ್ಯ ವರ್ಗದಿಂದ 2ಎ ಬದಲಿಸಿ ಕೊಟ್ಟಿದ್ದಾರೆ. ಹಾಗಾಗಿ ಅವರಿಗೆ ಧನ್ಯವಾದ” ಎಂದು ಈಶ್ವರಪ್ಪ ತಿಳಿಸಿದರು.
