ಹರ್ಷನ ಸ್ಮರಣೆ! ಶಿವಮೊಗ್ಗದಲ್ಲಿ ಪಂಜಿನ ಮೆರವಣಿಗೆ! ಪೊಲೀಸರ ಬಂದೋಬಸ್ತ್​

ಶಿವಮೊಗ್ಗದ ಸೀಗೇಹಟ್ಟಿಯಲ್ಲಿ ಹಿಂದೂ ಹರ್ಷ ಎಂಬ ಬಜರಂಗದಳದ ಕಾರ್ಯಕರ್ತನ ಕೊಲೆಯಾಗಿ ಒಂದು ವರ್ಷ ಕಳೆದಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ನಗರದಲ್ಲಿ ನಿನ್ನೆ ಹಲವೆಡೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿಶೇಷವಾಗಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಸರ್ಕಲ್​ ಹಾಗೂ ಪ್ರಮುಖ ರಸ್ತೆಯ ಮುಖ್ಯಭಾಗಗಳಲ್ಲಿ ಪೊಲೀಸ್​ರನ್ನು ಡ್ಯೂಟಿಗೆ ನಿಯೋಜಿಸಲಾಗಿತ್ತು. 

BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

ಪಂಜಿನ ಮೆರವಣಿಗೆ 

ಇನ್ನೂ ನಿನ್ನೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಹರ್ಷನ ಸ್ಮರಣೆಗಾಗಿ ಪಂಜಿನ ಮೆರವಣಿಗೆಯನ್ನು ನಡೆಸಿದೆ. ರಾಮಣ್ಣ ಶ್ರೇಷ್ಟಿ ಪಾರ್ಕ್‌ನಿಂದ ಮೆರವಣಿಗೆ ಹೊರಟು ಶಿವಪ್ಪ ನಾಯಕ ವೃತ್ತಕಲ್ಕೆ ಬಂದು, ಅಲ್ಲಿ ಹರ್ಷನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ  ಹರ್ಷ ಹಿಂದೂ ಅಮರ್ ರಹೇ ಎಂದು ಘೋಷಣೆ ಕೂಗಿದರು. ಅಲ್ಲದೆ ಹರ್ಷನ ಆತ್ಮಕ್ಕೆ ಶಾಂತಿ ಸಿಗಲೆಂದು  ಮೌನಾಚರಣೆ ಮಾಡಿದರು. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು