ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕನೇ ದೇಗುಲಗಳಲ್ಲಿ ಕಳ್ಳತನದ ಆರೋಪ ಹೊತ್ತು ಸಿಕ್ಕಿಬಿದ್ದಿರುವ ಘಟನೆಯೊಂದು ಬೆಂಗಳೂರಿನಲ್ಲಿ ವರದಿಯಾಗಿದೆ.ಲಭ್ಯ ಮಾಹಿತಿಯ ಪ್ರಕಾರ, ಬಂಧಿತ ಅರ್ಚಕ ಪ್ರವೀಣ್ ಭಟ್ ಮತ್ತು ಆತನ ಸಹಚರ ಸಂತೋಷ್ ಇಬ್ಬರನ್ನು ಸದ್ಯ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಅಂದರೆ, ಇಲ್ಲಿ ಅರ್ಚಕ ನಾಗಿರುವ ಪ್ರವೀಣ್ ಭಟ್ ಶಿವಮೊಗ್ಗ ಮತ್ತು ಉಡುಪಿಯಲ್ಲಿ ಹಲವು ದೇವಾಲಯಗಳಲ್ಲಿ ಅರ್ಚಕನಾಗಿ ಕೆಲಸ ಮಾಡಿದ್ದ. ಆನಂತರ ಬೆಂಗಳೂರಿಗೆ ಶಿಫ್ಟ್ ಆಗಿದ್ದ. ಇನ್ನೂ ಕಳ್ಳತನ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ಈತನಿಗೆ ಅಲ್ಲಿ ಸಂತೋಷ್ನ ಪರಿಚಯವಾಗಿದೆ. ಜೈಲಿನಿಂದ ಹೊರಬಂದ ಬೆನ್ನಲ್ಲೆ ಇಬ್ಬರು ಸೇರಿ ಬೆಂಗಳೂರಿನ ಹಲವೆಡೆ ಕಳ್ಳತನವೆಸಗಿದ್ದಾರೆ. ದೇವಾಲಯದಲ್ಲಿ ಕಳ್ಳತನ ನಡೆಸಿ, ದೇವರಿಗೆ ಕೈ ಮುಗಿದು ಬರುತ್ತಿದ್ದ ಇವರ ವಿರುದ್ಧ ಬನಶಂಕರಿ ಗಿರಿನಗರ ಠಾಣೆಗಳಲ್ಲಿ ತಲಾ 2 ಪ್ರಕರಣ, ಜಯನಗರ ಕೆ. ಜಿ. ಹಳ್ಳಿ ಕೆಂಗೇರಿ ರಾಜರಾಜೇಶ್ವರಿ ನಗರ ಸಂಪಿಗೆಹಳ್ಳಿ ಸುಬ್ರಹ್ಮಣ್ಯಪುರ ಕುಮಾರಸ್ವಾಮಿ ಲೇಔಟ್ ತಲಘಟ್ಟಪುರ ಜಿಗಣಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ತಲಾ 1 ಪ್ರಕರಣ ಸೇರಿ ಒಟ್ಟಾರೆ 13 ಪ್ರಕರಣಗಳನ್ನು ಭೇದಿಸಲಾಗಿದೆ. ಇನ್ನೂ ಬಂಧಿತರಿಂಧ ₹14 ಲಕ್ಷ ಮೌಲ್ಯದ ಕಳವು ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Priest-Turned-Thief Arrested in Bengaluru for Temple Thefts

