Power Cut in Shikaripura Today ಶಿಕಾರಿಪುರ, malenadutoday news : ಶಿಕಾರಿಪುರ ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿನ ಹಳೆಯ ಕಂಬ ತೆರವುಗೊಳಿಸಿ ಹೊಸದಾದ ಸ್ಟನ್ ಲೈನ್ ಪೋಲ್ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಇವತ್ತು ಅಂದರೆ ಆಗಸ್ಟ್ 13ರ ಬುಧವಾರ ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ಪಟ್ಟಣದ ಹಲವೆಡೆ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತಿಳಿಸಿದೆ.

ಶಿಕಾರಿಪುರದಲ್ಲಿ ಕರೆಂಟ್ ಇರಲ್ಲ
ಕಾನೂರು ಇಂಟರ್‌ನ್ಯಾಷನಲ್ ಹೋಟೆಲ್‌ನಿಂದ ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಆದಿಶಕ್ತಿ ದೇವಸ್ಥಾನ, ಶಾಹಿ ಗಾರ್ಮೆಂಟ್ಸ್ ವರೆಗೆ ಹಾಗೂ ತಿಮ್ಲಾಪುರ, ನಂದಿಹಳ್ಳಿ, ಭದ್ರಾಪುರ, ತರಲಘಟ್ಟ, ದೊಡ್ಡಜೋಗಿ ಹಳ್ಳಿ, ಹಳೇ ದೂಪದಹಳ್ಳಿ, ಹೊಸ ದೂಪದಹಳ್ಳಿ, ತರಲಘಟ್ಟ ಕ್ಯಾಂಪ್ ಹಾಗೂ ತಾಂಡಾ, ಕೆಂಗಟ್ಟೆ, ಗ್ರಾಮ ಹಾಗೂ ಭದ್ರಾಪುರ ಐಪಿ ಲಿಮಿಟ್ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಸಹಕರಿಸುವಂತೆ ಇಲ್ಲಿನ ಮೆಸ್ಕಾಂ ಎಇಇ ಮನವಿ ಮಾಡಿದ್ದಾರೆ.

Power Cut in Shikaripura Today

