ಇವತ್ತಿನ ದಿನಭವಿಷ್ಯ! ಶುಭಕರ, ಧನಲಾಭ, ಸಕರಾತ್ಮಕ ಬದಲಾವಣೆ

ajjimane ganesh

Positive Changes ನವೆಂಬರ್ 22,  2025 : ಮಲೆನಾಡು ಟುಡೆ : ಶಿವಮೊಗ್ಗ ಸೇರಿದಂತೆ ಮಲೆನಾಡಿನ ಸಮಸ್ತರಿಗೂ ಶುಭೋದಯ. ಈ ದಿನದ ಭವಿಷ್ಯ ಹೀಗಿದೆ. ವೃಷಭ, ಮಿಥುನ, ಕನ್ಯಾ ಮತ್ತು ಮಕರ ರಾಶಿಗೆ ಧನಲಾಭ, ಉಳಿದ ರಾಶಿಗಳಿಗೆ ಮಿಶ್ರಫಲ, ಇವತ್ತಿನ ಜಾತಕ ವಿವರವನ್ನು ಗಮನಿಸಸುವುದಾದರೆ, ಇಂದು ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತುವಿನ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ದ್ವಾದಶಿ, ಜೇಷ್ಟ ನಕ್ಷತ್ರದ ಈ ದಿನ ರಾಹುಕಾಲವು ಬೆಳಿಗ್ಗೆ 9.00ರಿಂದ 10.30ರವರೆಗೆ ಮತ್ತು ಯಮಗಂಡ ಕಾಲವು ಮಧ್ಯಾಹ್ನ 1.30ರಿಂದ 3.00ರವರೆಗೆ ಇರಲಿದೆ ಎಂದು ಹಿಂದೂ ಪಂಚಾಂಗವೂ ಹೇಳುತ್ತಿದೆ

ಪಶು ವೈದ್ಯ ಸೇವೆ ತೊರೆದು ದಶಕವೇ ಕಳೆದಿರುವ ನಿವೃತ್ತ ವೈದ್ಯನಿಗೆ ಮತ್ತೆ ಸಕ್ರೆಬೈಲು ಆನೆ ಬಿಡಾರದಲ್ಲಿ ಕೆಲಸ ನೀಡಿದವರು ಯಾರು? ಜೆಪಿ ಬರೆಯುತ್ತಾರೆ.

ಮಲೆನಾಡು ಟುಡೆ ದಿನಭವಿಷ್ಯ/Positive Changes

ಮೇಷ : ಈ ರಾಶಿಯವರಿಗೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಸಹೋದರ ಸಹೋದರಿಯರೊಂದಿಗೆ ವಾಗ್ವಾದ ಆಗಬಹುದು, ಹಣಕಾಸಿನ ವ್ಯವಹಾರಗಳು ನಿರೀಕ್ಷೆಯಂತೆ ಸಾಗದೆ ಬೇಸರ ತರಬಹುದು. ಉದ್ಯೋಗ ಮತ್ತು ವ್ಯಾಪಾರದ ವಿಚಾರದಲ್ಲಿ ಈ ದಿನವು ಸಾಮಾನ್ಯ ಮಟ್ಟದಲ್ಲಿರಲಿದೆ.

ವೃಷಭ : ಹೊಸ ಜನರ ಪರಿಚಯವಾಗಲಿದೆ. ಆರ್ಥಿಕ ಬೆಳವಣಿಗೆ ಕಂಡುಬರಲಿದೆ, ಆದಾಯ ಹೆಚ್ಚಳವಾಗಲಿದೆ. ಶೈಕ್ಷಣಿಕ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು.

ಮರಣ ದಂಡನೆಗೆ ಗುರಿಯಾದ ಅಂತರ್ಧಮೀಯ ಪ್ರೇಮ ವಿವಾಹ ಪ್ರಕರಣ, ಸುಖ ಸಂಸಾರದ ದಾಂಪತ್ಯ ಬದುಕಿನಲ್ಲಿ ನಡೆದದ್ದೇನು? ಜೆಪಿ ಬರೆಯುತ್ತಾರೆ.

ವಸ್ತು ಲಾಭ, ಉದ್ಯೋಗ,ವ್ಯಾಪಾರದಲ್ಲಿ ದಿನಭವಿಷ್ಯ /Positive Changes

ಮಿಥುನ :  ಮಿಥುನ ರಾಶಿಯವರಿಗೆ ಹೊಸ ಉದ್ಯೋಗ ದೊರಕುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವಸ್ತು ಲಾಭ ಪ್ರಾಪ್ತವಾಗಲಿವೆ. ಬಾಲ್ಯದ ಸ್ನೇಹಿತರೊಂದಿಗೆ ದಿನ ಕಳೆಯುವ ಅವಕಾಶ ಸಿಗಲಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ಬದಲಾವಣೆ ಕಂಡುಬರಲಿವೆ.

ಕರ್ಕಾಟಕ:  ಇಂದು ಸಾಲ  ಆಗಬಹುದು. ಕುಟುಂಬದಲ್ಲಿ ಒತ್ತಡ ಉಂಟಾಗಬಹುದು. ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಮಾನಸಿಕ ಗೊಂದಲ ಕಾಡಬಹುದು. ಉದ್ಯೋಗ ಮತ್ತು ವ್ಯಾಪಾರ ನಿಧಾನಗತಿಯಲ್ಲಿ ಸಾಗಲಿವೆ.

ಸಿಂಹ : ದಿಢೀರ್ ಓಡಾಟ ಎದುರಾಗಬಹುದು. ಸಾಲದ ಪ್ರಯತ್ನ, ಕೆಲಸದಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ. ಸಂಬಂಧಿಕರೊಂದಿಗೆ ಕೆಲವು ವಿಚಾರಗಳ ಕುರಿತು ವಾದ ಆಗಬಹುದು. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಮನಸ್ಸು ವಾಲಲಿದೆ. ಉದ್ಯೋಗ ಮತ್ತು ವ್ಯಾಪಾರವು ನಿಧಾನವಾಗಿ ಪ್ರಗತಿಯನ್ನು ಸಾಧಿಸುತ್ತದೆ.

Jp story : ಹಿಂದೂ ಮಹಾಸಭಾ ಗಣಪತಿಯ ಹಿನ್ನಲೆ ಬಗ್ಗೆ ನಿಮಗೆ ಗೊತ್ತಾ…? ಜೆಪಿ ಬರೆಯುತ್ತಾರೆ.

Todays Horoscope November 22 202 Positive Changes for Taurus Gemini Virgo Capricorn
Todays Horoscope November 22 202 Positive Changes for Taurus Gemini Virgo Capricorn

ಧನಲಾಭ, ಅದೃಷ್ಟದ ದಿನ/Positive Changes

ಕನ್ಯಾ :  ಆದಾಯದ ಹಾದಿಯಲ್ಲಿ ಆಶಾದಾಯಕ ಬೆಳವಣಿಗೆ, ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ, ಸ್ನೇಹಿತರೊಂದಿಗೆ ಕಲಹ.  ಮನರಂಜನೆಯಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ವ್ಯಾಪಾರ ಮತ್ತು ಉದ್ಯೋಗದ ವಿಚಾರದಲ್ಲಿ ತೃಪ್ತಿಕರವಾದ ದಿನ

ತುಲಾ : ತುಲಾ ರಾಶಿಯವರಿಗೆ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಅಡೆತಡೆ ಎದುರಾಗಬಹುದು. ಸಾಲ ತೆಗೆದುಕೊಳ್ಳುವ ಸಂದರ್ಭ ಬರಬಹುದು. ಆಲೋಚನೆ ಅಸ್ಥಿರವಾಗಿ ಗೊಂದಲಗಳು ಉಂಟಾಗಬಹುದು. ಕುಟುಂಬದಲ್ಲಿ ಗೊಂದಲಮಯ ವಾತಾವರಣ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಇಂದು ಸಾಮಾನ್ಯ ದಿನವಾಗಿರಲಿದೆ.

ವೃಶ್ಚಿಕ : ಸಂಪರ್ಕ ಇಂದು ಹೆಚ್ಚಾಗಲಿವೆ. ಕೆಲಸ ಸರಿಯಾಗಿ ಪೂರ್ಣಗೊಳ್ಳಲಿವೆ. ವಾಹನಗಳ ಬಳಕೆಗೆ ಅವಕಾಶವಿರುತ್ತದೆ. ಮಾತುಕತೆ ಮತ್ತು ಸಂಧಾನ ಯಶಸ್ವಿಯಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಮುಂದುವರೆದ ಹೆಜ್ಜೆಯನ್ನು ಇಡಲಿದ್ದೀರಿ.

ಧನು :  ಹಣಕಾಸಿನ ವ್ಯವಹಾರ ಸ್ವಲ್ಪ ನಿರಾಸೆ ಮಾಡುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲಸಗಳು ಹೆಚ್ಚಾಗಲಿವೆ. ಕೆಲವು ಪ್ರಮುಖ ಕೆಲಸಗಳು ಮುಂದೂಡಲ್ಪಡುವ ಸಂಭವವಿದೆ. ದೇವಾಲಯಗಳಿಗೆ ಭೇಟಿ ನೀಡುವ ಯೋಗವಿದೆ. ಉದ್ಯೋಗ ಮತ್ತು ವ್ಯಾಪಾರದ ಕುರಿತು ಗೊಂದಲ ಉಂಟಾಗಬಹುದು.

ತ್ಯಾವರೆಕೊಪ್ಪ ಹುಲಿಸಿಂಹಧಾಮ ಪ್ರವಾಸಿಗರ ದೃಷ್ಟಿಯಲ್ಲಿ ಎಷ್ಟು ಸುರಕ್ಷಿತ ? ಜೆಪಿ ಬರೆಯುತ್ತಾರೆ.

Positive Changes/ ಶುಭಕಾರ್ಯ, ದೂರ ಪ್ರಯಾಣ, ಧನಲಾಭ

ಮಕರ :  ಮಕರ ರಾಶಿಯವರಿಗೆ ಹೊಸ ಜನರ ಪರಿಚಯವಾಗಲಿದೆ. ಶುಭ ಸಮಾಚಾರ ಕೇಳಿಬರಲಿವೆ. ಆರ್ಥಿಕ ಅಭಿವೃದ್ಧಿ ಕಂಡುಬರಲಿದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಉದ್ಯಮಿಗಳಿಗೆ ಲಾಭ ದೊರೆಯಲಿದೆ ಮತ್ತು ಉದ್ಯೋಗಿಗಳಿಗೆ ಕೆಲಸದ ಹೊರೆಯಿಂದ ಮುಕ್ತಿ ದೊರೆಯಲಿದೆ

ಕುಂಭ :  ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಹಳೆಯ ಬಾಕಿ ಇದ್ದ ಸಾಲ ಮರಳಿ ಬರುವುದು. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಲಿದೆ. ಮನರಂಜನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯಾಪಾರವು ಸುಗಮವಾಗಿ ನಡೆಯಲಿದೆ.

ಮೀನ :  ಕೆಲಸಗಳಲ್ಲಿ ಅಡೆತಡೆ ಎದುರಾಗಬಹುದು. ಆರ್ಥಿಕ ತೊಂದರೆ ಕಾಡಬಹುದು. ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಒಡಹುಟ್ಟಿದವರಿಂದ ಒತ್ತಡ ಉಂಟಾಗಬಹುದು. ಉದ್ಯೋಗ ಮತ್ತು ವ್ಯಾಪಾರದ ವಿಚಾರದಲ್ಲಿ ದಿನವು ಸಾಮಾನ್ಯವಾಗಿರಲಿದೆ.

Todays Horoscope November 22 202 Positive Changes for Taurus Gemini Virgo Capricorn
Todays Horoscope November 22 202 Positive Changes for Taurus Gemini Virgo Capricorn

ಓದುಗರ ಗಮನಕ್ಕೆ  : ಈ ಜ್ಯೋತಿಷ್ಯ ವರದಿಯು ಗ್ರಹಗಳ ಸ್ಥಾನ ಮತ್ತು ನಕ್ಷತ್ರಗಳ ಆಧಾರದ ಮೇಲೆ ರಚಿತವಾಗಿರುವ ಪಂಚಾಂಗಗಳಲ್ಲಿನ ವಿವರಗಳಿಗೆ ಅನ್ವಯಿಸಿದಂತೆ ಸಾಮಾನ್ಯ ವಿವರನ್ನು ಒಳಗೊಂಡಿದೆ. ಜ್ಯೋತಿಷ್ಯಶಾಸ್ತ್ರವು ವೈಯಕ್ತಿಕ ನಂಬಿಕೆ ಮತ್ತು ಆಸಕ್ತಿಯ ವಿಷಯವಾಗಿದೆ. ಇಲ್ಲಿ ನೀಡಲಾದ ಫಲಿತಾಂಶಗಳು ಜೀವನದಲ್ಲಿ ಸಂಭವಿಸಬಹುದಾದ ಸಾಧ್ಯತೆಗಳ ಸೂಚನೆಯಷ್ಟೇ ಆಗಿವೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪರಿಗಣಿಸುವುದು ಸೂಕ್ತ.  

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಈ ಸುದ್ದಿ ಇಲ್ಲಿಯು ನೋಡಬಹುದು!

Todays Horoscope November 22 202 Positive Changes for Taurus Gemini Virgo Capricorn

Share This Article