political news : ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣುಮುಕ್ಕಿದ್ದಾರೆ | ಬೇಳೂರು ಗೋಪಾಲ್​ ಕೃಷ್ಣ

prathapa thirthahalli
Prathapa thirthahalli - content producer

political news :  ರಾಘವೇಂದ್ರರವರೆ ಯಡಿಯೂರಪ್ಪರವರು ಜೋಗ ಪ್ರಾಧಿಕಾರದ ಬಗ್ಗೆ ಕನಸು ಕಂಡಿದ್ದರು.ಆದರೆ ಅದನ್ನ ಈಡೇರಿಸುವ ಕೆಲಸ ಮಾಡಿಲ್ಲ, ನೀವು ನನ್ನ ಚಸ್ಮಾದ ಬಗ್ಗೆ ಮಾತನಾಡಿದ್ದೀರಿ ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಈಗಾಗಲೇ ಮಣ್ಣುಮುಕ್ಕಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲ್​ ಕೃಷ್ಣ ತಿರುಗೇಟು ನೀಡಿದರು.

ಇಂದು ಶಿವಮೊಗ್ಗದ ಐಬಿಯಲ್ಲಿ ಪತ್ರಿಕಾ ಘೋಷ್ಠಿ ನಡೆಸಿ ಜೋಗಕ್ಕೆ ಕೂಲಿಂಗ್​ ಗ್ಲಾಸ್​​ ಹಾಕಿಕೊಂಡು ಹೋಗಿ ಪೋಸ್​ ಕೊಟ್ಟು ನಮ್ಮ ಯೋಜನೆ ಎನ್ನುತ್ತಿದ್ದಾರೆ ಎಂಬ ಬಿವೈ ರಾಘವೇಂದ್ರರವರ ಹೇಳಿಕೆಗೆ ತಿರುಗೇಟು ಕೊಟ್ಟು ಮಾತನಾಡಿದ ಬೇಳೂರು, ರಾಘವೇಂದ್ರರವರೇ ಎಲ್ಲರು ಕನಸು ಕಾಣುತ್ತಾರೆ. ಜೋಗ ಪ್ರಾಧಿಕಾರವನ್ನು ಚಸ್ಮಾ ತೆಗೆದು ನೋಡಬೇಕೆಂದು ಹೇಳಿದ್ದೀರಿ. ನಾನು ತೆಗೆದು ಮತ್ತು ಹಾಕಿಕೊಂಡೆ ನೋಡಿದ್ದೇನೆ. ಜೋಗ ಅಭಿವೃದ್ದಿಯ ಬಗ್ಗೆ ಯಡಿಯೂರಪ್ಪ ಕನಸು ಕಂಡಿದ್ದರು ಅವರು ಅಂದು ಕೊಂಡಂತೆ ಮಾಡಿದ್ದಾರೆ. ಆದರೆ ಅದನ್ನ ಈಡೇರಿಸುವ ಕೆಲಸ ಸರಿಯಾಗಿ ಮಾಡಿಲ್ಲ.  ಈಗ140 ಕೋಟಿ ಕಾಮಗಾರಿಯಾಗಿದೆ. ರೇನ್ ಡ್ಯಾನ್ಸ್ ನಿಂದ ಹಿಡಿದು ಜಿಪ್ ಲೈನ್ ವರೆಗೂ ಕಾಮಗಾರಿ ಪ್ರಗತಿಯಲ್ಲಿದೆ. ನನ್ನ ಕನ್ನಡಕದ ಬಗ್ಗೆ ಮಾತಾನಾಡಿದವರು ಮಣ್ಣು ಮುಕ್ಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

political news : ಶರಾವತಿ ಮುಳುಗಡೆ ಸಂತ್ರಸ್ತರು ವಿಷ ಕುಡಿಯುವ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಮಧು ಬಂಗಾರಪ್ಪ ತಂಡದ ಪ್ರಯತ್ನದಿಂದ ಸುಪ್ರಿಂ ಕೋರ್ಟ್​ ಸರ್ವೆ ಮಾಡಲು ಆದೇಶಿಸಿದೆ. ನಿಮ್ಮ ಸರ್ಕಾರವಿದ್ದಾಗ  ಹಿಂದುಳಿದ ವರ್ಗದವರಿಗೆ ಹಕ್ಕು ಪತ್ರ ಕೊಡಿಸಲು ಮನಸ್ಸು ಮಾಡಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಸಂತ್ರಸ್ಥರಿಗೆ ಹಕ್ಕು ಪತ್ರ ಕೊಡಿಸುವ ಕೆಲಸವಾಗುತ್ತಿದೆ. ಮಧು ಬಂಗಾರಪ್ಪ ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು

political news : ಯಡಿಯೂರಪ್ಪರವರನ್ನು ಜೈಲಿಗೆ ಕಳುಹಿಸಿದವರು ನಮಗೆ ಪಾಠ ಮಾಡುತ್ತಾರೆ

ಡೂಪ್ಲಿಕೇಟ್​ ಸಹಿ ಮಾಡಿ ಯಡಿಯೂರಪ್ಪ ರನ್ನ ಜೈಲಿಗೆ ಕಳುಹಿಸುವುದವರು ನಮಗೆ ಪಾಠ ಮಾಡುತ್ತಾರೆ. ಅವರ ಒಡೆತನದ ಕಾಲೇಜು ಕೂಡ ಈಗ ಅರಣ್ಯ ಪ್ರದೇಶಕ್ಕೆ ಸೇರಿದೆ ಎಂಬ ದಾಖಲೆ ಲಭ್ಯವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು. ಶಾಹಿ ಗಾರ್ಮೆಂಟ್ ಕಾರ್ಖಾನೆ ಗೆ ಅಕ್ರಮವಾಗಿ ಹೆಚ್ಚುವರಿಯಾಗಿ ಭೂಮಿ ನೀಡಲಾಗಿದೆ. ಅದನ್ನ ಹಿಂಪಡೆಯಬೇಕು ಎಂದರು.

ಯಡಿಯೂರಪ್ಪ ಕಾಂಗ್ರೆಸ್ ಮುಗಿಸುತ್ತೆನೆಂಬ ಹೇಳಿಕೆಗೆ ತಿರುಗೇಟು ಕೊಟ್ಟ ಬೇಳೂರು ನಿಮ್ಮ ಮಕ್ಕಳನ್ನು ಬಿಜೆಪಿಯವರೆ ಮುಗಿಸಲು ಹೊರಟಿದ್ದಾರೆ. ನೀವು ಹಿರಿಯರು. ಗೌರವಿಸುತ್ತೇನೆ. ಕಾಂಗ್ರಸ್ ಸರ್ಕಾರ ಗಟ್ಟಿಯಾಗಿದೆ. ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದರು.

 

Share This Article