political news shivamogga ಜಾತಿಗಣತಿ ಜಾರಿಗೆ ತರಲು ಆಗದಿದ್ದರೆ ಸಿಎಂ ಸ್ಥಾನಕ್ಕೆ ರಾಜನಾಮೆ ನೀಡಿ | ಸಿಎಂ ಸಿದ್ದರಾಮಯ್ಯರಿಗೆ ಪತ್ರಬರೆದ ಕೆ.ಎಸ್.​ಈ

prathapa thirthahalli
Prathapa thirthahalli - content producer

political news shivamogga ಸಿಎಂ ಸಿದ್ದರಾಮಯ್ಯರಿಗೆ ಮುಖ್ಯಮಂತ್ರಿ ಸ್ಥಾನವನ್ನ ಪಣಕ್ಕಿಟ್ಟು ಸವಾಲು ಸ್ವೀಕರಿಸಿ ಜಾತಿಗಣತಿಯನ್ನ ಜಾರಿ ತನ್ನಿ,ಜಾರಿಗೆ ತರಲು ಆಗಲ್ಲ ಎಂದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಪತ್ರವನ್ನು ಬರೆದಿದ್ದೇನೆ ಎಂದು ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಹೇಳಿದರು.

ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಹಿಂದುಳಿದವರನ್ನು  ದಲಿತರನ್ನು ಬೆದರುಗೊಂಬೆ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಇದರಿಂದ ರಾಜ್ಯದ ದಲಿತರಿಗೆ,ಹಿಂದುಳಿದವರಿಗೆ ಸಿಎಂ ಸಿದ್ದರಾಮಯ್ಯ  ದೋಹ ಮಾಡಿದ್ದಾರೆ. ರಾಜ್ಯದಲ್ಲಿ ಜಾತಿಗಣತಿಯನ್ನ ಜಾರಿಗೆ ತರಲೇ ಬೇಕು. ಇಲ್ಲ ನಾವು ಇದರ ವಿರುದ್ದ  ಹೋರಾಟ ಮಾಡುತ್ತೇವೆ ಕೇಂದ್ರದ ನಾಯಕರಿಗೆ ಒತ್ತಡ ಹಾಕಿ ಜಾತಿಗಣತಿ ಜಾರಿಗೆ ತರುತ್ತೇನೆ ಅಂತ ಸಿಎಂ ಹೇಳಬೇಕು.ಸಿದ್ದ ಇರುವ ವರದಿಯನ್ನ ಜಾರಿಗೆ ತರಲು ಏನು ಕಷ್ಟ ಇವರಿಗೆ ಎಂಬುಂದು ತಿಳಿದಿಲ್ಲ ಎಂದು 

- Advertisement -

political news shivamogga  ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿ ನಂತರ ಅದನ್ನು ಚರ್ಚೆಗೆ ತರಬೇಕು. ಅಧಿಕಾರ ಕಳೆದುಕೊಳ್ಳುವ ದೃಷ್ಟಿಯಿಂದ ಹಿಂದುಳಿದ ವರ್ಗದವರಿಗೆ ದ್ರೋಹ ಮಾಡಿದರೆ, ಅವರ ಶಾಪದಿಂದ ಸಿಎಂ ಮುಂದೊಂದು ದಿನ ತಮ್ಮ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಕೆ ಎಸ್​ ಈಶ್ವರಪ್ಪ ಎಚ್ಚರಿಸಿದರು. ದಲಿತರು ಮತ್ತು ಹಿಂದುಳಿದವರ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಅವರನ್ನು ಕಡೆಗಣಿಸಿದೆ. ಸಿಎಂ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಸಿದ್ದರಾಮಯ್ಯ ದಲಿತರನ್ನು ಬಲಿ ಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

political news shivamogga ಪಕ್ಷ ಶುದ್ದೀಕರಣ ಆಗದ ಹೊರತು ಬಿಜೆಪಿಗೆ ಹೋಗಲ್ಲ

ಈ ಬಾರಿ ರಾಷ್ಟ್ರಭಕ್ತರ ಬಳಗ 35 ಪಾಲಿಕೆ ವಾರ್ಡ್ ಗಳಲ್ಲಿ  ಸ್ಪರ್ಧೆ ಮಾಡುತ್ತದೆ.ಪಾಲಿಕೆ ವಾರ್ಡ್ ನಲ್ಲಿ ರಾಷ್ಟ್ರಭಕ್ತರ ಬಳಗ ಸ್ಪಷ್ಟ ಬಹುಮತ ಪಡೆಯುತ್ತೆ ಎಂಬ ನಂಬಿಕ ಇದೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ನನಗೆ ಕರೆ ಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದರು. ರಾಜ್ಯದ ಅಧಿಕಾರ ಕೊಡುತ್ತೇನೆ ಎಂದಿದ್ದರು.ಕಾಂಗ್ರೆಸ್ ನವರು ಸಹ ಪಕ್ಷಕ್ಕೆ ಬರುವಂತೆ ಕರೆದಿದ್ದರು.ಆದರೆ ಕುತ್ತಿಗೆ ಕೋಯ್ದರು ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷಕ್ಕೂ ನಾನು ಹೋಗಲ್ಲ. ಇತ್ತೀಚೆಗೆ ಯಡಿಯೂರಪ್ಪನವರ ಮೊಮ್ಮಗನ ಆರತಕ್ಷತೆಗೆ ಹೋದಾಗ ನಾನು ಬಿಜೆಪಿಗೆ ಹೋಗುತ್ತೇನೆ ಎಂಬ ಮಾತುಗಳು ಕೇಳಿ ಬಂದವು. ಸ್ನೇಹ ಬೇರೆ, ರಾಜಕಾರಣ ಬೇರೆ, ಬಿಎಸ್​ವೈ ನನ್ನ ಅಣ್ಣ ಇದ್ದ ಹಾಗೆ.ಇಂದಲ್ಲ ನಾಳೆ ಬಿಜೆಪಿ ಪಕ್ಷ ಶುದ್ದೀಕರಣ ಆಗೇ ಆಗುತ್ತೆ.  ಪಕ್ಷ ಶುದ್ದೀಕರಣ ಆಗದ ಹೊರತು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *