Police station : ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ 3 ಹಸುಗಳು ಕಳುವು
ಭದ್ರಾವತಿ : ತಾಲ್ಲೂಕಿನ ನ್ಯೂಟೌನ್ ಪೊಲೀಸ್ ಠಾಣೆಯ ಲಿಮಿಟ್ಸ್ನಲ್ಲಿ ಮೂರು ಹಸುಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ರಾತ್ರಿ ದನಗಳಿರುವುದನ್ನು ಖಾತರಿಪಡಿಸಿಕೊಂಡು ಮಲಗಿದ್ದ ಮನೆಯವರು ಬೆಳಗ್ಗೆ ಎದ್ದು ನೋಡಿದಾಗ ಹಸುಗಳು ನಾಪತ್ತೆಯಾಗಿದ್ದವು.
ಮನೆ ಬಳಿಯಲ್ಲಿಯೇ ಕಟ್ಟಿಹಾಕಿದ್ದ ದನಗಳನ್ನ ಕಳವು ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನ್ಯೂಟೌನ್ ಸ್ಟೇಷನ್ ಲಿಮಿಟ್ಸ್ನ ಜಿಂಕ್ ಲೈನ್ ರಸ್ತೆಯಲ್ಲಿ ಆಟೋ ಚಾಲಕ ನಾಗೇಶ್ ಎಂಬುವರಿಗೆ ಸೇರಿದ ಹಸುಗಳು ಕಾಣೆಯಾಗಿವೆ, ಆಗಸ್ಟ್ 19 ರ ಬೆಳಗಿನ ಜಾವ ಮೂರೂ ಹಸುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಗೊತ್ತಾಗಿದ್ದು, ಕಳುವಾಗಿರುವ ಹಸುಗಳ ಪೈಕಿ ಎರಡು ಹಸುಗಳು ಗಬ್ಬ ಕಟ್ಟಿದ್ದವು. ಜರ್ಸಿ ಮತ್ತು ಎಚ್‌ಎಫ್ ತಳಿಯ ಕಳ್ಳತನದ ಬಗ್ಗೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಘಟನೆಯಿಂದ ರೈತ ಕುಟುಂಬಕ್ಕೆ ಆರ್ಥಿಕವಾಗಿ ದೊಡ್ಡ ನಷ್ಟವಾಗಿದ್ದು, ಕಳ್ಳರನ್ನು ಪತ್ತೆ ಹಚ್ಚುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.