ಡಿಜೆ ಸೌಂಡ್​ಗೆ ಅಸ್ವಸ್ಥರಾದ ಪೊಲೀಸ್ ಅಧಿಕಾರಿ

ajjimane ganesh

ಮಲೆನಾಡು ಟುಡೆ ಸುದ್ದಿ, ಸೊರಬ, ಸೆಪ್ಟೆಂಬರ್ , 2025  :  ಜಿಲ್ಲೆಯ ಸೊರಬ ತಾಲ್ಲೂಕಿನ ನಡೆದ ಘಟನೆಯೊಂದು ಆಘಾತ ಮೂಡಿಸುತ್ತಿದೆ. ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಡಿ.ಜೆ. ಸದ್ದಿನ ಅಬ್ಬರಕ್ಕೆ, ಡ್ಯೂಟಿಯಲ್ಲಿದ್ದ  ಇನ್ಸ್‌ಪೆಕ್ಟರ್ ಇಬ್ಬರು ಸ್ಥಳದಲ್ಲಿಯೇ ಕುಸಿದು ಬಿದ್ದ ಘಟನೆಯ ದೃಶ್ಯವೊಂದು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಗುರುವಾರದ್ದ ಎಂದು ಹೇಳಲಾಗುತ್ತಿದ್ದು,  ಸೊರಬ ಮುಖ್ಯರಸ್ತೆಯಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ. ಸೌಂಡ್​ ಸಿಸ್ಟಮ್​ನ ಬೇಸ್‌ ಹೆಚ್ಚಿಸಿದ್ದರಿಂದ ಅಲ್ಲಿಯೇ ಸ್ಪೀಕರ್ ಬಳಿ ನಿಂತಿದ್ದ  ಇನ್ಸ್‌ಪೆಕ್ಟರ್ ರಾಜಶೇಖರ್ ಅವರ ರಕ್ತದೊತ್ತಡ ಹೆಚ್ಚಾಗಿ ಕಿವಿಗೆ ತೊಂದರೆಯಾಗಿ ಅಸ್ವಸ್ಥರಾಗಿದ್ದಾರೆ. ಈ ಬಗ್ಗೆ  ಎಸ್‌ಪಿ ಜಿ.ಕೆ. ಮಿಥುನ್‌ಕುಮಾರ್ ಮಾದ್ಯಮವೊಂದಕ್ಕೆ ಮಾಹಿತಿ  ನೀಡಿದ್ದಾರೆ. 

Police Officer Collapses
Police Officer Collapses

ವಿಡಿಯೋದಲ್ಲಿರುವಂತೆ ರಾಜಶೇಖರ್ ಗಣಪತಿ ಸೇವಾ ಸಮಿತಿಯವರಿಗೆ ಏನೋ ಹೇಳುತ್ತಿರುತ್ತಾರೆ. ಆನಂತರ ಇದ್ದಕ್ಕಿದ್ದಹಾಗೆ ಅವರ ಆರೋಗ್ಯದಲ್ಲಿ ವತ್ಯಾಸವಾಗುತ್ತದೆ. ಅವರಿಗೆ ನಿಲ್ಲಲು ಆಗದೇ ಕುಸಿದು ಬೀಳುತ್ತಾರೆ. ಅಷ್ಟರಲ್ಲಿ ಅಲ್ಲಿದ್ದವರು ಅಧಿಕಾರಿಯವರನ್ನ ಹಿಡಿದುಕೊಳ್ಳುತ್ತಾರೆ. ಅಲ್ಲದೆ ಅಲ್ಲಿಯೇ ಇದ್ದ ಇನ್ನೊಬ್ಬ ಪೊಲೀಸ್ ಅಧಿಕಾರಿ ಓಡಿ ಬಂದು ರಾಜಶೇಖರ್​ರವರನ್ನ ಹಿಡಿದುಕೊಳ್ಳುತ್ತಾರೆ. ಘಟನೆ ಬೆನ್ನಲ್ಲೆ  ಇನ್​ಸ್ಪೆಕ್ಟರ್​ರವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗಕ್ಕೆ ಕಳುಹಿಸಿದ್ದು, ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿದೆ. ಇನ್ನೂ ಈ ಸಂಬಂಧ ಗಣಪತಿ ಮೆರವಣಿಗೆ ಸಂಘಟಕರ ವಿರುದ್ಧ ಎಫ್​ಐಆರ್ ಸಹ ದಾಖಲಾಗುತ್ತಿದೆ. 

- Advertisement -

 

View this post on Instagram

 

A post shared by KA on line (@kaonlinekannada)

Police Officer Collapses Due to DJ Noise at Ganesha procession in Soraba,

Soraba Ganesha procession, Police officer collapses, loud DJ noise, traffic police, Shivamogga, DJ music rules, Rajasekhar, Book Ganesha procession DJs,Soraba DJ news, ಸೊರಬ, ಡಿಜೆ ಸದ್ದು, ಪೊಲೀಸ್ ಅಧಿಕಾರಿ, ಕುಸಿದು ಬಿದ್ದ, ಗಣೇಶ ವಿಸರ್ಜನೆ, ಶಿವಮೊಗ್ಗ, Soraba, DJ noise, police officer, 

car decor new

Share This Article
Leave a Comment

Leave a Reply

Your email address will not be published. Required fields are marked *